ಉರುಸ್ ಮೆರವಣಿಗೆಯಲ್ಲಿ ರಾರಾಜಿಸಿದ ಪುನೀತ್ ಫೋಟೋ; ಇಲ್ಲಿದೆ ವಿಡಿಯೋ
ಮುಸ್ಲಿಂ ಧರ್ಮದವರು ನಡೆಸುವ ಉರುಸ್ ಕಾರ್ಯಕ್ರಮದಲ್ಲೂ ಅಪ್ಪು ಫೋಟೋ ರಾರಾಜಿಸಿದೆ. ಕೊಪ್ಪಳದ ಕಿನ್ನಾಳ ಗ್ರಾಮದಲ್ಲಿ ನಡೆದ ಉರುಸ್ ಮೆರವಣಿಗೆ ವೇಳೆ ಅಪ್ಪು ಫೋಟೋವನ್ನು ತೆಗೆದುಕೊಂಡು ಹೋಗಲಾಗಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಮೇಲೆ ಇರುವ ಅಭಿಮಾನ ತುಂಬಾನೇ ದೊಡ್ಡದು. ಪುನೀತ್ ಅವರನ್ನು ಅಭಿಮಾನಿಗಳು ಆರಾಧಿಸುತ್ತಿದ್ದರು. ಈಗ ಅಪ್ಪು ಇಲ್ಲ ಎಂಬ ನೋವು ಬಲವಾಗಿ ಕಾಡುತ್ತಿದೆ. ಹೀಗಾಗಿ, ಎಲ್ಲಾ ಸಂದರ್ಭದಲ್ಲೂ ಪುನೀತ್ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ಮುಸ್ಲಿಂ ಧರ್ಮದವರು ನಡೆಸುವ ಉರುಸ್ ಕಾರ್ಯಕ್ರಮದಲ್ಲೂ ಅಪ್ಪು ಫೋಟೋ ರಾರಾಜಿಸಿದೆ. ಕೊಪ್ಪಳದ ಕಿನ್ನಾಳ ಗ್ರಾಮದಲ್ಲಿ ನಡೆದ ಉರುಸ್ ಮೆರವಣಿಗೆ ವೇಳೆ ಅಪ್ಪು (Appu) ಫೋಟೋವನ್ನು ತೆಗೆದುಕೊಂಡು ಹೋಗಲಾಗಿದೆ. ಈ ಮೂಲಕ ಅಪ್ಪುಗೆ ಗೌರವ ಸಲ್ಲಿಕೆ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗಿದೆ. ಅಮೆರಿಕದಲ್ಲಿ ಪುನೀತ್ ಅವರ ‘ಜೇಮ್ಸ್’ ಚಿತ್ರವನ್ನು (James Movie) ಅದ್ದೂರಿಯಾಗಿ ಸ್ವಾಗತಿಸಲಾಗಿತ್ತು. ಇದರ ವಿಡಿಯೋ ಕೂಡ ವೈರಲ್ ಆಗಿತ್ತು. ವಿದೇಶದಲ್ಲೂ ಅಪ್ಪು ಕ್ರೇಜ್ ಎಷ್ಟಿದೆ ಎಂಬುದಕ್ಕೆ ಇದು ಸಾಕ್ಷಿ ಆಗಿದೆ. ಈ ಚಿತ್ರ ನಾಲ್ಕೇ ದಿನಕ್ಕೆ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಅಭಿಮಾನಿಗಳಿಗೆ ಖುಷಿ ನೀಡಿದೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಬಯೋಗ್ರಫಿ ಬಿಡುಗಡೆ ಮಾಡಿ, ಭಾವುಕರಾದ ಕಿಚ್ಚ ಸುದೀಪ್
‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಇದೆ ಸರ್ಪ್ರೈಸ್; ಏನದು?
ಬೆಲೆ ಕುಸಿತ;ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು
‘ಗೂಗಲ್ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ
ಬಿಲ್ ಪಾವತಿಸಲು ಲಂಚ ಪಡೆಯುತ್ತರಿವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

