AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

James: ಪುನೀತ್​ ನಟನೆಯ ಕೊನೆಯ ಚಿತ್ರ ‘ಜೇಮ್ಸ್’ಗೂ ಥಿಯೇಟರ್ ಸಮಸ್ಯೆ; ಚಿತ್ರತಂಡ ಹೇಳಿದ್ದೇನು?

Puneeth Rajkumar | Chetan Kumar: ಪುನೀತ್ ರಾಜ್​ಕುಮಾರ್ ನಟನೆಯ ‘ಜೇಮ್ಸ್’ ಚಿತ್ರ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದರೂ ಕೂಡ ಚಿತ್ರಮಂದಿರಗಳ ಸಮಸ್ಯೆ ಎದುರಿಸುತ್ತಿದೆ. ಲಕ್ಷಾಂತರ ಅಭಿಮಾನಿಗಳ ಆಸೆಗೆ ನಿರಾಸೆ ಮಾಡಬೇಡಿ ಎಂದು ನಿರ್ದೇಶಕ ಚೇತನ್ ಕುಮಾರ್ ಚಿತ್ರಮಂದಿರಗಳಿಗೆ ಮನವಿ ಮಾಡಿದ್ದಾರೆ. ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹೇಳಿದ್ದೇನು? ಪೂರ್ಣ ವಿವರ ಇಲ್ಲಿದೆ.

James: ಪುನೀತ್​ ನಟನೆಯ ಕೊನೆಯ ಚಿತ್ರ ‘ಜೇಮ್ಸ್’ಗೂ ಥಿಯೇಟರ್ ಸಮಸ್ಯೆ; ಚಿತ್ರತಂಡ ಹೇಳಿದ್ದೇನು?
‘ಜೇಮ್ಸ್’ ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್, ನಿರ್ದೇಶಕ ಚೇತನ್
TV9 Web
| Updated By: shivaprasad.hs|

Updated on:Mar 22, 2022 | 8:43 PM

Share

ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದರೂ ಕೂಡ ‘ಜೇಮ್ಸ್’ (James) ಚಿತ್ರಕ್ಕೆ ಚಿತ್ರಮಂದಿರಗಳ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಚೇತನ್ ಕುಮಾರ್, ರಾಜ್ಯದ ವಿವಿದೆಡೆಯಿಂದ ಅಭಿಮಾನಿಗಳು ಕರೆಮಾಡಿ ಚಿತ್ರ ತೆಗೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದನ್ನು ಉಲ್ಲೇಖಿಸಿದ್ದಾರೆ. ಅಲ್ಲದೇ ವಿತರಕರಿಗೆ ಹಾಗೂ ಪ್ರದರ್ಶಕರಿಗೆ ಉತ್ತಮವಾಗಿ ಓಡುತ್ತಿರುವ ‘ಜೇಮ್ಸ್’ ಚಿತ್ರವನ್ನು ತೆಗೆಯದಂತೆ ಅವರು ಮನವಿ ಮಾಡಿದ್ದಾರೆ. ಈ ಕುರಿತು ವಿಡಿಯೋ ಸಂದೇಶವನ್ನು ಚೇತನ್ ಕುಮಾರ್ (Chetan Kumar) ಹಂಚಿಕೊಂಡಿದ್ದಾರೆ. ಅವರ ಮಾತುಗಳು ಇಲ್ಲಿವೆ. ‘‘ಎಲ್ಲಾ ಚಿತ್ರಮಂದಿರದ ಮಾಲಿಕರಿಗೆ, ಪ್ರದರ್ಶಕರಿಗೆ ಮನವಿ. ಎಲ್ಲರ ಸಹಕಾರದಿಂದ ‘ಜೇಮ್ಸ್’ ರಾಜ್ಯಾದ್ಯಂತ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿದೆ. ದಯವಿಟ್ಟು ಎಲ್ಲರ ಸಹಕಾರ ಎರಡನೇ ವಾರದಲ್ಲೂ ಇರಲಿ. ಕಾರಣ, ಅಭಿಮಾನಿಗಳು ವಿವಿಧ ಭಾಗಗಳಿಂದ ಕರೆಮಾಡುತ್ತಿದ್ದು, ಎರಡನೇ ವಾರ ಜೇಮ್ಸ್ ಸಿನಿಮಾನ ತೆಗೆಯುತ್ತಿದ್ದಾರೆ ಎಂಬ ಮಾಹಿತಿ ನೀಡುತ್ತಿದ್ದಾರೆ. ಇನ್ನೂ ಲಕ್ಷಾಂತರ ಜನರು ಬಂದು ಚಿತ್ರ ನೋಡೋದಿದೆ. ಅಪ್ಪು ಸರ್ ನಟಿಸಿರುವ ಕೊನೆಯ ಕಮರ್ಷಿಯಲ್ ಸಿನಿಮಾ ಇದು. ಎಲ್ಲರ ಸಹಕಾರ ಬಹಳ ಮುಖ್ಯ. ಲಕ್ಷಾಂತರ ಅಭಿಮಾನಿಗಳ ಆಸೆ, ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕು ಎನ್ನುವುದು. ಅವರ ಆಸೆಗೆ ನಿರಾಸೆ ಮಾಡಬೇಡಿ. ಕನ್ನಡಿಗರ ಭಾವನೆಯಾಗಿ ಉಳಿದುಕೊಂಡಿರುವ ‘ಜೇಮ್ಸ್​’ಗೆ ಎಲ್ಲರ ಸಹಕಾರವಿರಲಿ’’ ಎಂದಿದ್ದಾರೆ ಚೇತನ್.

ಚೇತನ್ ಮಾತುಗಳು ಇಲ್ಲಿವೆ:

ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹೇಳಿದ್ದೇನು?

ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ‘ಜೇಮ್ಸ್’ ಚಿತ್ರಕ್ಕೆ ಚಿತ್ರಮಂದಿರಗಳ ಸಮಸ್ಯೆ ಆಗುತ್ತಿರುವ ವಿಚಾರವನ್ನು ಪ್ರಸ್ತಾಪಿಸಿದ್ದರು. ಈ ಕುರಿತು ನಿರ್ಮಾಪಕ ಕಿಶೋರ್ ಪತ್ತಿಕೊಂಡ ತಮ್ಮ ಗಮನಕ್ಕೆ ವಿಚಾರ ತಂದಿದ್ದನ್ನು ಅವರು ಪ್ರಸ್ತಾಪಿಸಿದ್ದರು. ಪ್ರಸ್ತುತ ಕೊಪ್ಪಳದ ಗಂಗಾವತಿಯಲ್ಲಿ ಚಿತ್ರದ ಪ್ರಚಾರದ ಪ್ರಯುಕ್ತ ತೆರಳಿರುವ ಕಿಶೋರ್, ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

‘‘ನಾನು ಸಿದ್ದರಾಮಯ್ಯನವರನ್ನು ಭೇಟಿ ಆಗಿದ್ದು ಸಿನಿಮಾ ವೀಕ್ಷಿಸಲು ಅಹ್ವಾನಿಸಲು. ಅವರು ಸಿನಿಮಾ ಹೇಗೆ ನಡಿತಿದೆ ಎಂದು ಕೇಳಿದಾಗ ಕೆಲವು ಕಡೆ ಸಮಸ್ಯೆ ಆಗುತ್ತಿರುವುದನ್ನು ಹೇಳಿದ್ದೇನೆ. ಚಿತ್ರಮಂದಿರದ ಮಾಲೀಕರೋರ್ವರು ಒಂದು ಶೋ ಹಾಕ್ತೀನಿ ಎಂದಿದ್ದರು. ಆದರೆ ನಾನು ಅದಕ್ಕೆ ಒಪ್ಪಲಿಲ್ಲ. ನನ್ನ ಸಿನಿಮಾಗೆ ಡಿಸ್ಟರ್ಬ್ ಮಾಡಬೇಡಿ ಎಂದು ಹೇಳಿದ್ದೇನೆ. ಅವರಿಗೆ ಯಾರ ಒತ್ತಡ ಹಾಕಿದಾರೆ ನನಗೆ ಗೊತ್ತಿಲ್ಲ’’ ಎಂದಿದ್ದಾರೆ ಕಿಶೋರ್.

ಮುಂದುವರೆದು ಮಾತನಾಡಿದ ಅವರು, ‘‘ಸಿನಿಮಾ ಪ್ಲಾಫ್ ಆಗಿಲ್ಲ ಹಿಟ್ ಆಗಿದೆ. ನಮಗೆ ಸಮಸ್ಯೆ ಆಗಿರೋದು,ನಿಜ. ಎಲ್ಲಿ ಅನ್ನೋದು ಬೇಡ. ಕಾಶ್ಮೀರ್ ಫೈಲ್ಸ್ ಸಿನಿಮಾದಿಂದ ಸಮಸ್ಯೆ ಆಗಿದೆ. ನಾಲ್ಕು ಶೋ ಜೇಮ್ಸ್​​ಗೆ ಬೇಕೇ ಬೇಕು. ಈ ವಿಚಾರವನ್ನು ಫಿಲ್ಮ್ ಚೆಂಬರ್​ಗೆ ತಿಳಿಸಿಲ್ಲ’’ ಎಂದು ಕಿಶೋರ್ ಹೇಳಿದ್ದಾರೆ.

ಈ ಮೊದಲು ‘ಜೇಮ್ಸ್’ ಚಿತ್ರದ ಚಿತ್ರಮಂದಿರ ಸಮಸ್ಯೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತು:

ಇದನ್ನೂ ಓದಿ:

ರಾಕಿ ಭಾಯ್​ಗೆ ‘ದುನಿಯಾ’ ಗೆಲ್ಲಲು ನೀವೂ ಸಾಥ್ ನೀಡಬಹುದು! ‘ಕೆಜಿಎಫ್ 2’ ಚಿತ್ರತಂಡ ನೀಡಿರುವ ಭರ್ಜರಿ ಆಫರ್ ಏನು ಗೊತ್ತಾ?

ಸಿನಿಮಾ ಒಪ್ಪಿಕೊಳ್ಳುವ ಮುನ್ನ ತಾರೆಯರು ವಿಧಿಸೋ ಷರತ್ತುಗಳಿವು!

Published On - 8:18 pm, Tue, 22 March 22