ದಾವಣಗೆರೆ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಬೇಸತ್ತ ಯುವಕರು ರಸ್ತೆಗುಂಡಿಗಳನ್ನು ತಮ್ಮ ಖರ್ಚಿನಲ್ಲಿ ಮುಚ್ಚುತ್ತಿದ್ದಾರೆ!
ನಗರದ ಪ್ರಜ್ಞಾವಂತ ಯುವಕರ ಒಂದು ಗುಂಪು ತಮ್ಮ ಖರ್ಚಿನಲ್ಲೇ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಮುಂದಾಗಿ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ದಾವಣಗೆರೆ: ರಾಜ್ಯದ ಪ್ರಮುಖ ವಾಣಿಜ್ಯ ನಗರಗಳಲ್ಲಿ ಒಂದಾಗಿರುವ ದಾವಣಗೆರೆಯ (Davanagere) ನಗರಸಭೆ ಅಧಿಕಾರಿಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳ ಮಾದರಿಯನ್ನು ಅನುಸರಿಸುತ್ತಿರುವಂತೆ ಕಾಣುತ್ತದೆ ಮಾರಾಯ್ರೇ. ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು (potholes) ಮುಚ್ಚಿ ಅಂತ ಸಾರ್ವಜನಿಕರು ಎಷ್ಟೇ ಅವಲತ್ತುಕೊಂಡರೂ ದಾವಣಗೆರೆ ನಗರಸಭೆಯ ಅಧಿಕಾರಿಗಳು ಕ್ಯಾರೆ ಅಂದಿಲ್ಲ. ಹಾಗಾಗೇ, ನಗರದ ಪ್ರಜ್ಞಾವಂತ ಯುವಕರು-ಎಮ್ ಜಿ ಶ್ರೀಕಾಂತ್, ರೋಹಿತ್ ಜೈನ್, ಅರ್ ಎ ದತ್ತಾತ್ರೇಯ, ದೀಪಕ್ ಜೈನ್ ಮೊದಲಾದವರ ಒಂದು ಗುಂಪು ತಮ್ಮ ಖರ್ಚಿನಲ್ಲೇ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಮುಂದಾಗಿ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.