AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vishnuvardhan Memorial: ವಿಷ್ಣುವರ್ಧನ್​ ಸ್ಮಾರಕ ಲೋಕಾರ್ಪಣೆ: ಬೆಂಗಳೂರಿಂದ ಮೈಸೂರಿಗೆ ಹೊರಟ ಜನಸಾಗರ

Vishnuvardhan Memorial: ವಿಷ್ಣುವರ್ಧನ್​ ಸ್ಮಾರಕ ಲೋಕಾರ್ಪಣೆ: ಬೆಂಗಳೂರಿಂದ ಮೈಸೂರಿಗೆ ಹೊರಟ ಜನಸಾಗರ

ಮದನ್​ ಕುಮಾರ್​
|

Updated on:Jan 29, 2023 | 10:36 AM

Share

Vishnuvardhan Memorial Inauguration: ವಿಷ್ಣುವರ್ಧನ್ ಅಭಿಮಾನಿಗಳು ಸಾವಿರಾರು ವಾಹನಗಳಲ್ಲಿ ಜಾಥಾ ಹೊರಟಿದ್ದಾರೆ. ನೆಚ್ಚಿನ ನಟನ​ ಫೋಟೋ ಹಿಡಿದು, ಜೈಕಾರ ಕೂಗುತ್ತ ಅಭಿಮಾನ ಮೆರೆಯಲಾಗುತ್ತಿದೆ.

ಕನ್ನಡ ಚಿತ್ರರಂಗದ ಮೇರು ನಟ ‘ಸಾಹಸ ಸಿಂಹ’ ವಿಷ್ಣುವರ್ಧನ್​ ಅವರ ಸ್ಮಾರಕದ (Vishnuvardhan Memorial) ಉದ್ಘಾಟನಾ ಸಮಾರಂಭದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಭಾಗಿ ಆಗುತ್ತಿದ್ದಾರೆ. ಮೈಸೂರಿನ ಎಚ್​.ಡಿ. ಕೋಟೆ ರಸ್ತೆಯ ಅಲ್ಲಾಳು ಗ್ರಾಮದಲ್ಲಿ ಇಂದು (ಜ.29) ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಷ್ಣುವರ್ಧನ್​ ಸ್ಮಾರಕ (Vishnuvardhan Smaraka) ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿನಿಂದ ಜನಸಾಗರವೇ ಮೈಸೂರಿನತ್ತ ಸಾಗುತ್ತಿದೆ. ಸಾವಿರಾರು ವಾಹನಗಳಲ್ಲಿ ಅಭಿಮಾನಿಗಳು (Vishnuvardhan Fans) ಜಾಥಾ ಹೊರಟಿದ್ದಾರೆ. ವಿಷ್ಣುವರ್ಧನ್​ ಅವರ ಫೋಟೋ ಹಿಡಿದು, ಜೈಕಾರ ಕೂಗುತ್ತ ಅಭಿಮಾನ ಮೆರೆಯಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Jan 29, 2023 10:36 AM
Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More