James Box Office Collection: ಬಾಕ್ಸ್​ ಆಫೀಸ್​ನಲ್ಲಿ ಹೊಸ ದಾಖಲೆ ಬರೆದ ‘ಜೇಮ್ಸ್’; ಅಪ್ಪು ಶತಕದ ಸರದಾರ

ಸ್ಯಾಂಡಲ್​ವುಡ್​ನಲ್ಲಿ ಯಾವ ಚಿತ್ರವೂ 100 ಕೋಟಿಯನ್ನು ನಾಲ್ಕು ದಿನಕ್ಕೆ ಮಾಡಿರಲಿಲ್ಲ. ಈಗ ‘ಜೇಮ್ಸ್​’ ಸಿನಿಮಾ ಖಾತೆಗೆ ಈ ಹೊಸ ದಾಖಲೆ ಸೇರಿದಂತೆ ಆಗಿದೆ.

James Box Office Collection: ಬಾಕ್ಸ್​ ಆಫೀಸ್​ನಲ್ಲಿ ಹೊಸ ದಾಖಲೆ ಬರೆದ ‘ಜೇಮ್ಸ್’; ಅಪ್ಪು ಶತಕದ ಸರದಾರ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 22, 2022 | 7:26 AM

ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆಗೆ ಬಂದ ಪುನೀತ್​ ರಾಜ್​ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್​’ ಸಿನಿಮಾ (James Movie) ಬಾಕ್ಸ್ ಆಫೀಸ್​ನಲ್ಲಿ ಅಕ್ಷರಶಃ ಅಬ್ಬರಿಸಿದೆ. ಈ ಚಿತ್ರ ನಾಲ್ಕೇ ದಿನಕ್ಕೆ ವಿಶ್ವ ಮಟ್ಟದ ಕಲೆಕ್ಷನ್​ನಲ್ಲಿ 100 ಕೋಟಿ ರೂಪಾಯಿ ಕ್ಲಬ್​ ಸೇರಿದೆ. ಈ ಮೂಲಕ ಅಪ್ಪು ಶತಕದ ಸರದಾರರಾಗಿದ್ದಾರೆ. ಪುನೀತ್​ ಹೀರೋ ಆಗಿ ಕಾಣಿಸಿಕೊಂಡ ಕೊನೆಯ ಸಿನಿಮಾ ಇಷ್ಟು ದೊಡ್ಡ ಕಲೆಕ್ಷನ್ (James Box Office Collection) ಮಾಡಿರುವುದು ಸಹಜವಾಗಿಯೇ ಅವರ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಈ ಚಿತ್ರ ಮತ್ತಷ್ಟು ಹಣ ಬಾಚುವ ಸಾಧ್ಯತೆ ಇದೆ. ಸೋಶಿಯಲ್​ ಮೀಡಿಯಾದಲ್ಲಿ ಪರಭಾಷೆಯವರೂ ಕೂಡ ಚಿತ್ರದ ಗಳಿಕೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಪುನೀತ್​ ರಾಜ್​ಕುಮಾರ್ ಜನ್ಮದಿನದ ಪ್ರಯುಕ್ತ ‘ಜೇಮ್ಸ್​’ ಸಿನಿಮಾ ಗುರುವಾರ ಅಂದರೆ ಮಾರ್ಚ್​ 17ರಂದು ತೆರೆಗೆ ಬಂತು. ಅಂದು ಮುಂಜಾನೆ ನಾಲ್ಕು ಗಂಟೆಯಿಂದಲೇ ಸಿನಿಮಾ ಶೋ ಆರಂಭಗೊಂಡಿತ್ತು. ಬೆಂಗಳೂರಿನಲ್ಲಿ ನೂರಾರು ಫ್ಯಾನ್​ ಶೋಗಳು ನಡೆದವು. ಹೀಗಾಗಿ, ಫಸ್ಟ್​ಡೇ ಸಿನಿಮಾ 30 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿತ್ತು. ಆ ಬಳಿಕವೂ ಬಾಕ್ಸ್​ ಆಫೀಸ್​ನಲ್ಲಿ ಪುನೀತ್ ಸಿನಿಮಾದ ಅಬ್ಬರ ಮುಂದುವರಿದಿದೆ. ಭಾನುವಾರದ ಕಲೆಕ್ಷನ್​ ಸೇರಿದರೆ ಸಿನಿಮಾ 100 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ‘ಜೇಮ್ಸ್​’ ಕನ್ನಡದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಯಾವ ದಿನ ಎಷ್ಟು ಕಲೆಕ್ಷನ್​ ಮಾಡಿದೆ ಎನ್ನುವ ಬಗ್ಗೆ ಚಿತ್ರತಂಡ ಮಾಹಿತಿ ನೀಡಿಲ್ಲ.

ಸ್ಯಾಂಡಲ್​ವುಡ್​ನಲ್ಲಿ ಯಾವ ಚಿತ್ರವೂ 100 ಕೋಟಿಯನ್ನು ನಾಲ್ಕು ದಿನಕ್ಕೆ ಮಾಡಿರಲಿಲ್ಲ. ಈಗ ‘ಜೇಮ್ಸ್​’ ಸಿನಿಮಾ ಖಾತೆಗೆ ಈ ಹೊಸ ದಾಖಲೆ ಸೇರಿದಂತೆ ಆಗಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟರ್​ ಒಂದು ಹರಿದಾಡುತ್ತಿದ್ದು, ಇದು ತಂಡದ ಕಡೆಯಿಂದಲೇ ರಿಲೀಸ್ ಆಗಿದೆ ಎನ್ನಲಾಗಿದೆ.

‘ಜೇಮ್ಸ್​’ ಸಿನಿಮಾ ಮೊದಲ ನಾಲ್ಕು ದಿನ ಅಬ್ಬರಿಸಿ ಕಲೆಕ್ಷನ್​ ಮಾಡಿದೆ. ಈ ವಾರವೂ ಚಿತ್ರವನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು, ಸಿನಿಪ್ರಿಯರು ಚಿತ್ರಮಂದಿರದತ್ತ ಹೆಜ್ಜೆ ಹಾಕಬಹುದು. ಹೀಗಾಗಿ, ಸಿನಿಮಾದ ಕಲೆಕ್ಷನ್​ ಈ ವಾರ ಮತ್ತಷ್ಟು ಹೆಚ್ಚಬಹುದು. ‘ಜೇಮ್ಸ್​’ ಚಿತ್ರಕ್ಕೆ ಚೇತನ್​ ಕುಮಾರ್ ಆ್ಯಕ್ಷನ್ ಕಟ್​ ಹೇಳಿದ್ದಾರೆ. ಪ್ರಿಯಾ ಆನಂದ್ ಚಿತ್ರದ ನಾಯಕಿ. ಸೈನಿಕನ ಪಾತ್ರದಲ್ಲಿ ಪುನೀತ್​ ಮಿಂಚಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗ ಇದೆ.

ಇದನ್ನೂ ಓದಿ: ‘ದಿ ಕಾಶ್ಮೀರ್​ ಫೈಲ್ಸ್​’ಗಿಂತಲೂ ಹೆಚ್ಚು IMDb ರೇಟಿಂಗ್​ ಪಡೆದ ‘ಜೇಮ್ಸ್​’; 10ಕ್ಕೆ 9.9 ನೀಡಿದ ಪ್ರೇಕ್ಷಕರು

 ‘ಜೇಮ್ಸ್​’ ಸಿನಿಮಾ ನೋಡಲು ಬಂದ ಅಭಿಮಾನಿಗಳಿಗೆ ಭರ್ಜರಿ ಬಾಡೂಟ; ಇಲ್ಲಿದೆ ವಿಡಿಯೋ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ