IT raids: ಬಿಜೆಪಿ ವಿಧಾನ ಪರಿಷತ್ ಸದಸ್ಯ ಆರ್ ಶಂಕರ್ ಮನೆ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಲ ದಾಳಿ, ಹಲವು ವಸ್ತುಗಳು ಪತ್ತೆ
ತಪಾಸಣೆ ವೇಳೆ ಸಾರ್ವಜನಿಕರಿಗೆ ಹಂಚಲು ತಂದಿದ್ದ ಎಮ್ ಎಲ್ ಸಿ ಅವರ ಭಾವಚಿತ್ರವಿರುವ ಸೀರೆಗಳ ಬಾಕ್ಸ್, ಸ್ಟೀಲ್ ತಟ್ಟೆ-ಲೋಟ ಮತ್ತು ಶಾಲಾಮಕ್ಕಳಿಗೆ ವಿತರಿಸಲು ತಂದಿದ್ದ ಬ್ಯಾಗ್ ಗಳು ಪತ್ತೆಯಾಗಿವೆ.
ಹಾವೇರಿ: ರಾಜ್ಯದ ಬಿಜೆಪಿ ಶಾಸಕ ಮತ್ತು ವಿಧಾನ ಪರಿಷತ್ ಸದಸ್ಯರಿಗೆ ರಾಹುಕಾಲ ಶುರುವಾದಂತಿದೆ. ಇತ್ತೀಚಿಗಷ್ಟೇ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ (Madal Virupakshappa) ಮನೆ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರುಗಳು ಕೋಟ್ಯಾಂತರ ರೂಪಾಯಿ ವಶಪಡಿಸಿಕೊಂಡಿದ್ದರು. ಇವತ್ತು ಜಿಲ್ಲೆಯ ರಾಭೆಬೆನ್ನೂರಲ್ಲಿರುವ ಪಕ್ಷದ ವಿಧಾನ ಪರಿಷತ್ ಸದಸ್ಯ ಆರ್ ಶಂಕರ್ (R Shankar) ಅವರ ಮನೆ ಮತ್ತು ಕಚೇರಿಯ ಮೇಲೆ ದಾಳಿ ಆದಾಯ ತೆರಿಗೆ ಇಲಾಖೆ ಆಧಿಕಾರಿಗಳು (IT officials) ದಾಳಿ ನಡೆಸಿದ್ದಾರೆ. ತಪಾಸಣೆ ವೇಳೆ ಸಾರ್ವಜನಿಕರಿಗೆ ಹಂಚಲು ತಂದಿದ್ದ ಎಮ್ ಎಲ್ ಸಿ ಅವರ ಭಾವಚಿತ್ರವಿರುವ ಸೀರೆಗಳ ಬಾಕ್ಸ್, ಸ್ಟೀಲ್ ತಟ್ಟೆ-ಲೋಟ ಮತ್ತು ಶಾಲಾಮಕ್ಕಳಿಗೆ ವಿತರಿಸಲು ತಂದಿದ್ದ ಬ್ಯಾಗ್ ಗಳು ಪತ್ತೆಯಾಗಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 15, 2023 12:07 PM