Video: ಕಾನ್ಪುರ ಆಸ್ಪತ್ರೆಯಲ್ಲಿ ವೈದ್ಯರ ಐಫೋನ್ ಕದ್ದ ಕಳ್ಳ 60 ನಿಮಿಷಗಳಲ್ಲೇ ಸಿಕ್ಕಿಬಿದ್ದ
ಕುಂಟುತ್ತ ಕುಂಟುತ್ತಲೇ ಕಳ್ಳನೊಬ್ಬ ವೈದ್ಯೆಯ ಕೋಟ್ನಲ್ಲಿದ್ದ ಫೋನ್ ಕದ್ದಿರುವ ಘಟನೆ ಕಾನ್ಪುರ ಆಸ್ಪತ್ರೆಯಲ್ಲಿ ವರದಿಯಾಗಿದೆ. ಉತ್ತರ ಪ್ರದೇಶದ ಕಾನ್ಪುರದ ಹ್ಯಾಲೆಟ್ ಆಸ್ಪತ್ರೆಯಲ್ಲಿ ನಡೆದ ಈ ಘಟನೆ ಕ್ಯಾಮೆರಾದಲ್ಲಿ ದಾಖಲಾಗಿದೆ. ಪೊಲೀಸರು 60 ನಿಮಿಷಗಳಲ್ಲಿ ಆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆಗಸ್ಟ್ 20 ರಂದು, ಮೊಹಮ್ಮದ್ ಫೈಜ್ ಎಂಬ ವ್ಯಕ್ತಿಯೊಬ್ಬ ಕಾನ್ಪುರದ ಹ್ಯಾಲೆಟ್ ಆಸ್ಪತ್ರೆಯಲ್ಲಿ ವೈದ್ಯರ ಐಫೋನ್ ಕದ್ದಿದ್ದ.
ಕಾನ್ಪುರ, ಆಗಸ್ಟ್ 25: ಕುಂಟುತ್ತ ಕುಂಟುತ್ತಲೇ ಕಳ್ಳನೊಬ್ಬ ವೈದ್ಯೆಯ ಕೋಟ್ನಲ್ಲಿದ್ದ ಫೋನ್ ಕದ್ದಿರುವ ಘಟನೆ ಕಾನ್ಪುರ ಆಸ್ಪತ್ರೆಯಲ್ಲಿ ವರದಿಯಾಗಿದೆ. ಉತ್ತರ ಪ್ರದೇಶದ ಕಾನ್ಪುರದ ಹ್ಯಾಲೆಟ್ ಆಸ್ಪತ್ರೆಯಲ್ಲಿ ನಡೆದ ಈ ಘಟನೆ ಕ್ಯಾಮೆರಾದಲ್ಲಿ ದಾಖಲಾಗಿದೆ. ಪೊಲೀಸರು 60 ನಿಮಿಷಗಳಲ್ಲಿ ಆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆಗಸ್ಟ್ 20 ರಂದು, ಮೊಹಮ್ಮದ್ ಫೈಜ್ ಎಂಬ ವ್ಯಕ್ತಿಯೊಬ್ಬ ಕಾನ್ಪುರದ ಆಸ್ಪತ್ರೆಯಲ್ಲಿ ವೈದ್ಯರ ಐಫೋನ್ ಕದ್ದಿದ್ದ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಒಬ್ಬ ವ್ಯಕ್ತಿ ಆಸ್ಪತ್ರೆಯ ಲಾಬಿಯಲ್ಲಿ ಶರ್ಟ್ ಮತ್ತು ಶಾರ್ಟ್ಸ್ ಧರಿಸಿ, ವಾಕಿಂಗ್ ಸ್ಟಿಕ್ ಹಿಡಿದು ಎಡಗೈಯಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಹಿಡಿದು ಕುಂಟುತ್ತಾ ನಡೆಯುತ್ತಿರುವುದು ಕಂಡುಬರುತ್ತದೆ. ವೈದ್ಯರ ಬಳಿ ಹೋಗುತ್ತಿದ್ದಂತೆ ಬಲಗೈನಿಂದ ಎಡಗಡೆ ಇದ್ದ ವೈದ್ಯರ ಕೋಟ್ನಿಂದ ಮೊಬೈಲ್ ಕದ್ದಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ಪೊಲೀಸರು ಪ್ರಕರಣದ ತನಿಖೆ ನಡೆಸಿ 60 ನಿಮಿಷಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.ವಿಚಾರಣೆಯ ಸಮಯದಲ್ಲಿ, ಆರೋಪಿ ವೇಷ ಬದಲಿಸಿಕೊಂಡು ಆರೋಪಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ