AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಗೀತಾ ದುಡುಕಿನ ನಿರ್ಧಾರ; ಕಾರ್ತಿಕ್​ ಜತೆಗಿನ ಕಿರಿಕ್​ ಬಳಿಕ ಬಿಗ್​ ಬಾಸ್​ ಮನೆಯಿಂದ ಔಟ್​?

ಸಂಗೀತಾ ದುಡುಕಿನ ನಿರ್ಧಾರ; ಕಾರ್ತಿಕ್​ ಜತೆಗಿನ ಕಿರಿಕ್​ ಬಳಿಕ ಬಿಗ್​ ಬಾಸ್​ ಮನೆಯಿಂದ ಔಟ್​?

ಮದನ್​ ಕುಮಾರ್​
|

Updated on: Nov 22, 2023 | 9:01 AM

Share

ಸಂಗೀತಾ ಶೃಂಗೇರಿ ಅವರನ್ನು ಸಮಾಧಾನ ಮಾಡಲು ಕಾರ್ತಿಕ್​ ಪ್ರಯತ್ನಿಸಿದ್ದಾರೆ. ಆದರೂ ಅವರಿಬ್ಬರ ಜಗಳ ಮುಗಿಯಲೇ ಇಲ್ಲ. ‘ನಾನು ಆಟ ಆಡುವುದಿಲ್ಲ..’ ಎಂದು ಸಂಗೀತಾ ಹೇಳಿದ್ದಾರೆ. ನಂತರದಲ್ಲಿ ಬಿಗ್​ ಬಾಸ್​ ಮನೆಯ ಮುಖ್ಯ ದ್ವಾರ ಓಪನ್​ ಆಗಿದೆ. ಸಂಗೀತಾ ದುಡುಕಿನ ನಿರ್ಧಾರ ಮಾಡಿಬಿಟ್ರಾ ಎಂದು ಎಲ್ಲರಿಗೂ ಅನಿಸಿದೆ.

ನಟಿ ಸಂಗೀತಾ ಶೃಂಗೇರಿ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ಶೋನಲ್ಲಿ ಹೆಚ್ಚು ಹೈಲೈಟ್​ ಆಗುತ್ತಿದ್ದಾರೆ. ಕಾರ್ತಿಕ್​ ಮಹೇಶ್​ (Karthik Mahesh) ಜೊತೆಗಿನ ಅವರ ಒಡನಾಟ ಮತ್ತು ಜಗಳದ ಬಗ್ಗೆ ವೀಕ್ಷಕರು ಚರ್ಚೆ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಕಾರ್ತಿಕ್​ ಹಾಗೂ ಸಂಗೀತಾ ನಡುವಿನ ಮನಸ್ತಾಪ ಹೆಚ್ಚಾಗುತ್ತಲೇ ಇದೆ. ಕಾರ್ತಿಕ್​ ತಲೆ ಬೋಳಿಸಿಕೊಂಡ ಬಳಿಕ ಸಂಗೀತಾಗೆ ಪಶ್ಚಾತ್ತಾಪ ಕಾಡಿದೆ. ‘ನಾನಲ್ಲದೇ ಬೇರೆ ಯಾರೋ ಆಗುತ್ತಿದ್ದೇನೆ ಎನಿಸುತ್ತಿದೆ. ಇದು ನಾನಲ್ಲ’ ಎಂದು ಸಂಗೀತಾ ಅತ್ತಿದ್ದಾರೆ. ಅವರನ್ನು ಸಮಾಧಾನ ಮಾಡಲು ಕಾರ್ತಿಕ್​ ಪ್ರಯತ್ನಿಸಿದ್ದಾರೆ. ಆದರೂ ಅವರ ಜಗಳ ಮುಗಿಯಲೇ ಇಲ್ಲ. ‘ನಾನು ಆಟ ಆಡುವುದಿಲ್ಲ..’ ಎಂದು ಸಂಗೀತಾ ಹೇಳಿದ್ದಾರೆ. ನಂತರದಲ್ಲಿ ಬಿಗ್​ ಬಾಸ್​ ಮನೆಯ ಮುಖ್ಯ ದ್ವಾರ ಓಪನ್​ ಆಗಿದೆ. ಸಂಗೀತಾ ಶೃಂಗೇರಿ (Sangeetha Sringeri) ದುಡುಕಿನ ನಿರ್ಧಾರ ಮಾಡಿಬಿಟ್ರಾ ಎಂದು ಎಲ್ಲರಿಗೂ ಅನಿಸಿದೆ. ಈ ಕ್ಷಣದ ಪ್ರೋಮೋ ಬಿಡುಗಡೆ ಆಗಿದೆ. ಅತಿಥಿಯಾಗಿ ಬಂದಿದ್ದ ಬ್ರಹ್ಮಾಂಡ ಗುರೂಜಿ ಅವರನ್ನು ವಾಪಸ್​ ಕಳಿಸಲು ಕೂಡ ಬಾಗಿಲು ತೆರೆದಿರಬಹುದು ಎಂದು ವೀಕ್ಷಕರು ಊಹಿಸಿದ್ದಾರೆ. ಅಸಲಿಗೆ ಏನಾಗಿದೆ ಎಂಬುದು ಕಲರ್ಸ್​ ಕನ್ನಡದಲ್ಲಿ ನ.22ರ ರಾತ್ರಿ 9.30ಕ್ಕೆ ಪ್ರಸಾರ ಆಗುವ ಎಪಿಸೋಡ್​ನಲ್ಲಿ ತಿಳಿಯಲಿದೆ. ಜಿಯೋ ಸಿನಿಮಾದಲ್ಲಿ ದಿನ 24 ಗಂಟೆಯೂ ಲೈವ್​ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More