ಕೊನೆಯ 11 ಎಸೆತಗಳಲ್ಲಿ 7 ಸಿಕ್ಸರ್, 2 ಬೌಂಡರಿ ಬಾರಿಸಿದ ಸಮೀರ್ ರಿಜ್ವಿ; ವಿಡಿಯೋ ನೋಡಿ
Samir Rizvi's Blitz: ಯುಪಿ ಪ್ರೀಮಿಯರ್ ಲೀಗ್ 2025 ರಲ್ಲಿ ಕಾನ್ಪುರ್ ಸೂಪರ್‌ಸ್ಟಾರ್ಸ್ ತಂಡದ ನಾಯಕ ಸಮೀರ್ ರಿಜ್ವಿ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಲಕ್ನೋ ಫಾಲ್ಕನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 32 ಎಸೆತಗಳಲ್ಲಿ ಅಜೇಯ 76 ರನ್ ಗಳಿಸಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಅದರಲ್ಲೂ ಕೊನೆಯ 11 ಎಸೆತಗಳಲ್ಲಿ 7 ಸಿಕ್ಸರ್‌ಗಳನ್ನು ಬಾರಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಯುಪಿ ಪ್ರೀಮಿಯರ್ ಲೀಗ್ 2025 ರಲ್ಲಿ ಸಮೀರ್ ರಿಜ್ವಿ ಅವರ ಬ್ಯಾಟ್ ಅಬ್ಬರಿಸುತ್ತಿದೆ. ಈ ಲೀಗ್ನಲ್ಲಿ ಕಾನ್ಪುರ್ ಸೂಪರ್‌ಸ್ಟಾರ್ಸ್ ತಂಡದ ನಾಯಕತ್ವವಹಿಸಿಕೊಂಡಿರುವ ಸಮೀರ್ ಮತ್ತೊಮ್ಮೆ ಸಿಕ್ಸರ್ ಮತ್ತು ಬೌಂಡರಿಗಳ ಮಳೆಗರೆದರು. ಇಂದು ನಡೆದ ಲಕ್ನೋ ಫಾಲ್ಕನ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಸಮೀರ್ ರಿಜ್ವಿ ಕೇವಲ 32 ಎಸೆತಗಳಲ್ಲಿ ಅಜೇಯ 76 ರನ್ ಗಳಿಸಿ ತಂಡಕ್ಕೆ 8 ವಿಕೆಟ್‌ಗಳ ಗೆಲುವು ತಂದುಕೊಟ್ಟರು. 163 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕಾನ್ಪುರ್ ತಂಡವು ಸಮೀರ್ ಅವರ ಸಿಡಿಲಬ್ಬರದ ಬ್ಯಾಟಿಂಗ್ನಿಂದಾಗಿ ಕೇವಲ 15.4 ಓವರ್‌ಗಳಲ್ಲಿ ಗುರಿ ತಲುಪಿತು.
11 ಎಸೆತಗಳಲ್ಲಿ 7 ಸಿಕ್ಸರ್
ಸಮೀರ್ ರಿಜ್ವಿ ಬ್ಯಾಟಿಂಗ್‌ಗೆ ಬಂದಾಗ ನಿಧಾನವಾಗಿ ಆಟ ಆರಂಭಿಸಿದರು. ಹೀಗಾಗಿ ಮೊದಲ 15 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿದರು, ಆದರೆ ನಂತರ ಲಕ್ನೋದ ಬೌಲರ್‌ಗಳ ಮೆಲೆ ಪ್ರಹಾರ ಶುರು ಮಾಡಿದ ಸಮೀರ್ ರಿಜ್ವಿ ಮುಂದಿನ 17 ಎಸೆತಗಳಲ್ಲಿ 9 ಸಿಕ್ಸರ್‌ಗಳನ್ನು ಬಾರಿಸಿದರು. ದೊಡ್ಡ ವಿಷಯವೆಂದರೆ ಅವರು ಕೊನೆಯ 11 ಎಸೆತಗಳಲ್ಲಿ 7 ಸಿಕ್ಸರ್‌ಗಳು ಮತ್ತು 2 ಬೌಂಡರಿಗಳನ್ನು ಬಾರಿಸಿದರು. ಸಮೀರ್ ರಿಜ್ವಿ ಕೊನೆಯವರೆಗೂ ಅಜೇಯರಾಗಿ ಉಳಿದು ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟ ನಂತರವೇ ಮರಳಿದರು.
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

