ಲೆಬನಾನ್​ನಲ್ಲಿ 400ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಇಸ್ರೇಲ್​ನ ರಾಕೆಟ್ ದಾಳಿ ಹೇಗಿತ್ತು

|

Updated on: Sep 24, 2024 | 10:38 AM

ಲೆಬನಾನ್​ ಮೇಲೆ ಮತ್ತೆ ಇಸ್ರೇಲ್​ ವೈಮಾನಿಕ ದಾಳಿ ನಡೆಸಿದೆ, ಸೋಮವಾರ ನಡೆಸಿದ ರಾಕೆಟ್ ದಾಳಿಯಲ್ಲಿ400ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ವೈಮಾನಿಕ ದಾಳಿಯ ವೈರಲ್ ವಿಡಿಯೋ ಇಲ್ಲಿದೆ.

ಗಾಜಾದಲ್ಲಿ ಅಕ್ಟೋಬರ್ 7 ರಂದು ಯುದ್ಧ ಪ್ರಾರಂಭವಾದಾಗಿನಿಂದ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪು ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ವೈಮಾನಿಕ ದಾಳಿ ನಡೆಸುತ್ತಲೇ ಇದೆ. ದಕ್ಷಿಣ ಲೆಬನಾನ್ ಮೇಲೆ ಸೋಮವಾರ ನಡೆದ ವೈಮಾನಿಕ ದಾಳಿಯಲ್ಲಿ 400ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 1,650 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್​ನ ಆರೋಗ್ಯ ಸಚಿವಾಲಯ ತಿಳಿಸಿದೆ. ಮೃತರಲ್ಲಿ 100 ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ.
ಲೆಬನಾನ್‌ನೊಂದಿಗೆ ಇಸ್ರೇಲ್‌ನ ಉತ್ತರದ ಗಡಿಯಲ್ಲಿ ಸಣ್ಣ ಘರ್ಷಣೆಗಳು ಮತ್ತು ಚಕಮಕಿಗಳು ಸಾಮಾನ್ಯವಾಗಿವೆ. ಇಲ್ಲಿಯವರೆಗಿನ ಅತಿದೊಡ್ಡ ದಾಳಿ ಇದಾಗಿದೆ ಆ ದಾಳಿ ಹೇಗಿತ್ತು ಎಂಬುದರ ಕುರಿತ ಎದೆ ಝೆಲ್ಲೆನಿಸೋ ವಿಡಿಯೋ ಇಲ್ಲಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ