ಹಿಜಾಬ್ ತೀರ್ಪು: ಸುಪ್ರೀಮ್ ಕೋರ್ಟ್ನಿಂದ ಅಂತಿಮ ತೀರ್ಪು ಹೊರಬಿದ್ದ ಮೇಲೆ ಪ್ರತಿಕ್ರಿಯಿಸುವುದು ಸರಿಯೆನಿಸುತ್ತದೆ: ಬಸವರಾಜ ಬೊಮ್ಮಾಯಿ
ಇಬ್ಬರು ನ್ಯಾಯಾಧೀಶರು ಬೇರೆ ಬೇರೆ ರೀತಿ ತೀರ್ಪು ನೀಡಿರುವುದರಿಂದ ಅಂತಿಮ ನಿರ್ಣಯ ಬರೋವರೆಗೆ ಕಾದು ಪ್ರತಿಕ್ರಿಯೆ ನೀಡುವುದು ಸರಿ ಅನಿಸುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.
ಬಳ್ಳಾರಿ: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (BS Yediyurappa) ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ನೇತೃತ್ವ ಬಿಜೆಪಿ ಪಕ್ಷದ ಜನಸಂಕಲ್ಪ ಯಾತ್ರೆ ಬಳ್ಳಾರಿ ತಲುಪಿದೆ. ನಗರದಲ್ಲಿ ಪತ್ರಕರ್ತರು ಹಿಜಾಬ್ ಕುರಿತಂತೆ ಸುಪ್ರೀಪ್ ಕೋರ್ಟ್ ದ್ವಿಸದಸ್ಯ ಪೀಠ ನೀಡಿರುವ ತೀರ್ಪಿನ ಬಗ್ಗೆ ಬೊಮ್ಮಾಯಿಯವರ ಪ್ರತಿಕ್ರಿಯೆ ಕೇಳಿದಾಗ, ಇದು ನ್ಯಾಯಾಂಗ ವಿಚಾರವಾಗಿರುವುರಿಂದ ತೀರ್ಪಿನ ಪ್ರತಿಯನ್ನು ಓದದೆ ಹೇಳಲಾಗದು, ಅಲ್ಲದೆ ಇಬ್ಬರು ನ್ಯಾಯಾಧೀಶರು ಬೇರೆ ಬೇರೆ ರೀತಿ ತೀರ್ಪು (split verdict) ನೀಡಿರುವುದರಿಂದ ಅಂತಿಮ ನಿರ್ಣಯ ಬರೋವರೆಗೆ ಕಾದು ಪ್ರತಿಕ್ರಿಯೆ ನೀಡುವುದು ಸರಿ ಅನಿಸುತ್ತದೆ ಎಂದು ಅವರು ಹೇಳಿದರು.