ಸ್ವಾಮೀಜಿಗಳ ಬಗ್ಗೆ  ಮಾತಾಡಿರುವುದಕ್ಕೆ ಸಿದ್ದರಾಮಯ್ಯ ಅವರೇ ಉತ್ತರ ಕೊಡುತ್ತಾರೆ ಎಂದರು ಡಿಕೆ ಶಿವಕುಮಾರ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 26, 2022 | 6:22 PM

ಅವರು ಮುಖ್ಯಮಂತ್ರಿಗಳಾಗಿದ್ದಾಗ ಅನೇಕ ಮಠಮಾನ್ಯಗಳಿಗೆ ಸಹಾಯ ಮಾಡಿದ್ದಾರೆ, ಎಲ್ಲ ಸ್ವಾಮೀಜಿಗಳು ಮತ್ತು ಪೀಠಗಳ ಬಗ್ಗೆ ಅವರಿಗೆ ಗೌರವ ಮತ್ತು ವಿಶ್ವಾಸವಿದೆ. ಅಷ್ಟಾಗಿಯೂ ಅವರು ಮಾತಾಡಿರುವುದಕ್ಕೆ ಅವರೇ ಉತ್ತರ ಕೊಡುತ್ತಾರೆ ಎಂದು ಶಿವಕುಮಾರ ಹೇಳಿದರು.

ಜಾರಿಯಲ್ಲಿರುವ ವಿಧಾನಮಂಡಲದ ಬಜೆಟ್ ಅಧಿವೇಶನದಲ್ಲಿ ಈ ವಾರವೆಲ್ಲ ತಮ್ಮ ಗೈರುಹಾಜರಿಯ ಮೂಲಕ ಹಲವು ಊಹಾಪೋಹಗಳಿಗೆ ಕಾರಣರಾಗಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ಶನಿವಾರ ಬೆಂಗಳೂರಿನ ಕೆಪಿಸಿಸಿ (KPCC) ಕಚೇರಿಯಲ್ಲಿ ಕಾಣಿಸಿಕೊಂಡರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಸ್ವಾಮೀಜಿಗಳು ತಲೆಯನ್ನು ಕಾವಿ ವಸ್ತ್ರದೊಂದಿಗೆ ಮುಚ್ಚಬಹುದಾದರೆ, ಮುಸ್ಲಿಂ ವಿದ್ಯಾರ್ಥಿನಿಯರು ತಲೆಯನ್ನು ಹಿಜಾಬ್ ನಿಂದ ಕವರ್ ಮಾಡಿದರೆ ಅದು ತಪ್ಪು ಹೇಗಾಗುತ್ತದೆ ಅಂತ ವಿವಾದಾತ್ಮಕ ಹೇಳಿಕೆ ನೀಡಿ ಹಲವಾರು ಮಠಾಧೀಶರ, ಸ್ವಾಮೀಜಿಗಳ ಅಸಮಾಧಾನಕ್ಕೆ ಕಾರಣರಾಗಿದ್ದಾರೆ. ಸ್ವಾಮೀಜಿಗಳು ಕೋಪ ವ್ಯಕ್ತಪಡಿಸಿದ ನಂತರ ಅವರು ಟ್ವೀಟ್ ಗಳ ಮೂಲಕ ಸಮಜಾಯಿಷಿಗಳನ್ನು ನೀಡಿದ್ದಾರೆ. ಮಾಧ್ಯಮದವರು ಶಿವಕುಮಾರ ಅವರಿಗೆ ಸಿದ್ದರಾಮಯ್ಯ ನೀಡಿರುವ ವಿವಾದಾತ್ಮ ಹೇಳಿಕೆಯನ್ನು ಉಲ್ಲೇಖಿಸಿ, ಅದಕ್ಕೆ ಅವರ ಪ್ರತಿಕ್ರಿಯೆಯನ್ನು ಕೇಳುತ್ತಾ ಪಕ್ಷದ ನಿಲುವು ಏನು ಅನ್ನುತ್ತಾರೆ.

ಮೊದಲಿಗೆ ಶಿವಕುಮಾರ್ ಅವರು ತಮಗೂ ಅದಕ್ಕೂ ಸಂಬಂಧವಿಲ್ಲ ಅನ್ನುವ ರೀತಿಯಲ್ಲಿ ಮಾತಾಡುತ್ತಾರೆ. ಸಿದ್ದರಾಮಯ್ಯ ಹೇಳಿರುವುದಕ್ಕೆ ಅವರೇ ಉತ್ತರ ಕೊಡುತ್ತಾರೆ, ನೀವು ಅವರನ್ನೇ ಕೇಳಬೇಕು ಎಂದು ಹೇಳಿದ ನಂತರ, ಅವರಿಗೆ ಎಲ್ಲ ಧರ್ಮಗಳ ಬಗ್ಗೆ ಮತ್ತು ಮಠಾಧೀಶರ ಬಗ್ಗೆ ಅಪಾರ ಗೌರವ ಇದೆ ಎನ್ನುತ್ತಾರೆ.

ಅವರು ಮುಖ್ಯಮಂತ್ರಿಗಳಾಗಿದ್ದಾಗ ಅನೇಕ ಮಠಮಾನ್ಯಗಳಿಗೆ ಸಹಾಯ ಮಾಡಿದ್ದಾರೆ, ಎಲ್ಲ ಸ್ವಾಮೀಜಿಗಳು ಮತ್ತು ಪೀಠಗಳ ಬಗ್ಗೆ ಅವರಿಗೆ ಗೌರವ ಮತ್ತು ವಿಶ್ವಾಸವಿದೆ. ಅಷ್ಟಾಗಿಯೂ ಅವರು ಮಾತಾಡಿರುವುದಕ್ಕೆ ಅವರೇ ಉತ್ತರ ಕೊಡುತ್ತಾರೆ ಎಂದು ಶಿವಕುಮಾರ ಹೇಳಿದರು.

ಇದನ್ನೂ ಓದಿ:   Siddaramaiah: ರಾಗಿ ಖರೀದಿ ಮೇಲೆ ಹೇರಿರುವ ಮಿತಿ ತೆರವುಗೊಳಿಸುವಂತೆ ಪ್ರಧಾನಿ ಮೋದಿಯನ್ನು ಒತ್ತಾಯಿಸಿ ಪತ್ರ ಬರೆದ ಸಿದ್ದರಾಮಯ್ಯ

Follow us on