ಅವಹೇಳನಕಾರಿ ಪೋಸ್ಟ್; ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಡಿ ರೂಪಾ
ರೋಹಿಣಿ ಮಾಡಿದ ಅವಹೇಳನಕಾರಿ ಪೋಸ್ಟನ್ನು ಸುಮಾರು ಎರಡು ಲಕ್ಷ ಜನ ವೀಕ್ಷಿಸಿದ್ದು ಅದರ ನಂತರವೇ ತನ್ನನ್ನು ಟ್ರಾನ್ಸ್ಫರ್ ಮಾಡಲಾಯಿತು ಮತ್ತು ಆರು ತಿಂಗಳು ಕಾಲ ಹುದ್ದೆ ಮತ್ತು ಸಂಬಳ ನೀಡದೆ ಅಲೆದಾಡುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು ಎಂದು ಡಿ ರೂಪಾ ತಮ್ಮ ದೂರಿನಲ್ಲಿ ದಾಖಲಿಸಿದ್ದಾರೆ. ರೋಹಿಣಿ ತಮ್ಮ ಹೇಳಿಕೆಯನ್ನು ಪೋಸ್ಟ್ ಮಾಡಿ ಹೆಚ್ಚುಕಡಿಮೆ 2ವರ್ಷಗಳಾಗುತ್ತಾ ಬಂದಿದೆ.
ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ನಡುವಿನ ಜಗಳ ಹೊಸದೇನಲ್ಲ. ಅದರ ಮುಂದುವರಿದ ಭಾಗವಾಗಿ ರೂಪಾ ಅವರು ರೋಹಿಣಿ ವಿರುದ್ಧ ನಗರದ 7 ನೇ ಎಸಿಎಂಎಂ ಕೋರ್ಟಲ್ಲಿ ಮಾನನಷ್ಟ ಮೊಕದ್ದಮೆಯೊಂದನ್ನು ಹೂಡಿದ್ದು ಅವರ ಖಾಸಗಿ ದೂರಿನ ನಂತರ ಕೋರ್ಟ್ ರೋಹಿಣಿ ಅವರಿಗೆ ನೋಟೀಸ್ ಜಾರಿಮಾಡಿದೆ. ದೂರಿನ ಪ್ರಕಾರ ರೋಹಿಣಿ, ಫೆಬ್ರುವರಿ 19, 2023 ರಂದು ರೂಪಾ ವಿರುದ್ಧ ಅವಹೇಳನಕಾರಿ ಹೇಳಿಕೆಯೊಂದನ್ನು ನೀಡಿ ನಂತರ ಅದನ್ನು ತಮ್ಮ ಎಕ್ಸ್ ಹ್ಯಾಂಡಲ್ ನಲ್ಲಿ ಶೇರ್ ಕೂಡ ಮಾಡಿದ್ದಾರೆ. ಅವರ ಹೇಳಿಕೆಯಿಂದ ಕೇವಲ ತಾನು ಮಾತ್ರವಲ್ಲದೆ ತನ್ನ ಪತಿ, ಮಕ್ಕಳ ಮತ್ತು ಸಹೋದರಿ ವಿಪರೀತ ನೊಂದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲೇ ರೋಹಿಣಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಬೇಕೆಂದು ರೂಪಾ ಅರ್ಜಿ ಸಲ್ಲಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜಡ್ಜ್ ಮನವಿಗೂ ಬಗ್ಗದ IPS-IAS:ಸುಪ್ರೀಂಕೋರ್ಟ್ನಲ್ಲಿ ಸಿಂಧೂರಿ-ರೂಪ ಪ್ರತಿಷ್ಠೆ ಜಿದ್ದು ಹೇಗಿತ್ತು ನೋಡಿ