ಮತ್ತೊಂದು ಬಲಿಗಾಗಿ ಕಾಯುತ್ತಿದೆ ಕೆಅರ್ ಸರ್ಕಲ್ ಅಂಡರ್ಪಾಸ್, ಪಾಲಿಕೆ ಅಧಿಕಾರಿಗಳಿಗೆ ಮಳೆಯಲ್ಲೂ ನಿದ್ರೆ!
ಸುಮಾರು ಎರಡು ವರ್ಷಗಳ ಹಿಂದೆ ಒಬ್ಬ ಆಂಧ್ರ ಪ್ರದೇಶ ಮೂಲದ ಮಹಿಳೆ ಇದೇ ಅಂಡರ್ಪಾಸ್ನಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದರು. ಆದರೆ ಪಾಲಿಕೆ ಅಧಿಕಾರಿಗಳು ಮಾತ್ರ ಇದನ್ನು ದುರಸ್ತಿ ಮಾಡಿ ನೀರು ಶೇಖರಣೆಗೊಳ್ಳದೆ ಸರಾಗವಾಗಿ ಹರಿದುಹೋಗುವ ವ್ಯವಸ್ಥೆಯನ್ನು ಮಾಡಿಲ್ಲ. ‘ಏನ್ ರೋಡ್ ಗುರೂ?’ ಸರಣಿ ಕಾರ್ಯಕ್ರಮ ನೋಡಿ ನಗರ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ರಸ್ತೆಗಿಳಿದರೂ ಪಾಲಿಕೆ ಅಧಿಕಾರಿಗಳಿಗೆ ಕ್ಯಾರಿಲ್ಲ.
ಬೆಂಗಳೂರು, ಆಗಸ್ಟ್ : ಟಿವಿ9 ಕನ್ನಡ ವಾಹಿನಿಯ ‘ಏನ್ ರೋಡ್ ಗುರೂ?’ ಕಾರ್ಯಕ್ರಮವನ್ನು ಕೇವಲ ಬೆಂಗಳೂರು ನಿವಾಸಿಗಳು ಮಾತ್ರ ಅಲ್ಲ, ಕರ್ನಾಟಕದಾದ್ಯಂತ ನೋಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ನಾವು ‘ಏನ್ ಅಂಡರ್ಪಾಸ್ ಗುರೂ?’ ಅಂತ ಸರಣಿ ಕಾರ್ಯಕ್ರಮ ಶುರುಮಾಡಿದರೆ ಆಶ್ಚರ್ಯಪಡಬೇಡಿ. ನಗರದಲ್ಲಿರುವ ಅಂಡರ್ಪಾಸ್ಗಳು (underpass) ಒಂದಕ್ಕಿಂತ ಒಂದು ಹದಗೆಟ್ಟಿವೆ ಮತ್ತು ಮೃತ್ಯುಕೂಪಗಳಂತೆ ಬಾಯಿ ತೆರೆದು ಬಲಿಗಾಗಿ ಕಾಯುತ್ತಿವೆ. ಕೆಆರ್ ಸರ್ಕಲ್ನಲ್ಲಿರುವ ಈ ಅಂಡರ್ಪಾಸ್ ಗಮನಿಸಿ. ಕೇವಲ 10 ನಿಮಿಷ ಸುರಿದ ಮಳೆಗೆ ಅಂಡರ್ಪಾಸ್ನಲ್ಲಿ ನೀರು ಶೇಖರಣೆಗೊಂಡು ಜನ ಆ ಕಡೆಯಿಂದ ಈ ಕಡೆಗೆ ಬರದಂಥ ಸ್ಥಿತಿಯನ್ನು ನಿರ್ಮಿಸಿದೆ. ಇಲ್ಲೊಂದು ದ್ವಿಚಕ್ರವಾಹನ ಸಿಕ್ಕಿಹಾಕಿಕೊಂಡಿತಂತೆ, ನಮ್ಮ ಟೀಮಿನವರೇ ಅದನ್ನು ಸುರಕ್ಷಿತ ಸ್ಥಳಕ್ಕೆ ದೂಡಿದ್ದಾರೆ ಅಂತ ಟಿವಿ9 ವರದಿಗಾರ ಹೇಳುತ್ತಾರೆ.
ಇದನ್ನೂ ಓದಿ: ವಿಜಯನಗರ ಅಂಡರ್ಪಾಸ್ನಲ್ಲಿ ಬಿಎಂಟಿಸಿಯ ಈವಿ ಬಸ್ ಅಪಘಾತ ನಡೆಸಿದ ದೃಶ್ಯ ಕಾರಿನ ಡ್ಯಾಶ್ಕಾಮ್ನಲ್ಲಿ ಸೆರೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
