ಕದನವಿರಾಮದ ನಂತರವೂ ಲೆಬನಾನ್ ಮೇಲೆ ಇಸ್ರೇಲ್ ಭೀಕರ ದಾಳಿ; 300ಕ್ಕೂ ಹೆಚ್ಚು ಜನ ಸಾವು

Updated on: Apr 08, 2026 | 9:44 PM

ಇಸ್ರೇಲ್ ನಡೆಸಿದ ದಾಳಿಯಿಂದ ಲೆಬನಾನ್​ನಲ್ಲಿ 300ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಸಾವು-ನೋವಿನ ಬಗ್ಗೆ ಲೆಬನಾನ್‌ನ ಆರೋಗ್ಯ ಸಚಿವರು ಹೇಳಿಕೆ ನೀಡಿದ್ದು, ಇಂದು ಒಂದೇ ದಿನ 300ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ, ಹಲವರಿಗೆ ಗಾಯಗಳಾಗಿವೆ ಎಂದಿದ್ದಾರೆ. ಇಂದು ಇಸ್ರೇಲ್ ಅತ್ಯಂತ ಭೀಕರ ಹಾಗೂ ಅತಿ ದೊಡ್ಡ ದಾಳಿ ನಡೆಸಿದೆ. ಇರಾನ್‌ ಮತ್ತು ಅಮೆರಿಕದ ನಡುವಿನ ಯುದ್ಧಕ್ಕೆ ಕದನ ವಿರಾಮ ಜಾರಿಯಾಗುತ್ತಿದ್ದಂತೆ ಈ ದಾಳಿ ನಡೆದಿದೆ.

ಲೆಬನಾನ್, ಏಪ್ರಿಲ್ 8: ಕದನವಿರಾಮದ ಬಳಿಕವೂ ಲೆಬನಾನ್‌ ಮೇಲೆ ಇಸ್ರೇಲ್ (Israel) ಸೇನೆ ದಾಳಿ ನಡೆಸಿದೆ. ಇಸ್ರೇಲ್‌ ವಾಯುದಾಳಿಯಿಂದ 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಲೆಬನಾನ್‌ ಮೇಲಿನ ದಾಳಿ ಹೀಗೆಯೇ ಮುಂದುವರಿಯುತ್ತದೆ ಎಂದು ಇಸ್ರೇಲ್‌ ಸೇನಾ ಮುಖ್ಯಸ್ಥ ಹೇಳಿದ್ದಾರೆ. ಲೆಬನಾನ್‌ನಲ್ಲಿರುವ ಹಿಜಬೊಲ್ಲಾಹ ಉಗ್ರರ ಸರ್ವನಾಶವಾಗೋವರೆಗೆ ದಾಳಿ ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಕದನ ವಿರಾಮ ಏರ್ಪಟ್ಟರೂ ಲೆಬನಾನ್‌ನ ಮೇಲಿನ ಇಸ್ರೇಲ್‌ ದಾಳಿಗೆ ಲೆಬನಾನ್‌ ಸರ್ಕಾರ ಹಾಗೂ ಹಿಜಬೊಲ್ಲಾಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆದರೆ, ಇಸ್ರೇಲ್‌-ಅಮೆರಿಕ ಹಾಗೂ ಇರಾನ್‌ ನಡುವಿನ ಕದನ ವಿರಾಮದಲ್ಲಿ ಲೆಬನಾನ್‌ ಸೇರಿಲ್ಲ ಎಂದು ಟ್ರಂಪ್‌ ಹೇಳಿದ್ದಾರೆ. ಲೆಬನಾನ್‌ನಲ್ಲಿರುವ ಹಿಜಬೊಲ್ಲಾಹ ಒಂದು ಉಗ್ರಸಂಘಟನೆಯಾಗಿರುವುದರಿಂದ ಲೆಬನಾನ್‌ ಕದನ ವಿರಾಮದ ವ್ಯಾಪ್ತಿಯಲ್ಲಿಲ್ಲ ಎಂದಿದ್ದಾರೆ. ಹೀಗಾಗಿ ಇಸ್ರೇಲ್‌ ಲೆಬನಾನ್‌ನಲ್ಲಿರುವ ಹಿಜಬೊಲ್ಲಾಹ್‌ ಮೇಲೆ ದಾಳಿ ಮುಂದುವರಿಸುತ್ತದೆ ಎಂದು ಟ್ರಂಪ್‌ ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More