ಭವಾನಿ ರೇವಣ್ಣ ರಾಜಕೀಯ ಉದ್ದೇಶಗಳಿಗೆ ಹೆಚ್ ಡಿ ಕುಮಾರಸ್ವಾಮಿ ಕುಟುಂಬವನ್ನು ಕಡೆಗಾಣಿಸುತ್ತಿದ್ದಾರೆಯೇ?
ಹಾಸನd ದೇವಸ್ಥಾನವೊಂದರಲ್ಲಿ ಅರ್ಚನೆ ಮಾಡಿಸುವಾಗ ಹೆಚ್ ಡಿ ದೇವೇಗೌಡರ ಕುಟುಂಬದ ಎಲ್ಲ ಸದಸ್ಯರ ಹೆಸರಲ್ಲಿ ಅರ್ಚನೆ ಮಾಡಿಸಿದರೂ ತಮ್ಮ ವಾರಿಗಿತ್ತಿ ಅನಿತಾ ಕುಮಾರಸ್ವಾಮಿಯವರ ಹೆಸರು ಮರೆತರು.
ಹಾಸನ: ಭವಾನಿ ರೇವಣ್ಣ (Bhavani Revanna) ಅವರ ರಾಜಕೀಯ ವರಸೆಗಳು ಸುಲಭಕ್ಕೆ ಅರ್ಥವಾಗಲಾರವು. ನಿಮಗೆ ನೆನಪಿರಬಹುದು, ಶುಕ್ರವಾರ ಅವರು ಹಾಸನ ನಗರದ ಹೊರವಲಯದ ದೇವಸ್ಥಾನವೊಂದರಲ್ಲಿ ಅರ್ಚನೆ ಮಾಡಿಸುವಾಗ ಹೆಚ್ ಡಿ ದೇವೇಗೌಡರ ಕುಟುಂಬದ ಎಲ್ಲ ಸದಸ್ಯರ ಹೆಸರಲ್ಲಿ ಅರ್ಚನೆ ಮಾಡಿಸಿದರೂ ತಮ್ಮ ವಾರಿಗಿತ್ತಿ ಅನಿತಾ ಕುಮಾರಸ್ವಾಮಿಯವರ (Anita Kumaraswamy) ಹೆಸರು ಮರೆತರು. ಅದು ಉದ್ದೇಶಪೂರ್ವಕವೋ ಅಥವಾ ಪ್ರಮಾದವೋ ಅಂತ ನಮಗೆ ಗೊತ್ತಾಗಲಿಲ್ಲ. ಅದು ಸರಿ, ಇವತ್ತು ಹಾಸನದಲ್ಲಿ ಭಾರತೀಯ ಮಜ್ದೂರ್ ಆಟೊರಿಕ್ಷಾ ಚಾಲಕರ ಸಂಘದ ವತಿಯಿಂದ ಅಯೋಜಿಸಲಾಗಿದ್ದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭವಾನಿ ರೇವಣ್ಣ ಮಾತಾಡುವಾಗ ತಮ್ಮ ಮಾವ ಹೆಚ್ ಡಿ ದೇವೇಗೌಡ (HD Devegowda) ಅವರನ್ನು ನೆನೆಯುತ್ತಾ ಹಿರಿಸಾವೆ ಮಠದ ಶ್ರೀ ಶ್ರೀ ಶ್ರೀ ಕುಮಾರಸ್ವಾಮಿಗಳ ಪಾದಾರವಿಂದಗಳಿಗೆ ನಮನ ಎನ್ನುತ್ತಾರೆ. ಅವರ ಬಾಯಿಂದ ತಪ್ಪಿಯೂ ಹೆಚ್ ಡಿ ಕುಮಾರಸ್ವಾಮಿಯವರ ಹೆಸರು ಬರುವುದಿಲ್ಲ. ನಂತರ ಅವರು ವೇದಿಕೆಯ ಮೇಲೆ ಕುಳಿತಿದ್ದ ತಮ್ಮಿಬ್ಬರು ಮಕ್ಕಳು-ಸಂಸದ ಪ್ರಜ್ವಲ್ ರೇವಣ್ಣ ಮತ್ತು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರ ಹೆಸರುಗಳನ್ನು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ