ರಾಜ್ಯದ ರೈತರ ಕಿವಿಗಳಿಗೆ ಡಿಕೆ ಶಿವಕುಮಾರ್ ಇನ್ನು ಹೂ ಮುಡಿಸುವುದು ಸಾಧ್ಯವಿಲ್ಲ: ರೈತ ಮುಖಂಡರು
Bengaluru Bandh: ರೈತ ಮುಖಂಡರು ಸರ್ಕಾರ ಮೊದಲು ಜನರಿಗೆ ಕುಡಿಯಲು ನೀರು ಸಿಗುವಂತಾಗಲು ತಮಿಳುನಾಡುಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿ, ತಮ್ಮನ್ನು ಬಂಧಿಸಲು ಪೊಲೀಸರು ಬರಲಿ, ರಾಜ್ಯದ ರೈತರೆಲ್ಲ ಒಂದುಗೂಡುತ್ತೇವೆ, ಯಾರ ಬಲ ಹೆಚ್ಚು ಅಂತ ನೋಡೇ ಬಿಡೋಣ ಅಂತ ಸರ್ಕಾರಕ್ಕೆ ಸವಾಲೆಸೆದರು.
ಬೆಂಗಳೂರು: ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಸದಸ್ಯರು ಸರ್ಕಾದ ವಿರುದ್ಧ ಅದರಲ್ಲೂ ವಿಶೇಷವಾಗಿ ನೀರಾವರಿ ಸಚಿವ ಡಿಕೆ ಶಿವಕುಮಾರ್ (DK Shivakumar) ಮೇಲೆ ಹರಿ ಹಾಯುತ್ತಿದ್ದಾರೆ. ವಿಧಾನ ಸೌಧದಲ್ಲಿ (Vidhana Soudha) ಕೂತು ತಮಿಳುನಾಡುಗೆ ನೀರು ಬಿಡುತ್ತಿಲ್ಲ ಅಂತ ರೈತರ ಕಿವಿಗಳಿಗೆ ಶಿವಕುಮಾರ ಹೂ ಮುಡಿಸಿದ್ದಾರೆ (fooled farmers), ಆದರೆ ಇನ್ನು ಅದು ಸಾಧ್ಯವಿಲ್ಲ, ರಾಜ್ಯದ ರೈತರು ಹೂ ಮುಡಿಸಿಕೊಳ್ಳುವುದು ಸಾಧ್ಯವಿಲ್ಲ ಅಂತ ಒಬ್ಬ ರೈತ ಮುಖಂಡ ಹೇಳಿದರು. ಮೊದಲು ಅವರು ಜನರಿಗೆ ಕುಡಿಯಲು ನೀರು ಸಿಗುವಂತಾಗಲು ತಮಿಳುನಾಡುಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿ, ತಮ್ಮನ್ನು ಬಂಧಿಸಲು ಪೊಲೀಸರು ಬರಲಿ, ರಾಜ್ಯದ ರೈತರೆಲ್ಲ ಒಂದುಗೂಡುತ್ತೇವೆ, ಯಾರ ಬಲ ಹೆಚ್ಚು ಅಂತ ನೋಡೇ ಬಿಡೋಣ ಅಂತ ಸರ್ಕಾರಕ್ಕೆ ಸವಾಲೆಸೆದರು. ಫ್ರೀಡಂ ಪಾರ್ಕ್ನಲ್ಲಿ ಕೆಲ ರೈತರು, ತಲೆಮೇಲೆ ಖಾಲಿ ಕೊಡ ಇಟ್ಟಿಕೊಂಡು ಪ್ರದರ್ಶನ ನಡೆಸಿದರೆ ಬೇರೆ ಕೆಲವರು ಬರಿ ಮೈಯಲ್ಲಿ ನಿತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ