Assembly polls: ವೋಟು ಪಡೆಯಲು ನೋಟು ಚೆಲ್ಲುವುದು ಬಾಡೂಟ ಬಡಿಸುವುದು ಅನಿವಾರ್ಯವೇ?

|

Updated on: Feb 14, 2023 | 3:26 PM

ರಾಯಚೂರು ಪ್ರತಿನಿಧಿ ವರದಿ ಮಾಡುತ್ತಿರುವ ಹಾಗೆ 51 ಕುರಿಗಳ ಮಟನ್ ಬಿರಿಯಾನಿ ಮತ್ತು ಒಂದು ಟನ್ ಚಿಕನ್ ಮತ್ತು ವೆಜ್ ಬಿರಿಯಾನಿಯನ್ನು ರೆಡ್ಡಿ ಜನರಿಗೋಸ್ಕರ ಮಾಡಿಸಿದ್ದಾರೆ.

ರಾಯಚೂರು: ಜನ ತಮ್ಮ ಅಮೂಲ್ಯವಾದ ವೋಟು (vote) ಯಾರಿಗೆ ಹಾಕುತ್ತಾರೋ ಗೊತ್ತಿಲ್ಲ ಆದರೆ ಅವರನ್ನು ಭೇಟಿಯಾಗಲು ಬರುತ್ತಿರುವ ಬೇರೆ ಬೇರೆ ಪಕ್ಷಗಳ ನಾಯಕರು ಮಾತ್ರ ಅವರಿಗೆ ಹೊಟ್ಟೆತುಂಬ ಭೂರಿ ಭೋಜನ ಹಾಕಿಸುತ್ತಿದ್ದಾರೆ ಮಾರಾಯ್ರೇ. ಮಂಗಳವಾರ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ತಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (KRPP) ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಅವರು ಸಭೆಯೊಂದರಲ್ಲಿ ನೆರೆದಿದ್ದ ಸುಮಾರು 10,000ಕ್ಕೂ ಹೆಚ್ಚು ಜನರಿಗೆ ಎರಡು ರೀತಿಯ ಬಿರಿಯಾನಿ ಮಾಡಿಸಿ ತಿನ್ನಿಸಿದರು. ಟಿವಿ9 ಕನ್ನಡ ವಾಹಿನಿ ರಾಯಚೂರು ಪ್ರತಿನಿಧಿ ವರದಿ ಮಾಡುತ್ತಿರುವ ಹಾಗೆ 51 ಕುರಿಗಳ ಮಟನ್ ಬಿರಿಯಾನಿ ಮತ್ತು ಒಂದು ಟನ್ ಚಿಕನ್ ಮತ್ತು ವೆಜ್ ಬಿರಿಯಾನಿಯನ್ನು ರೆಡ್ಡಿ ಜನರಿಗೋಸ್ಕರ ಮಾಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ