ಐಟಿ, ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿವೆ, ಗುತ್ತಿಗೆದಾರನ ಮನೆಯಲ್ಲಿ ಸಿಕ್ಕ ಹಣ ಯಾರದು ಅಂತ ತನಿಖೆ ಮಾಡಿಸಲಿ: ಕೆಂಪಣ್ಣ, ಗುತ್ತಿಗೆದಾರರ ಸಂಘದ ಅಧ್ಯಕ್ಷ

|

Updated on: Oct 17, 2023 | 5:10 PM

ತನಿಖೆಯಲ್ಲಿ ತಮ್ಮ ಗುತ್ತಿಗೆದಾರರ ಸಂಘದ ಸದಸ್ಯನ ತಪ್ಪಿದೆ ಅಂತ ಗೊತ್ತಾದರೆ ತನಿಖಾ ಸಂಸ್ಥೆ ನೀಡುವ ಶಿಕ್ಷೆಯನ್ನು ಅಂಗೀಕರಿಸುತ್ತೇವೆ ಎಂದು ಕೆಂಪಣ್ಣ ಹೇಳಿದರು. ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ 40 ಪರ್ಸೆಂಟ್ ಕಮೀಶನ್ ಆರೋಪಕ್ಕೆ ತಾವು ಈಗಲೂ ಬದ್ಧರಾಗಿರುವುದಾಗಿ ಹೇಳಿದ ಕೆಂಪಣ್ಣ, ಒಬ್ಬ ನಿವೃತ್ತ ಹೈಕೋರ್ಟ್ ನ್ಯಾಯಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿದರೆ ಅದರ ಮುಂದೆ ಮಾಡಿದ ಎಲ್ಲ ಆರೋಪಗಳಿಗೆ ಸಾಕ್ಷ್ಯ ಒದಗಿಸುವುದಾಗಿ ಕೆಂಪಣ್ಣ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರಾಜ್ಯ ಗುತ್ತಿಗೆ ದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna), ಐಟಿ ದಾಳಿ ನಡೆಸಿದಾಗ ಬಿಬಿಎಂಪಿ ಗುತ್ತಿಗೆದಾರ ಆರ್ ಅಂಬಿಕಾಪತಿ (R Ambikapathy) ಮನೆಯಲ್ಲಿ ಸಿಕ್ಕ ದಾಖಲೆರಹಿತ ಹಣ ಕಾಂಗ್ರೆಸ್ ನಾಯಕರಿಗೆ ಕಮೀಶನ್ ರೂಪದಲ್ಲಿ ಸಿಕ್ಕಿದ್ದು ಅಂತ ಅರೋಪಿಸುತ್ತಿರುವ ಬಿಜೆಪಿ ನಾಯಕರನ್ನು (BJP leaders) ತರಾಟೆಗೆ ತೆಗೆದುಕೊಂಡರು. ಹಣ ಕಾಂಗ್ರೆಸ್ ನಾಯಕರಿಗೆ ಸೇರಿದ್ದು ಅಂತ ಅವರಿಗೆ ಖಾತ್ರಿಯಾಗಿ ಗೊತ್ತಿದ್ದರೆ ಐಟಿ, ಸಿಬಿಐ ಮತ್ತು ಈಡಿ ಮೊದಲಾದ ಇಲಾಖೆಗಳೆಲ್ಲ ಕೇಂದ್ರ ಸರ್ಕಾರದ ಅಧೀನದಲ್ಲಿವೆ, ತನಿಖೆ ಮಾಡಿಸಲಿ, ಯಾರಾದರೂ ಅವರನ್ನು ತಡೆದಿದ್ದಾರಾ? ಅಂತ ಕೆಂಪಣ್ಣ ಪ್ರಶ್ನಿಸಿದರು. ತನಿಖೆಯಲ್ಲಿ ತಮ್ಮ ಗುತ್ತಿಗೆದಾರರ ಸಂಘದ ಸದಸ್ಯನ ತಪ್ಪಿದೆ ಅಂತ ಗೊತ್ತಾದರೆ ತನಿಖಾ ಸಂಸ್ಥೆ ನೀಡುವ ಶಿಕ್ಷೆಯನ್ನು ಅಂಗೀಕರಿಸುತ್ತೇವೆ ಎಂದು ಕೆಂಪಣ್ಣ ಹೇಳಿದರು. ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ 40 ಪರ್ಸೆಂಟ್ ಕಮೀಶನ್ ಆರೋಪಕ್ಕೆ ತಾವು ಈಗಲೂ ಬದ್ಧರಾಗಿರುವುದಾಗಿ ಹೇಳಿದ ಕೆಂಪಣ್ಣ, ಒಬ್ಬ ನಿವೃತ್ತ ಹೈಕೋರ್ಟ್ ನ್ಯಾಯಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿದರೆ ಅದರ ಮುಂದೆ ಮಾಡಿದ ಎಲ್ಲ ಆರೋಪಗಳಿಗೆ ಸಾಕ್ಷ್ಯ ಒದಗಿಸುವುದಾಗಿ ಕೆಂಪಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on