ಶಿವಕುಮಾರ ಅವರಿಗೆ ಸರಳ ಕನ್ನಡ ಕೂಡ ಅರ್ಥವಾಗದಿರುವುದು ವಿಷಾದನೀಯ: ಹೆಚ್ ಡಿ ಕುಮಾರಸ್ವಾಮಿ
ಕಾಂಗ್ರೆಸ್ ನಾಯಕರಿಗೆ ತಮ್ಮನ್ನು ಟೀಕಿಸದೆ ಹೋದರೆ ತಿಂದಿದ್ದು ಜೀರ್ಣವಾಗಲಾರದು ಅನಿಸುತ್ತದೆ ಎಂದು ಕುಮಾರಸ್ವಾಮಿ ಕುಹುಕವಾಡಿದರು.
ರಾಯಚೂರು: ಜೆಡಿಎಸ್ ಮುಖಂಡ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ರಾಯಚೂರಿನಲ್ಲಿಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ತಾವು ಆಧಿಕಾರಕ್ಕೆ ಬಂದು, ಸ್ವಚ್ಛ ಆಡಳಿತ ನೀಡಿ ರಾಜ್ಯದಲ್ಲಿ ವಾಸವಾಗಿರುವ ಪ್ರತಿ ಕುಟುಂಬದ ಬದುಕನ್ನು ಹಸನಾಗಿಸಿದಿದ್ದರೆ ಪಕ್ಷವನ್ನು ವಿಸರ್ಜಿಸುತ್ತೇನೆ ಅಂತ ಹೇಳಿದ್ದೇನೆ ಎಂದರು. ಶಿವಕುಮಾರ್ ಅವರಿಗೆ ಸರಳ ಕನ್ನಡವೂ (Kannada) ಅರ್ಥವಾಗದಿರುವುದಕ್ಕೆ ವ್ಯಥೆಯಾಗುತ್ತಿದೆ ಎಂದು ಹೇಳಿದ ಅವರು ಕಾಂಗ್ರೆಸ್ ನಾಯಕರಿಗೆ ತಮ್ಮನ್ನು ಟೀಕಿಸದೆ ಹೋದರೆ ತಿಂದಿದ್ದು ಜೀರ್ಣವಾಗಲಾರದು ಅನಿಸುತ್ತದೆ ಎಂದು ಕುಹುಕವಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 28, 2023 02:22 PM