ಬ್ರ್ಯಾಂಡ್ ಬೆಂಗಳೂರು ಅಲ್ಲ ಇದು ಗುಂಡಿ ಬೆಂಗಳೂರು! ವಾಹನ ಸವಾರರ ಗುಂಡಿಗೆ ಗಟ್ಟಿಇರಬೇಕು

| Updated By: ಸಾಧು ಶ್ರೀನಾಥ್​

Updated on: Dec 12, 2023 | 12:19 PM

ರಾಜಧಾನಿಯ ಅಸಂಖ್ಯಾತ ರಸ್ತೆಗಳಲ್ಲಿ ಪಾಟ್​​ಹೋಲ್ಸ್​​ ತುಂಬಿದ್ದು, ಅಧ್ವಾನಗಳು ಕಣ್ಣಿಗೆ ರಾಚುತ್ತಿವೆ. ಈ ಸಂಬಂಧ ಟಿವಿ ನೈನ್ ರಸ್ತೆ ಗುಂಡಿ ರಿಯಾಲಿಟಿ ಚೆಕ್ ನಡೆಸಿದಾಗ ನಾಗಾವರ ಜಂಕ್ಷನ್ ನಲ್ಲಿ ಯಮಗುಂಡಿಗಳ ದರ್ಶನವಾಗಿವೆ.

ಬೆಂಗಳೂರು, ಡಿಸೆಂಬರ್​ 12: ರಾಜಧಾನಿಯ ಅನೇಕ ರಸ್ತೆಗಳಲ್ಲಿ ಪಾಟ್​​ಹೋಲ್ಸ್​​ ( potholes) ತುಂಬಿದ್ದು, ಅಧ್ವಾನಗಳು ಕಣ್ಣಿಗೆ ರಾಚುತ್ತಿವೆ. ಈ ಸಂಬಂಧ ಟಿವಿ ನೈನ್ ರಸ್ತೆ ಗುಂಡಿ ರಿಯಾಲಿಟಿ ಚೆಕ್ ನಡೆಸಿದಾಗ ನಾಗಾವರ ಜಂಕ್ಷನ್ ನಲ್ಲಿ ಯಮಗುಂಡಿಗಳ ದರ್ಶನವಾಗಿವೆ. ಈ ರಸ್ತೆಯಲ್ಲಿ ಓಡಾಬೇಕೆಂದರೆ ಎಂಟೆದೆ ಗುಂಡಿಗೆ ಬೇಕು ಎಂಬ ಸತ್ಯದ ದರ್ಶನವಾಗಿದೆ. ಮಾತು ಎತ್ತಿದರೆ ಸರ್ಕಾರ ಬ್ರ್ಯಾಂಡ್ ಬೆಂಗಳೂರು (Brand Bangalore) ಅನ್ನುತ್ತೆ.

ಈ ರಸ್ತೆ ಗುಂಡಿಗಳನ್ನ ನೋಡಿದರೆ ಗೊತ್ತಾಗುತ್ತೆ… ಬ್ರ್ಯಾಂಡ್ ಬೆಂಗಳೂರು ಅಲ್ಲ ಗುಂಡಿ ಬೆಂಗಳೂರು ಅಂತಾ. ನಾಗಾವರ, ಹೆಬ್ಬಾಳ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿಯೇ ಮೊಳಕಾಲುದ್ದದ ಗುಂಡಿಗಳು ಇಳಿಬಿಟ್ಟಿವೆ. ಮುಖ್ಯ ರಸ್ತೆ ಮಧ್ಯೆ ಗುಂಡಿಗಳಿದ್ದರೂ ಬಿಬಿಎಂಪಿ (BBMP) ನಿರ್ಲಕ್ಷ್ಯ ವಹಿಸಿದೆ. ಪ್ರತಿನಿತ್ಯ ರಸ್ತೆ ಗುಂಡಿಯಿಂದ ಒಂದಿಲ್ಲೊಂದು ಅಪಘಾತವಾಗುತ್ತಿದ್ದು, ಜೀವ ಕೈಯಲ್ಲಿಯೇ ಹಿಡಿದು ವಾಹನ ಸವಾರರು ಓಡಾಡುವಂತಾಗಿದೆ.

ಇದನ್ನೂ ಓದಿ: ಟಿನ್ ಫ್ಯಾಕ್ಟರಿ ಬಳಿ ಟ್ರಾಫಿಕ್ ಸಮಸ್ಯೆ: ಸಂಚಾರಿ ಪೊಲೀಸರ ಹೊಸ ಮಾರ್ಗದಿಂದ ಟ್ರಾಫಿಕ್ ನಿವಾರಣೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.