ಧಾರವಾಡ: ಮಂಗಳವಾರ ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ತಮ್ಮ ಹುಟ್ಟೂರು ಧಾರವಾಡದ ಕಮಡೊಳ್ಳಿಯ ನಿವಾಸಿಗಳು ಮತ್ತು ಆಪ್ತರ ಜೊತೆ ತುಂಬಾನೇ ಎಂಜಾಯ್ ಮಾಡಿದರು ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ಹುಟ್ಟೂರಿಗೆ ಭೇಟಿ ನೀಡಿ ಜನರೊಂದಿಗೆ ಬೆರೆಯುವುದೇ ಒಂದು ವಿಶಿಷ್ಟ ಅನುಭೂತಿ. ಕಮಡೊಳ್ಳಿ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿ ಮುಖ್ಯಮಂತ್ರಿಗಳನ್ನು ಹೇಗೆ ಉಪಚರಿಸಿದರು ಅಂತ ನೋಡಿ. ಜಿಲೇಬಿ, ಧಾರವಾಡ ಪೇಡೆ (Dharwad Peda), 2-3 ಬಗೆಯ ಬಿಸ್ಕತ್ತುಗಳು, ಈ ಭಾಗದ ಜನಪ್ರಿಯ ತಿಂಡಿ ಸುಸಲಾ (Susla) (ವಗ್ರಾಣಿ ಅಂತಲೂ ಹೇಳೋದುಂಟು), ಚುಡವಾ ಜೊತೆ ಬಿಸಿಬಿಸಿಯಾದ ಚಹಾ ಅವರಿಗೆ ನೀಡಲಾಯಿತು. ಬೊಮ್ಮಾಯಿ ಸುಸಲಾವನ್ನು ಇಷ್ಟಪಟ್ಟು ತಿಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ