ಸಚಿನ್ ಪ್ರಕರಣದಲ್ಲಿ ಅಂತರರಾಜ್ಯ ಸುಪಾರಿ ಹಂತಕರ ಅಂಶ ಬೆಳಕಿಗೆ, ತನಿಖೆ ಸಿಬಿಐನಿಂದ ಆಗಬೇಕು: ನಾರಾಯಣಸ್ವಾಮಿ

|

Updated on: Dec 31, 2024 | 2:31 PM

ಆ ಭಾಗದ ಸಚಿವ ಈಶ್ವರ್ ಖಂಡ್ರೆಯವರು ಸಚಿನ್ ಕುಟುಂಬವನ್ನು ಮಾತಾಡಿಸಲು ಹೋದಾಗ ಪರಿವಾರದವರು ಅವರನ್ನು ಒಳಗೆ ಬರಗೊಟ್ಟಿರಲಿಲ್ಲ, ಆದರೆ ಬಿವೈ ವಿಜಯೇಂದ್ರ, ರವಿಕುಮಾರ್ ಮತ್ತು ತಾನು ಹೋದಾಗ ಅವರು ಬರಮಾಡಿಕೊಂಡರು, ಅವರಿಗೆ ನ್ಯಾಯ ಮಾತ್ರ ಬೇಕಾಗಿದೆ, ಸ್ಥಳೀಯ ಮುಖಂಡರು ಮತ್ತು ತಾವೆಲ್ಲ ಸೇರಿ ಸಂಗ್ರಹಿಸಿದ ₹ 10ಲಕ್ಷ ಹಣವನ್ನು ಸಚಿನ್ ಕುಟುಂಬ ಮುಟ್ಟಲಿಲ್ಲ ಎಂದು ನಾರಾಯಣಸ್ವಾಮಿ ಹೇಳಿದರು.

ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಆಪ್ತರ ಕಿರುಕುಳಕ್ಕೆ ಬೇಸತ್ತು ಭಾಲ್ಕಿಯ ಗುತ್ತೇದಾರ ಸಚಿನ್ ಪಾಂಚಾಳ್ ಸಾವಿಗೆ ಶರಣಾದ ಎಂಬ ಆರೋಪದ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ವಿಧಾನ ಪರಿಷತ್​ನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಚಲವಾದಿ ನಾರಾಯಣಸ್ವಾಮಿ ಹೇಳಿದರು. ಪ್ರಕರಣದಲ್ಲಿ ಸಚಿನ್ ಸಾವಲ್ಲದೆ, ಸುಪಾರಿ ಹತ್ಯೆ ಮತ್ತು ಹನಿಟ್ರ್ಯಾಪ್ ಅಂಶಗಳೂ ಬೆಳಕಿಗೆ ಬಂದಿವೆ, ಸುಪಾರಿ ಹಂತಕರು ನೆರೆರಾಜ್ಯ ಮಹಾರಾಷ್ಟ್ರದವರು ಎಂದು ಹೇಳಲಾಗುತ್ತಿರುವುದರಿಂದ ಇದು ಅಂತರರಾಜ್ಯ ಪ್ರಕರಣವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಓಡಿಗೆ ಒಪ್ಪಿಸುವುದು ಸರಿಯೆನಿಸಲಾರದು, ಸಿಬಿಐ ಮಾತ್ರ ಸತ್ಯಾಂಶವನ್ನು ಬಯಲಿಗೆಳೆಯುವಲ್ಲಿ ಸಫಲವಾಗಲಿದೆ ಎಂದು ನಾರಾಯಣಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಗುತ್ತಿಗೆದಾರ ಸಚಿನ್ ಪಾಂಚಾಳ್​ರದ್ದು ಸರ್ಕಾರಿ ಯೋಜಿತ ಆತ್ಮಹತ್ಯೆ: ಬಿವೈ ವಿಜಯೇಂದ್ರ ಆರೋಪ