‘ಒಂದು ಗೋಲ್ಡನ್ ಅವಕಾಶ ಕೈ ತಪ್ಪಿದೆ’; ನಿರ್ದೇಶನದ ಬಗ್ಗೆ ಉಪೇಂದ್ರ ಹೀಗೆ ಹೇಳಿದ್ದೇಕೆ?
ಅಪ್ಪು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’ ಎಲ್ಲ ಕಡೆಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಂದು (ಮಾರ್ಚ್ 26) ಉಪೇಂದ್ರ ಅವರು ಈ ಚಿತ್ರವನ್ನು ವೀಕ್ಷಣೆ ಮಾಡಿದ್ದಾರೆ. ಆ ಬಳಿಕ ಅವರು ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ
ಪುನೀತ್ ರಾಜ್ಕುಮಾರ್ (Puneeth Rajkumar) ಇಷ್ಟುಬೇಗ ನಿಧನ ಹೊಂದುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ. ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’ (James Movie) ಎಲ್ಲ ಕಡೆಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಂದು (ಮಾರ್ಚ್ 26) ಉಪೇಂದ್ರ (Upendra) ಅವರು ಈ ಚಿತ್ರವನ್ನು ವೀಕ್ಷಣೆ ಮಾಡಿದ್ದಾರೆ. ಆ ಬಳಿಕ ಅವರು ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ. ‘ಓರ್ವ ನಿರ್ದೇಶಕನಾಗಿ ಹೇಳಬೇಕು ಎಂದರೆ ನಾನು ಒಂದು ಗೋಲ್ಡನ್ ಅವಕಾಶವನ್ನು ಮಿಸ್ ಮಾಡಿಕೊಂಡೆ. ಅವರಿಗೆ ಆ್ಯಕ್ಷನ್ಕಟ್ ಹೇಳುವ ಅವಕಾಶ ನನಗೆ ಸಿಗಲೇ ಇಲ್ಲ. ಜೇಮ್ಸ್ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಆ್ಯಕ್ಷನ್ ದೃಶ್ಯಗಳು ರೋಮಾಂಚನಕಾರಿಯಾಗಿದೆ. ಇಂಟರ್ವಲ್ ಟ್ವಿಸ್ಟ್ಗೆ ಥ್ರಿಲ್ ಆಗಿಬಿಟ್ಟೆ’ ಎಂದಿದ್ದಾರೆ ಉಪೇಂದ್ರ. ನಟನೆ ಮಾತ್ರವಲ್ಲದೆ, ನಿರ್ದೇಶನದ ಮೂಲಕವೂ ಉಪೇಂದ್ರ ಹೆಸರು ಮಾಡಿದ್ದಾರೆ. ಅವರು ನಿರ್ದೇಶನಕ್ಕೆ ಕಂಬ್ಯಾಕ್ ಮಾಡುವ ಬಗ್ಗೆ ಇತ್ತೀಚೆಗೆ ಘೋಷಣೆ ಮಾಡಿದ್ದರು.
ಇದನ್ನೂ ಓದಿ: ಮನೆಯಲ್ಲಿ ಎನರ್ಜಿ ಚೇಂಜ್ ಆಗ್ಬೇಕು ಅಂದ್ರೆ ಏನು ಮಾಡ್ಬೇಕು?; ಪ್ರಿಯಾಂಕಾ ಉಪೇಂದ್ರ ಕೊಟ್ರು ಟಿಪ್ಸ್
ಉಪ್ಪಿ ಡೈರೆಕ್ಷನ್ ಸಿನಿಮಾ ಟೈಟಲ್ ಅರ್ಥವೇನು?; ಎಲ್ಲವನ್ನೂ ವಿವರಿಸಿದ ಪ್ರಿಯಾಂಕಾ ಉಪೇಂದ್ರ