Loading video

Operation Sindoor; ಪಹಲ್ಗಾಮ್ ಉಗ್ರರ ದಾಳಿಗೆ ಭಾರತ ತಕ್ಕ ಪ್ರತೀಕಾರ ತೀರಿಸಿಕೊಂಡಿದೆ: ಡಿಕೆ ಶಿವಕುಮಾರ್

Updated on: May 07, 2025 | 6:06 PM

ಎದುರಾಳಿ ಯಾರೇ ಅಗಿದ್ದರೂ ಸದೆಬಡಿಯುವ ಶಕ್ತಿ ಸಾಮರ್ಥ್ಯ ಭಾರತಕ್ಕಿದೆ, ದೇಶದ ಭದ್ರತೆ ಮತ್ತು ದೇಶವಾಸಿಗಳ ರಕ್ಷಣೆ ವಿಷಯ ಬಂದಾಗ ಎಲ್ಲರೂ ಒಂದಾಗಬೇಕು ಮತ್ತು ಕೇಂದ್ರ ಸರ್ಕಾರಕ್ಕೆ ಹಾಗೂ ನಮ್ಮ ಸೇನಾಬಲಗಳಿಗೆ ಶಕ್ತಿ ತುಂಬಬೇಕು ಎಂದು ಶಿವಕುಮಾರ್ ಹೇಳಿದರು. ಪಹಲ್ಗಾಮ್ ದಾಳಿಗೆ ತಕ್ಕ ಪ್ರತೀಕಾರವನ್ನು ಭಾರತ ತೀರಿಸಿಕೊಂಡಿದೆ ಮತ್ತು ಅದರ ಅವಶ್ಯಕತೆ ಕೂಡ ಇತ್ತು ಎಂದು ಅವರು ಹೇಳಿದರು.

ದೆಹಲಿ, ಮೇ 7: ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ದೆಹಲಿ ಪ್ರವಾಸಲ್ಲಿದ್ದಾರೆ. ಪಹಲ್ಗಾಮ್ ನಲ್ಲಿ ಉಗ್ರರ ನಡೆಸಿಸಿ ದಾಳಿಗೆ ಪ್ರತೀಕಾರವಾಗಿ ನಿನ್ನ ರಾತ್ರಿ ಭಾರತದ ವಾಯುಸೇನೆಯು ಪಾಕಿಸ್ತಾನದಲ್ಲಿದ್ದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿರುವುದಕ್ಕೆ ನಮ್ಮ ದೆಹಲಿ ವರದಿಗಾರನಿಗೆ ಪ್ರತಿಕ್ರಿಯೆ ನೀಡಿದ ಅವರು ಭಾರತೀಯ ಸೇನೆಯನ್ನು ಅಭಿನಂದಿಸಿದರು. ಉಗ್ರರನ್ನು ಮಟ್ಟಹಾಕುವುದು ಅತ್ಯಂತ ಅವಶ್ಯಕವಾಗಿತ್ತು, ರಾಷ್ಟ್ರದಲ್ಲಿ ಶಾಂತಿ ನೆಲೆಗೊಳ್ಳಬೇಕಾದರೆ ಅವರಿಗೆ ಪಾಠ ಕಲಿಸಲೇಬೇಕಿತ್ತು, ದಾಳಿ ನಡೆಸುವ ಮೂಲಕ ಸೇನೆ ಒಳ್ಳೆಯ ಕೆಲಸ ಮಾಡಿದೆ, ತಮ್ಮ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದೊಂದಿಗಿವೆ ಎಂದು ಶಿವಕುಮಾರ್ ಹೇಳಿದರು.

ಇದನ್ನೂ ಓದಿ:  ಉಗ್ರರ ನೆಲೆಗಳ ಮೇಲೆ ಸೇನೆ ದಾಳಿ: 11 ಪಾಕ್ ಸೈನಿಕರು, 22 ಉಗ್ರರು ಮಟಾಶ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ