ತಮಿಳುನಾಡಿಗೆ ಕೆಆರ್​ಎಸ್​ ಡ್ಯಾಂನಿಂದ ನೀರು ಬಿಡುಗಡೆ; ಕರ್ನಾಟಕದ ರೈತ ಸಂಘಟನೆಗಳಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಅವರು (ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದವರು) ನಮ್ಮ ಅಳಲು, ನೋವು ಕೇಳ್ತಿಲ್ಲ. ನೀರು ಬಿಡುವುದರಿಂದ ರೈತರ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ರೈತರ ಮೇಲೆ ಸಾಮಾಜಿಕ-ಆರ್ಥಿಕ ದುಷ್ಪರಿಣಾಮ ಉಂಟಾಗಲಿದೆ. ಕರ್ನಾಟಕ ಸರ್ಕಾರ ಕೆಲ ತಾಲೂಕುಗಳ ಬರ ಘೋಷಣೆಗೆ ಸಿದ್ಧತೆ ನಡೆಸಿದೆ ಎಂದಿರುವ ರೈತ ಸಂಘಟನೆಗಳು, ಅರ್ಜಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಿವೆ.

ತಮಿಳುನಾಡಿಗೆ ಕೆಆರ್​ಎಸ್​ ಡ್ಯಾಂನಿಂದ ನೀರು ಬಿಡುಗಡೆ; ಕರ್ನಾಟಕದ ರೈತ ಸಂಘಟನೆಗಳಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ
ಸುಪ್ರೀಂ ಕೋರ್ಟ್‌
Follow us
ಹರೀಶ್ ಜಿ.ಆರ್​. ನವದೆಹಲಿ
| Updated By: Ganapathi Sharma

Updated on:Sep 05, 2023 | 6:37 PM

ನವದೆಹಲಿ, ಸೆಪ್ಟೆಂಬರ್ 5: ತಮಿಳುನಾಡಿಗೆ ಕೆಆರ್​ಎಸ್​ ಡ್ಯಾಂನಿಂದ (KRS Dam) ನೀರು ಬಿಡುತ್ತಿರುವ ವಿಚಾರವಾಗಿ ಕರ್ನಾಟಕದ ರೈತ ಸಂಘಟನೆಗಳು ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿ ಸಲ್ಲಿಸಿವೆ. ನಾವು ಬೆಳೆಗೆ ನೀರು ಕೇಳುತ್ತಿಲ್ಲ. ಬದಲಿಗೆ ಕುಡಿಯುವ ನೀರಿಗೆ ಆದ್ಯತೆ ಕೊಡಿ. ತಮಿಳುನಾಡು ರಾಜ್ಯ ಸರ್ಕಾರ ಕುರುವೈ ಬೆಳೆಗೆ ನೀರು ಕೇಳುತ್ತಿದೆ. ಮಂಡ್ಯ, ಮೈಸೂರು ಸುತ್ತಮುತ್ತ 3 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ತಂಡ ತಮಿಳುನಾಡಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಆದರೆ, ಕರ್ನಾಟಕಕ್ಕೆ ಭೇಟಿ ನೀಡಿಲ್ಲ ಎಂದು ರೈತ ಸಂಘಟನೆಗಳು ಅರ್ಜಿಯಲ್ಲಿ ಉಲ್ಲೇಖಿಸಿವೆ.

ಅವರು (ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದವರು) ನಮ್ಮ ಅಳಲು, ನೋವು ಕೇಳ್ತಿಲ್ಲ. ನೀರು ಬಿಡುವುದರಿಂದ ರೈತರ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ರೈತರ ಮೇಲೆ ಸಾಮಾಜಿಕ-ಆರ್ಥಿಕ ದುಷ್ಪರಿಣಾಮ ಉಂಟಾಗಲಿದೆ. ಕರ್ನಾಟಕ ಸರ್ಕಾರ ಕೆಲ ತಾಲೂಕುಗಳ ಬರ ಘೋಷಣೆಗೆ ಸಿದ್ಧತೆ ನಡೆಸಿದೆ ಎಂದಿರುವ ರೈತ ಸಂಘಟನೆಗಳು, ಅರ್ಜಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಿವೆ.

ರೈತ ಸಂಘಟನೆಗಳ ಅರ್ಜಿ ಬುಧವಾರ ಸುಪ್ರೀಂ ಕೋರ್ಟ್​​​​​ನಲ್ಲಿ ವಿಚಾರಣೆಗೆ ಬರಲಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಮನಸ್ಥಿತಿಯ ನಾಯಕರಿಂದ ರಾಜ್ಯ ಕಷ್ಟಕ್ಕೆ ಸಿಲುಕಿದೆ; ರೈತ ಮುಖಂಡ ನಂಜುಂಡೇಗೌಡ ವಾಗ್ದಾಳಿ

ರಾಜ್ಯದಲ್ಲಿ ಮಳೆ ಕೊರತೆ ಇರುವ ನಡುವೆಯೂ ತಮಿಳುನಾಡಿಗೆ ನೀರು ಬಿಡುತ್ತಿರುವುದರ ವಿರುದ್ಧ ಮಂಡ್ಯ ಸುತ್ತಮುತ್ತ ಕಳೆದ ಕೆಲವು ದಿನಗಳಿಂದ ರೈತರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ಮಧ್ಯೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧವೂ ರೈತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಕಷ್ಟದ ಸಮಯದಲ್ಲಿ ರೈತರ ಪರ ವಹಿಸದೆ ಇರುವ ಇಂಥ ನಾಯಕರಿಂದಲೇ ನಮ್ಮವರಿಗೆ ಸಂಕಷ್ಟ ಎದುರಾಗಿದೆ. ಡಿಕೆ ಶಿವಕುಮಾರ್ ಮನಸ್ಥಿತಿಯ ನಾಯಕರಿಂದ ರಾಜ್ಯ ಕಷ್ಟಕ್ಕೆ ಸಿಲುಕಿದೆ ಎಂದು ರೈತ ಸಂಘಟನೆಗಳು ಟೀಕಿಸಿದ್ದವು. ಮೇಕೆದಾಟು ಪಾದಯಾತ್ರೆಯಲ್ಲಿ ರೈತ ಸಂಘಟನೆಗಳು ಯಾಕೆ ಭಾಗವಹಿಸಲಿಲ್ಲ ಎಂಬ ಶಿವಕುಮಾರ್ ಅವರ ಹೇಳಿಕೆ ರೈತರನ್ನು ಮತ್ತಷ್ಟು ಕೆರಳಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:01 pm, Tue, 5 September 23

ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್
IND vs AUS: ಆಸ್ಟ್ರೇಲಿಯಾ ಪ್ರಧಾನಿಯನ್ನ ಭೇಟಿಯಾದ ಟೀಮ್ ಇಂಡಿಯಾ
IND vs AUS: ಆಸ್ಟ್ರೇಲಿಯಾ ಪ್ರಧಾನಿಯನ್ನ ಭೇಟಿಯಾದ ಟೀಮ್ ಇಂಡಿಯಾ
ಗುಂಪುಗಾರಿಕೆ 2 ತಿಂಗಳು ಮುಂದುವರಿಯಲಿದೆ, ಪತ್ರ ಚಳುವಳಿ ಅಗತ್ಯವಿಲ್ಲ: ಶಾಸಕ
ಗುಂಪುಗಾರಿಕೆ 2 ತಿಂಗಳು ಮುಂದುವರಿಯಲಿದೆ, ಪತ್ರ ಚಳುವಳಿ ಅಗತ್ಯವಿಲ್ಲ: ಶಾಸಕ
ಯತ್ನಾಳ್ ತಂಡದ ವಿರುದ್ದ 2 ಪತ್ರ ಬರೆದರೂ ವರಿಷ್ಠರಿಂದ ಕ್ರಮವಿಲ್ಲ: ಡಿವಿಎಸ್
ಯತ್ನಾಳ್ ತಂಡದ ವಿರುದ್ದ 2 ಪತ್ರ ಬರೆದರೂ ವರಿಷ್ಠರಿಂದ ಕ್ರಮವಿಲ್ಲ: ಡಿವಿಎಸ್
ನನ್ನ ಹಾಗೂ ನನ್ನ ಮಗನ ವಿರುದ್ಧ ಒಂದೇ ಒಂದು ದೂರು ದಾಖಲಾಗಿಲ್ಲ: ದೇವೇಗೌಡ
ನನ್ನ ಹಾಗೂ ನನ್ನ ಮಗನ ವಿರುದ್ಧ ಒಂದೇ ಒಂದು ದೂರು ದಾಖಲಾಗಿಲ್ಲ: ದೇವೇಗೌಡ
ತೆಂಗಿನಕಾಯಿ ವ್ಯಾಪಾರಿಯ ಮದುವೆ ಊಟದ ವ್ಯವಸ್ಥೆ ಕಂಡು ನೆಟ್ಟಿಗರು ಫಿದಾ
ತೆಂಗಿನಕಾಯಿ ವ್ಯಾಪಾರಿಯ ಮದುವೆ ಊಟದ ವ್ಯವಸ್ಥೆ ಕಂಡು ನೆಟ್ಟಿಗರು ಫಿದಾ
Video: ಮಹಿಳೆಯ ಜಡೆ ಹಿಡಿದು ಎಳೆದೊಯ್ದ ಪೊಲೀಸ್​ ಅಧಿಕಾರಿ
Video: ಮಹಿಳೆಯ ಜಡೆ ಹಿಡಿದು ಎಳೆದೊಯ್ದ ಪೊಲೀಸ್​ ಅಧಿಕಾರಿ
ಬೇರೆ ಖಾತೆ ನೀಡಿದರೂ ಚಿಂತೆಯಿಲ್ಲ, ನಿಷ್ಠೆಯಿಂದ ಕೆಲಸ ಮಾಡುವೆ: ಪರಮೇಶ್ವರ್
ಬೇರೆ ಖಾತೆ ನೀಡಿದರೂ ಚಿಂತೆಯಿಲ್ಲ, ನಿಷ್ಠೆಯಿಂದ ಕೆಲಸ ಮಾಡುವೆ: ಪರಮೇಶ್ವರ್
ಕೇರಳದ ಸೀರೆ ತೊಟ್ಟು, ಸಂವಿಧಾನದ ಪುಸ್ತಕ ಹಿಡಿದು ಪ್ರಿಯಾಂಕಾ ಪ್ರಮಾಣವಚನ
ಕೇರಳದ ಸೀರೆ ತೊಟ್ಟು, ಸಂವಿಧಾನದ ಪುಸ್ತಕ ಹಿಡಿದು ಪ್ರಿಯಾಂಕಾ ಪ್ರಮಾಣವಚನ