ಇದೇನು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಆಪರೇಷನ್ ಸಿಂಧೂರ್ ಬಗ್ಗೆ ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ಇದಕ್ಕೂ ಮೊದಲು, ಭಾರತದ ಪ್ರತಿದಾಳಿಯ ಹೆಸರಾಗಿ 'ಆಪರೇಷನ್ ಸಿಂಧೂರ್' ಅನ್ನು ಆಯ್ಕೆ ಮಾಡಿದ್ದಕ್ಕಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯವರನ್ನು ಟೀಕಿಸಿದ್ದರು. ಇದೀಗ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆಪರೇಷನ್ ಸಿಂಧೂರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದು 'ಒಂದು ರಾಷ್ಟ್ರ, ಒಂದು ಪತಿ' ಯೋಜನೆಯೇ? ಎಂದು ಕೇಳಿದ್ದಾರೆ.
ಚಂಡೀಗಢ, ಜೂನ್ 3: ಪಂಜಾಬ್ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಭಗವಂತ್ ಮಾನ್ (Bhagwant Mann) ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಇದು ಆಪರೇಷನ್ ಸಿಂಧೂರ್ ಅಲ್ಲ ಬಿಜೆಪಿ ಸಿಂಧೂರ್ ಎಂದು ಟೀಕಿಸಿದ್ದಾರೆ. ಇದು “ಒಂದು ರಾಷ್ಟ್ರ, ಒಂದು ಪತಿ” ಯೋಜನೆಯೇ? ಎಂದು ಪ್ರಶ್ನೆ ಕೇಳಿದ್ದಾರೆ. “ಬಿಜೆಪಿ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಮತ ಕೇಳುತ್ತಿದೆ. ಈ ಜನರು ‘ಸಿಂಧೂರ್’ ಅನ್ನು ತಮಾಷೆಯಾಗಿ ಪರಿವರ್ತಿಸಿದ್ದಾರೆ. ಅವರು ಪ್ರತಿ ಮನೆಗೆ ಸಿಂಧೂರವನ್ನು ಕಳುಹಿಸುತ್ತಿದ್ದಾರೆ. ನೀವು ಈಗ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಸಿಂಧೂರವನ್ನು ಹಚ್ಚಿಕೊಳ್ಳುತ್ತೀರಾ? ಇದು ‘ಒಂದು ರಾಷ್ಟ್ರ, ಒಂದು ಪತಿ’ ಯೋಜನೆಯೇ? ಎಂದು ಭಗವಂತ್ ಮಾನ್ ಕೇಳಿದ್ದಾರೆ. ಲುಧಿಯಾನದಲ್ಲಿ ಉಪಚುನಾವಣೆಗೂ ಮುನ್ನ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರು ಮತ ಯಾಚಿಸುತ್ತಿರುವ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಮಾಧ್ಯಮಗಳೊಂದಿಗೆ ಪ್ರಶ್ನೆ ಕೇಳಿದಾಗ ಅವರು ಈ ರೀತಿ ಲೇವಡಿ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ

ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್

ಪ್ರಿಯಾಂಕ್ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ

ಫೈಲ್ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
