[lazy-load-videos-and-sticky-control id=”4mDj3UDMwgw”]
ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಬೆಡ್ ಲೆಕ್ಕಚಾರ ಮತ್ತು ಬಿಲ್ ವಿಚಾರದಲ್ಲಿ ಸರಕಾರಕ್ಕೆ ಹಾಗೂ ಜನರಿಗೆ ಮಹಾ ವಂಚನೆ ಮಾಡಿವೆ ಎಂಬ ಆರೋಪ ಕೇಳಿಬಂದಿದೆ. ಖಾಸಗಿ ಆಸ್ಪತ್ರೆಗಳು ಬಿಬಿಎಂಪಿ ಗೂ ಮಾಹಿತಿ ನೀಡದೆ ಸ್ವತಃ ತಾವೇ ರೋಗಿಗಳನ್ನು ಟ್ರೀಟ್ ಮಾಡುತ್ತಿದ್ದು, ಸರ್ಕಾರ ನಿಗದಿ ಮಾಡಿರುವ ಹಣಕ್ಕಿಂತ ಮೂರು ಪಟ್ಟು ಹಣ ವಸೂಲಿ ಮಾಡಿರುವುದು ಕಂಡು ಬಂದಿದೆ.
ನಿನ್ನೇ ರಾಜರಾಜೇಶ್ವರಿನಗರದ ಖಾಸಗಿ ಆಸ್ಪತ್ರೆಗೆ IAS ಅಧಿಕಾರಿ ಹರ್ಷ ಗುಪ್ತಾ ಮತ್ತು IPS ಅಧಿಕಾರಿ ರೂಪ ಅವರು ಭೇಟಿ ನೀಡಿದ್ದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಬಿಬಿಎಂಪಿ ಮೂಲಕ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗಿದ್ದರೂ ಸಹ ಆಸ್ಪತ್ರೆಗಳು ರೋಗಿಗಳ ಬಳಿ ಇನ್ಶೂರೆನ್ಸ್ ಇದೆಯಾ ಎಂಬ ಮಾಹಿತಿ ಪಡೆದು ಹಣ ಸುಲಿಗೆ ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಹೀಗಾಗಿ ಈಗಾಗಲೇ ವಸೂಲಿ ಮಾಡಿರುವ ಹಣವನ್ನು ಆಸ್ಪತ್ರೆ ಅಧಿಕಾರಿಗಳಿಗೆ ವಾಪಸ್ ಕೊಡುವಂತೆ ಸೂಚನೆ ನೀಡಿದ್ದು, ಎರಡು ದಿನಗಳಲ್ಲಿ ಹೆಚ್ಚುವರಿಯಾಗಿ ವಸೂಲಿ ಮಾಡಿರುವ ಹಣವನ್ನು ವಾಪಸ್ ಕೊಡುವುದಾಗಿ ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿವೆ ಎನ್ನಲಾಗಿದೆ. ಕೆಲ ರೋಗಿಗಳಿಗೆ ಎರಡು ದಿನಕ್ಕೆ 2 ಲಕ್ಷ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿರುವದಲ್ಲದೆ, ಓರ್ವ ಕೊರೊನಾ ರೋಗಿಗೆ 6 ಲಕ್ಷ ಹಣ ವಸೂಲಿದ ಮಾಡಿರುವುದು ಸಹ ಅಧಿಕಾರಿಗಳ ತನಿಖೆಯಿಂದ ಬಯಲಾಗಿದೆ.
ಸಮಯಕ್ಕೆ ಸರಿಯಾಗಿ ಖಾಸಗಿ ಆಸ್ಪತ್ರೆಗಳಲ್ಲಿರುವ ಬೆಡ್ ಗಳ ಮಾಹಿತಿಯನ್ನು ವೆಬ್ ಸೈಟ್ನಲ್ಲಿ ಹಾಗೂ ಆಸ್ಪತ್ರೆಯ ನೋಟಿಸ್ ಬೋರ್ಡಿನಲ್ಲಿ ಹಾಕಬೇಕೆಂಬ ಸೂಚನೆ ಇದ್ದರೂ ಸಹ ಖಾಸಗಿ ಆಸ್ಪತ್ರೆಗಳು ಬೆಡ್ ಗಳ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲವೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
Published On - 6:43 pm, Fri, 24 July 20