Chikkaballapur: ಈಗಷ್ಟೇ ರಾಜಕಾರಣಕ್ಕೆ ಬಂದಿರುವ ಪ್ರದೀಪ್ ಈಶ್ವರ್ ಬಳಸುವ ಭಾಷೆ ಮೇಲೆ ಹಿಡಿತವಿಟ್ಟುಕೊಳ್ಳುವ ಅವಶ್ಯಕತೆಯಿದೆ!  

Chikkaballapur: ಈಗಷ್ಟೇ ರಾಜಕಾರಣಕ್ಕೆ ಬಂದಿರುವ ಪ್ರದೀಪ್ ಈಶ್ವರ್ ಬಳಸುವ ಭಾಷೆ ಮೇಲೆ ಹಿಡಿತವಿಟ್ಟುಕೊಳ್ಳುವ ಅವಶ್ಯಕತೆಯಿದೆ!  

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 23, 2023 | 2:29 PM

ಕೇವಲ ಪ್ರದೀಪ್ ಈಶ್ವರ್ ಮಾತ್ರ ಅಂತಲ್ಲ, ಎಲ್ಲ ಪಕ್ಷಗಳ ಹಲವಾರು ನಾಯಕರು ಮಾಧ್ಯಮಗಳೊಂದಿಗೆ ಮಾತಾಡುವಾಗ ಸೌಜನ್ಯತೆ ಮತ್ತು ಭಾಷೆಯ ಮರ್ಯಾದೆಯನ್ನು ಗಾಳಿಗೆ ತೂರುತ್ತಿದ್ದಾರೆ.

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ವಿರೋಧ ಪಕ್ಷದ ನಾಯಕರು ಸರ್ಕಾರದ ಪ್ರತಿನಿಧಿಗಳನ್ನು ಟೀಕಿಸುವುದು, ಸಚಿವರು-ಶಾಸಕರು ಅವರಿಗೆ ಉತ್ತರಗಳನ್ನು ನೀಡವುದು-ಇದೇ ನಡೆಯುತ್ತಿದೆ. ಟೀಕಿಸುವ ಮತ್ತು ಮಾತಾಡುವ ಭರದಲ್ಲಿ ಜನ ಪ್ರತಿನಿಧಿಗಳು ಭಾಷೆಯ ಮರ್ಯಾದೆಯನ್ನು ಅಡವಿಡುತ್ತಿದ್ದಾರೆ. ನಗರದಲ್ಲಿ ಇಂದು ಟಿವಿ9 ಕನ್ನಡ ವಾಹಿನಿಯ ಪ್ರತಿನಿಧಿಯೊಂದಿಗೆ ಮಾತಾಡಿದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಬಿಜೆಪಿ ಸಂಸದ ಪ್ರತಾಪ್ ಸಿಂಹ (Pratap Simha) ಮೇಲೆ ಹರಿಹಾಯ್ದರು. ಪ್ರದೀಪ್ ಭಾರತೀಯ ಆಹಾರ ನಿಗಮದ (Food Corporation of India) ಬಗ್ಗೆ ಸಾಕಷ್ಟು ಮಾಹಿತಿಯನ್ನು ಸಂಸದರಿಗೆ ನೀಡುತ್ತಾರೆ. ಅದು ಓಕೆ ಅದರಲ್ಲೇನೂ ಸಮಸ್ಯೆ ಇಲ್ಲ. ಆದರೆ ಅವೇಶದಲ್ಲಿ ಕಾಂಗ್ರೆಸ್ ಶಾಸಕ ಸಂಸದರಿಗೆ ಮುಚ್ಕೊಂಡ್ ಇರ್ಬೇಕು ಅಷ್ಟೇ ಅನ್ನುತ್ತಾರೆ! ಇದು ಒಬ್ಬ ರೌಡಿಯ ಭಾಷೆ ಅಲ್ಲದೆ ಮತ್ತೇನೂ ಅಲ್ಲ. ಶಾಸಕರೇ, ಈಗಷ್ಟೇ ರಾಜಕಾರಣಕ್ಕೆ ಬಂದಿದ್ದೀರಿ, ನಾಲಗೆಯನ್ನು ಜೋರಾಗಿ ಹರಿಬಿಡಬೇಡಿ. ಟೀಕೆ-ಟಿಪ್ಪಣಿ ರಚನಾತ್ಮಕವಾಗಿರಲಿ, ಟೀಕಿಸುವ ಭರದಲ್ಲಿ ಭಾಷೆಯನ್ನು ಮನಬಂದಂತೆ ಬಳಸಬೇಡಿ ಮತ್ತು ವರದಿ ಮಾಡುವ ಮಾಧ್ಯಮಗಳಲ್ಲಿ ಹೇವರಿಕೆ ಹುಟ್ಟಲು ಕಾರಣವಾಗಬೇಡಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ