ನಾನು 24/7 ಕೆಲಸ ಮಾಡುವ ಜೊತೆಗೆ 2047ರವರೆಗೆ ಯೋಜನೆ ರೂಪಿಸಿ ಜಾರಿಗೊಳಿಸುವ ಗ್ಯಾರಂಟಿ ನೀಡುತ್ತೇನೆ: ಪ್ರಧಾನಿ ನರೇಂದ್ರ ಮೋದಿ

|

Updated on: Apr 20, 2024 | 6:03 PM

ಭಾರತ ದೇಶದ ಬಡವರು ತಮಗೆ ಉಚಿತವಾಗಿ ರೇಷನ್ ಸಿಗುತ್ತದೆ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ, ಅದರೆ ಒಬ್ಬ ಬಡವನ ಮಗನಾಗಿರುವ ತಾನು ಅವರ ಆಸೆಯನ್ನು ಸಾಕಾರಗೊಳಿಸಿರುವುದಾಗಿ ಹೇಳಿದ ಪ್ರಧಾನಿ ಮೋದಿ, ಇಲ್ಲಿ ನೆರೆದಿರುವ ಅನೇಕರು ಈ ಯೋಜನೆಯ ಲಾಭಾರ್ಥಿಗಳಾಗಿರಬಹುದು ಎಂದರು.

ಚಿಕ್ಕಬಳ್ಳಾಪುರ: ನಗರದ ಹೊರವಲಯದಲ್ಲಿ ಬೃಹತ್ ಬಿಜೆಪಿ-ಜೆಡಿಎಸ್ ಸಮಾವೇಶವನ್ನು ಉದ್ದೇಶಿಸಿ ಮಾತಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಹಿಂದಿನ ಯುಪಿಎ ಸರ್ಕಾರ (UPA government) ಕೇವಲ ಹಗರಣಗಳ ಸರ್ಕಾರವಾಗಿತ್ತು ಅನ್ನೋದನ್ನುಮಾಜಿ ಪ್ರಧಾನಿ ದೇವೇಗೌಡ ಸವಿಸ್ತಾರವಾಗಿ ತಿಳಿಸಿದ್ದಾರೆ ಎಂದು ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ (democratic system) ಮಾಡಿದ ಕೆಲಸಗಳ ಸಾಧನೆಗಳ ವಿವರವನ್ನು ಜನರಿಗೆ ನೀಡುವುದು ನನ್ನ ಹೊಣೆಗಾರಿಕೆಯಾಗಿದೆ ಎಂದ ಪ್ರಧಾನಿ ಮೋದಿ ತಾನು ಮಾಡಿದ ಕೆಲಸಗಳ ರಿಪೋರ್ಟ್ ಕಾರ್ಡ್ ಹಿಡಿದುಕೊಂಡೇ ನಿಮ್ಮ ಆಶೀರ್ವಾದ ಕೇಳಲು ಬಂದಿದ್ದೇನೆ ಎಂದು ಹೇಳಿದರು. ಭಾರತದ ಪ್ರತಿಯೊಬ್ಬ ನಾಗರಿಕನನ್ನು ತಮ್ಮ ಪರಿವಾರ ಅಂತ ಭಾವಿಸುತ್ತೇನೆ, ಹಗಲು ರಾತ್ರಿ ದಣಿವರಿಯದೆ ದೇಶದ ಜನರಿಗಾಗಿ ಕೆಲಸ ಮಾಡುತ್ತೇನೆ ಮತ್ತು ಅವರ ಕನಸುಗಳನ್ನು ನನಸಾಗಿಸುವುದೇ ತನ್ನ ಸಂಕಲ್ಪವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

24/7 ಕೆಲಸ ಮಾಡುವುದರ ಜೊತೆಗೆ 2047 ವರೆಗೆ ಯೋಚಿಸುವ ತಾನು ಕೇವಲ ಯೋಜನೆಗಳನ್ನು ರೂಪಿಸುವುದಿಲ್ಲ ಅವುಗಳನ್ನು ಜಾರಿಗೊಳಿಸುವ ಗ್ಯಾರಂಟಿ ಸಹ ನೀಡುತ್ತೇನೆ ಎಂದರು. ಭಾರತ ದೇಶದ ಬಡವರು ತಮಗೆ ಉಚಿತವಾಗಿ ರೇಷನ್ ಸಿಗುತ್ತದೆ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ, ಅದರೆ ಒಬ್ಬ ಬಡವನ ಮಗನಾಗಿರುವ ತಾನು ಅವರ ಆಸೆಯನ್ನು ಸಾಕಾರಗೊಳಿಸಿರುವುದಾಗಿ ಹೇಳಿದ ಪ್ರಧಾನಿ ಮೋದಿ, ಇಲ್ಲಿ ನೆರೆದಿರುವ ಅನೇಕರು ಈ ಯೋಜನೆಯ ಲಾಭಾರ್ಥಿಗಳಾಗಿರಬಹುದು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಗಗನಯಾನದ ಯಶಸ್ಸಿನತ್ತ ನಮ್ಮ ಚಿತ್ತ: ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿ