ಸಿದ್ದರಾಮಯ್ಯ ಹೊಗಳಿ ನನಗೆ ಏನೂ ಆಗಬೇಕಾಗಿಲ್ಲ: ಬಸವರಾಜ ರಾಯರೆಡ್ಡಿ
ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ವಪಕ್ಷದ ಶಾಸಕ ಬಸವರಾಜ ರಾಯರೆಡ್ಡಿ ಮತ್ತೆ ಅಸಮಾಧಾನ ಹೊರಹಾಕಲು ಆರಂಭಿಸಿದ್ದಾರೆ. ಅಸಮಾಧಾನವನ್ನು ಶಮನಗೊಳಿಸಲು ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಡಾ.ಎಂ.ಸಿ.ಸುಧಾಕರ್ ಚರ್ಚಿಸಿದ್ದಾರೆ. ಈ ನಡುವೆ ಮಾತನಾಡಿದ ರಾಯರೆಡ್ಡಿ, ನನಗೆ ಸಿದ್ದರಾಮಯ್ಯ ಹೊಗಳಿ ಏನೂ ಆಗಬೇಕಾಗಿಲ್ಲ, ನಾವೆಲ್ಲ ಸ್ವಾರ್ಥಿಗಳಲ್ಲ. ಕೇವಲ ಅಭಿವೃದ್ಧಿ ವಿಚಾರ ಮಾತ್ರ ಚರ್ಚೆಯಾಗಿದೆ ಎಂದಿದ್ದಾರೆ.
ಬೆಂಗಳೂರು, ಸೆ.5: ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ವಪಕ್ಷದ ಶಾಸಕ ಬಸವರಾಜ ರಾಯರೆಡ್ಡಿ (Basavaraj Rayareddy) ಮತ್ತೆ ಅಸಮಾಧಾನ ಹೊರಹಾಕಲು ಆರಂಭಿಸಿದ್ದಾರೆ. ಅಸಮಾಧಾನವನ್ನು ಶಮನಗೊಳಿಸಲು ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಡಾ.ಎಂ.ಸಿ.ಸುಧಾಕರ್ ಚರ್ಚಿಸಿದ್ದಾರೆ. ಈ ನಡುವೆ ಮಾತನಾಡಿದ ರಾಯರೆಡ್ಡಿ, ನನಗೆ ಸಿದ್ದರಾಮಯ್ಯ(Siddaramaiah) ಹೊಗಳಿ ಏನೂ ಆಗಬೇಕಾಗಿಲ್ಲ, ನಾವೆಲ್ಲ ಸ್ವಾರ್ಥಿಗಳಲ್ಲ. ಕೇವಲ ಅಭಿವೃದ್ಧಿ ವಿಚಾರ ಮಾತ್ರ ಚರ್ಚೆಯಾಗಿದೆ ಎಂದಿದ್ದಾರೆ.
ಚೆಸ್ಕಾಂ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ರಾಯರೆಡ್ಡಿ ಬಹಿರಂಗ ಹೇಳಿಕೆ ನೀಡಿದ ಬೆನ್ನಲ್ಲೇ ಇಂದು ಇಂಧನ ಸಚಿವ ಕೆಜೆ ಜಾರ್ಜ್ ಅವರು ಸಭೆ ನಡೆಸಿದ್ದರು. ಈ ಬಗ್ಗೆ ನಗರದಲ್ಲಿ ಮಾತನಾಡಿದ ರಾಯರೆಡ್ಡಿ, ಕೇವಲ ನನ್ನ ಕ್ಷೇತ್ರದ ಸಮಸ್ಯೆಗಳ ಬಗ್ಗ್ಎ ಚರ್ಚೆ ಆಗಲಿಲ್ಲ. ಎಲ್ಲ ಕಡೆಯ ಸಮಸ್ಯೆಗಳ ಬಗ್ಗೆಯೂ ಚರ್ಚೆ ಆಗಿದೆ. ನಮ್ಮ ಕ್ಷೇತ್ರದ ವಿದ್ಯುತ್ ಸಮಸ್ಯೆ ಪರಿಹಾರ ಆಗುತ್ತಿದೆ. ನಮ್ಮಲ್ಲಿ ಏನೂ ಭಿನ್ನಮತ ಇಲ್ಲ ಎಂದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಬಳಿ ನಮ್ಮ ಕ್ಷೇತ್ರಕ್ಕೆ ಅನುದಾನ ಕೇಳುವುದಿಲ್ಲ: ಶಾಸಕ ಬಸವರಾಜ ರಾಯರೆಡ್ಡಿ
ಸಿದ್ದರಾಮಯ್ಯ ಅವರು ಅತ್ಯುತ್ತಮ ಮುಖ್ಯಮಂತ್ರಿ. ಆದರೆ ಸಿದ್ದರಾಮಯ್ಯ ಅವರನ್ನು ಹೊಗಳಿ ನನಗೆ ಏನೂ ಆಗಬೇಕಾಗಿಲ್ಲ. ನನಗೆ ಮಂತ್ರಿ ಬೇಕೂ ಅದೆಲ್ಲ ಏನೂ ಇಲ್ಲ. ನಾವೆಲ್ಲ ಸ್ವಾರ್ಥಿಗಳಲ್ಲ. ಕೇವಲ ಅಭಿವೃದ್ಧಿ ವಿಚಾರ ಮಾತ್ರ ಚರ್ಚೆಯಾಗಿದೆ. ಮುಖ್ಯಮಂತ್ರಿಗೆ ನೇರವಾಗಿ ಪತ್ರ ಬರೆದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಎಂಬಿ ಪಾಟೀಲ್ ಕೂಡ ನಾಳೆ ಸಭೆ ಮಾಡುತ್ತಿದ್ದಾರೆ ಎಂದರು.
ಬಸವರಾಜ ರಾಯರೆಡ್ಡಿ ಅವರು ಅಧಿಕಾರಿಗಳ ಬಗ್ಗೆ ಅಸಮಾಧಾನ ಹೊರಹಾಕಿ ಮುಖ್ಯಮಂತ್ರಿ ಅವರಿಗೆ ಒಂದು ತಿಂಗಳಲ್ಲಿ ಎರಡು ಬಾರಿ ಪತ್ರ ಬರೆದಿದ್ದರು. ಕಳೆದವಾರ ಸಿಎಂ ಸಿದ್ದರಾಮಯ್ಯ ಅವರಿಗೆ ಶಾಸಕ ಬಸವರಾಜ ರಾಯರೆಡ್ಡಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ಪತ್ರ ಬರೆದಿದ್ದರು. ಈ ಬಗ್ಗೆ ಸ್ವತಃ ರಾಯರೆಡ್ಡಿ ಅವರೇ ಹೇಳಿಕೆ ನೀಡಿದ್ದರು.
ಕೊಪ್ಪಳ ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಟಾರ್ನ್ಫಾರ್ಮರ್ಗಳು ಸುಟ್ಟುಹೋಗಿ ವಿದ್ಯುತ್ ಸಮಸ್ಯೆ ಆಗಿದೆ. ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ರಾಯರೆಡ್ಡಿ ಹೇಳಿದ್ದರು. ಜೆಸ್ಕಾಂ ವ್ಯಾಪ್ತಿಯಲ್ಲೇ ನಮ್ಮ ಜಿಲ್ಲೆ ಕೂಡ ಬರುತ್ತದೆ. ಹಾಗಿದ್ದರೂ ಅಧಿಕಾರಿಗಳು ನಮ್ಮ ಜಿಲ್ಲೆಯ ಸಮಸ್ಯೆಗೆ ಸ್ಪಂದಿಸಲಿಲ್ಲ. ಹೀಗಾಗಿ ಸಿಎಂಗೆ ಸಭೆ ಕರೆಯುವಂತೆ ಪತ್ರ ಬರೆದಿದ್ದೇನೆ ಎಂದಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ