AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vishnuvardhan Smaraka: ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಗೂ ಮುನ್ನ ಸರ್ಕಾರದ ನಡೆ ಬಗ್ಗೆ ವಿಷ್ಣು ಸೇನಾ ಸಮಿತಿ ಅಸಮಾಧಾನ

ಕೋಟ್ಯಾಂತರ ಅಭಿಮಾನಿಗಳು ಹಾಗೂ ಕುಟುಂಬದ ಬಹು ದೊಡ್ಡ ಕನಸಾಗಿದ್ದ ವಿಷ್ಣು ಸ್ಮಾರಕ ನಾಳೆ(ಜ. 29) ಲೋಕಾರ್ಪಣೆಗೊಳ್ಳಲಿದೆ. ಆದರೆ ಅದಕ್ಕೂ ಮುನ್ನ ಸರ್ಕಾರದ ನಡೆ ಬಗ್ಗೆ ಡಾ. ವಿಷ್ಣು ಸೇನಾ ಸಮಿತಿ ಬೇಸರ ವ್ಯಕ್ತಪಡಿಸಿದೆ.

Vishnuvardhan Smaraka: ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಗೂ ಮುನ್ನ ಸರ್ಕಾರದ ನಡೆ ಬಗ್ಗೆ ವಿಷ್ಣು ಸೇನಾ ಸಮಿತಿ ಅಸಮಾಧಾನ
ವಿಷ್ಣುವರ್ಧನ್ ಸ್ಮಾರಕ, ವೀರಕಪುತ್ರ ಶ್ರೀನಿವಾಸ್
TV9 Web
| Edited By: |

Updated on:Jan 28, 2023 | 5:32 PM

Share

ಸತತ ಹದಿಮೂರು ವರ್ಷಗಳ ನಂತರ ಡಾ.ವಿಷ್ಣುವರ್ಧನ್ ಸ್ಮಾರಕ (Vishnuvardhan Smaraka) ಉದ್ಘಾಟನೆಗೊಳ್ಳುತ್ತಿದೆ. ಕೋಟ್ಯಾಂತರ ಅಭಿಮಾನಿಗಳು ಹಾಗೂ ಕುಟುಂಬದ ಬಹು ದೊಡ್ಡ ಕನಸಾಗಿದ್ದ ವಿಷ್ಣು ಸ್ಮಾರಕ ನಾಳೆ(ಜ. 29) ಲೋಕಾರ್ಪಣೆಯಾಗುತ್ತಿದೆ. ಈ ಬಗ್ಗೆ ವಿಷ್ಣು ಅಭಿಮಾನಿಗಳ ಪರವಾಗಿ ಡಾ. ವಿಷ್ಣು ಸೇನಾ ಸಮಿತಿ (Vishnu Sena Samiti)  ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಪತ್ರಕಾಗೋಷ್ಠಿ ನಡೆಸಿ ಸರ್ಕಾರದ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಒಂದಿಷ್ಟು ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಡಾ ವಿಷ್ಣುವರ್ಧನ್ ಸ್ಮಾರಕ 13 ವರ್ಷಗಳ ನಂತರ ಲೋಕಾರ್ಪಣೆ ಆಗುತ್ತಿದೆ. ಸ್ಮಾರಕಕ್ಕಾಗಿ ನಮ್ಮ ಹೋರಾಟ, ನೋವು, ಕಾಯುವಿಕೆ ಲೆಕ್ಕಕ್ಕಿಲ್ಲ. ಕುಟುಂಬದವರು ಇದಕ್ಕಾಗಿ ಸಾಕಷ್ಟು ಹೋರಾಟ ನಡೆಸಿ ಅವರಿಂದಾಗಿಯೇ ಸ್ಮಾರಕ ಮೈಸೂರಿನಲ್ಲಿ ಆಗಿದೆ. ಕಾರ್ಯಕ್ರಮಕ್ಕೆ ಮುಖ್ಯಂತ್ರಿಗಳಾದ ಬಸವರಾಜ ಬೊಮ್ಮಯಿ ಆಗಮಿಸುತ್ತಾರೆ. ಚಿತ್ರರಂಗದವರನ್ನು ಕೂಡ ಕಾರ್ಯಕ್ರಮಕ್ಕೆ ಆಹ್ವಾನಿಸುವ ಕೆಲಸ ನಡೆಯುತ್ತಿದೆ. ನಟ ಸುದೀಪ್ ಫೆಬ್ರವರಿಯಲ್ಲಿ ಸ್ಮಾರಕಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಯಶ್ ಅವರಿಗೆ ಆಹ್ವಾನ ನೀಡಬೇಕಿದೆ ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದರು.

ಚಿತ್ರರಂಗದ ಮೇರು ನಟ, ಪಂಚಭಾಷೆ ತಾರೆಯಾಗಿದ್ದ ವಿಷ್ಣು ಸ್ಮಾರಕ ಉದ್ಘಾಟನೆಗೆ ಅವರ ಗೆಳೆಯರಾದ ಅಕ್ಷಯ್ ಕುಮಾರ್, ಚಿರಂಜೀವಿ, ಮೋಹನ್ ಲಾಲ್, ರಜನಿಕಾಂತ್ ಸೇರಿದಂತೆ ಹಲವರನ್ನು ಸರ್ಕಾರ ಆಹ್ವಾನಿಸುತ್ತೆ ಎಂದು ಅಂದುಕೊಂಡಿದ್ವಿ. ಆದ್ರೆ ಆ ಕೆಲಸ ಆಗಿಲ್ಲ. ಅಭಿಮಾನಿಗಳಾಗಿ ನಮಗೆ ಇದು ಬೇಸರ ತರಿಸಿದೆ. ಬೇರೆ ನಟರ ಕಾರ್ಯಕ್ರಮಗಳಿಗೆ ನೀಡುವ ಮನ್ನಣೆಯನ್ನು ಸರ್ಕಾರ ವಿಷ್ಣು ಸ್ಮಾರಕ ಉದ್ಘಾಟನೆ ವಿಚಾರದಲ್ಲಿ ನೀಡುತ್ತಿಲ್ಲ.

ಇದನ್ನೂ ಓದಿ: Vishnuvardhan Smaraka: ವಿಷ್ಣುವರ್ಧನ್​ ಸ್ಮಾರಕ ಲೋಕಾರ್ಪಣೆಗೆ ಸಾವಿರ ವಾಹನಗಳ ಜಾಥಾ; ಹೇಗಿರಲಿದೆ ಕಾರ್ಯಕ್ರಮ?

ಚಿತ್ರರಂಗದ ಹಿರಿಯ, ಕಿರಿಯ ಹಾಗೂ ಸ್ಟಾರ್ ನಟರುಗಳು ಕೂಡ ಸ್ಮಾರಕದ ಕುರಿತಾಗಿ ಮಾತನಾಡುತ್ತಿಲ್ಲ. ಸ್ಮಾರಕ ಉದ್ಘಾಟನೆ ವೇಳೆ ಸರ್ಕಾರ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕು. ಜೊತೆಗೆ ಅವರ ಪುಣ್ಯಭೂಮಿ ಅಭಿವೃದ್ದಿಗೆ ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸೋದಾಗಿ ವೀರಕಪುತ್ರ ಶ್ರೀನಿವಾಸ್ ತಿಳಿಸಿದರು.

ಇದನ್ನೂ ಓದಿ: ಬಳ್ಳಾರಿಯಲ್ಲಿ ನಿರ್ಮಿಸಲಾಗಿರುವ ಪುನೀತ್ ರಾಜಕುಮಾರ ಪುತ್ಥಳಿ ಲೋಕಾರ್ಪಣೆ ಜನೆವರಿ 21 ರಂದು

ಸ್ಮಾರಕ ಉದ್ಘಾಟನೆಯಾಗುವ ದಿನ ಮೈಸೂರಿನಿಂದ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಿಸಬೇಕು. ಬೆಂಗಳೂರಿನಿಂದ ಸ್ಮಾರಕದವರೆಗೆ 700 ವಾಹನಗಳ ಬೃಹತ್ ಜಾಥ ಹಮ್ಮಿಕೊಂಡಿರುವುದರಿಂದ ಅಭಿಮಾನಿಗಳಿಗೆ ಅನುಕೂಲವಾಗುವಂತೆ ಅಗತ್ಯವಿದ್ದ ಕಡೆ ಟ್ರಾಫಿಕ್ ಕ್ಲಿಯರೆನ್ಸ್​ಗೆ ಆದೇಶಿಸಬೇಕು ಎಂದು ಹಲವು ಬೇಡಿಕೆಯನ್ನು ವಿಷ್ಣು ಅಭಿಮಾನಿಗಳ ಪರವಾಗಿ ಸರ್ಕಾರದ ಮುಂದಿಟ್ಟಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:30 pm, Sat, 28 January 23

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ