ಟೆಕ್ಕಿ ಶಿಲ್ಪಾ ತಾನಾಗೇ ಸಾವಿಗೆ ಶರಣಾಗಿಲ್ಲ, ಗಂಡನ ಮನೆಯವರು ವರದಕ್ಷಿಣೆಗಾಗಿ ಕೊಂದಿದ್ದಾರೆ: ಸೌಮ್ಯ, ಶಿಲ್ಪಾ ತಂಗಿ
ಶಿಲ್ಪಾ ಹುಬ್ಬಳ್ಳಿ ಮೂಲದವರು, ಅಕೆಯ ಪೋಷಕರು ಶಾರದ ಮತ್ತ ಬಸ್ಸಯ್ಯ ಮನೆ ಮಾರಿ $ 50 ಲಕ್ಷ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದರು, ಮಗಳ ಮೈಮೇಲೆ 150 ಗ್ರಾಂ ಚಿನ್ನ ಕೂಡ ಹಾಕಿದ್ದರು. ಚಾಟ್ಸ್ ಅಂಗಡಿ ಓಪನ್ ಮಾಡಲು ಪ್ರವೀಣ್ ಪ್ರತಿದಿನ ಶಿಲ್ಪಾಳನ್ನು ಹಿಂಸಿಸುತ್ತಿದ್ದ ಎಂದು ಸೌಮ್ಯ ಹೇಳುತ್ತಾರೆ. ಶಿಲ್ಪಾಳ ಅತ್ತೆ, ಸೊಸೆಯನ್ನು ನೀನು ಕಪ್ಪು, ಕುಳ್ಳಿ ಅಂತೆಲ್ಲ ಹೀಯಾಳಿಸುತ್ತಿದ್ದರು ಎಂದು ಸೌಮ್ಯ ಹೇಳುತ್ತಾರೆ.
ಬೆಂಗಳೂರು, ಆಗಸ್ಟ್ 28: ಮತ್ತೊಂದು ವರದಕ್ಷಿಣೆ ಸಾವು ಬೆಂಗಳೂರಲ್ಲಿ ನಡೆದಿದೆ. ಬಿಟೆಕ್ ಓದಿ ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 26-ವರ್ಷ ವಯಸ್ಸಿನ ಶಿಲ್ಪಾಳ (Shilpa) ಶವ ಅಕೆಯ ಗಂಡನ ಮನೆಯಲ್ಲಿ ಹಾಸಿಗೆ ಮೇಲೆ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶಿಲ್ಪಾಳ ಗಂಡನ ಮನೆಯವರು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳುತ್ತಿದ್ದರೆ ಅವರ ಮಾತನ್ನು ಶಿಲ್ಪಾ ತಂದೆ ತಾಯಿ ಮತ್ತು ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಸಹೋದರಿ ಸೌಮ್ಯ ನಂಬಲು ತಯಾರಿಲ್ಲ. ಸೌಮ್ಯ ಹೇಳುವಂತೆ ಮೂರು ವರ್ಷದ ಹಿಂದೆ ಬೆಂಗಳೂರು ಬಿಟಿಎಂ ಲೇಔಟ್ ನಿವಾಸಿ ಪ್ರವೀಣ್ ಎನ್ನುವವನ ಜೊತೆ ಶಿಲ್ಪಾರನ್ನು ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲಿ ಪ್ರವೀಣ್ ಸಾಫ್ಟ್ ವೇರ್ ಎಂಜಿನೀಯರ್ ಅಂತ ಹೇಳಿದ್ದರಂತೆ, ಅದರೆ ಅವನು ಪಾನು ಪೂರಿ ಅಂಗಡಿ ನಡೆಸುತ್ತಾನಂತೆ. ಒಂದು ಮಗುವಿನ ತಾಯಿಯಾಗಿದ್ದ ಶಿಲ್ಪಾ ಎರಡನೇ ಬಾರಿ ಗರ್ಭಧರಿಸಿ ಒಂದೂವರೆ ತಿಂಗಳಾಗಿತ್ತು. ತನ್ನಕ್ಕ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅವಳನ್ನು ಕೊಲ್ಲಲಾಗಿದೆ ಎಂದು ಸೌಮ್ಯ ಹೇಳುತ್ತಾರೆ.
ಇದನ್ನೂ ಓದಿ: ವರದಕ್ಷಿಣೆ ಕಿರುಕುಳ, ಶಾರ್ಜಾದಲ್ಲಿ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

