ಸಚಿವ ಶಿವಾನಂದ ಪಾಟೀಲ್ ಲಾಬಿ ಎದುರು ಶಾಸಕ ವಿಜಯಾನಂದ ಕಾಶಪ್ಪನವರ್ ಲಾಬಿ ಮುರುಟಿ ಹೋಯಿತೇ?

|

Updated on: Mar 20, 2024 | 4:31 PM

ಕಾಂಗ್ರೆಸ್ ಪಕ್ಷವು ತನ್ನ ನಾಯಕರ ಹೆಂಡತಿಯರಿಗೆ, ಮಕ್ಕಳಿಗೆ ಅವರ ಹತ್ತಿರದ ಬಂಧುಗಳಿಗೆ ಟಿಕೆಟ್ ನೀಡುವ ತನ್ನ ಚಾಳಿಯನ್ನು ಮುಂದುವರಿಸಿದೆ. ವೀಣಾ ಹೇಳುವಂತೆ ಸಂಯುಕ್ತ ಪಾಟೀಲ್ ಯಾರು ಅನ್ನೋದೇ ಬಾಗಲಕೋಟೆ ಜನಕ್ಕೆ ಗೊತ್ತಿಲ್ಲ. ಸಚಿವನ ಮರ್ಜಿಗೆ ಬಿದ್ದು ಕಾಂಗ್ರೆಸ್ ದೊಡ್ಡ ರಿಸ್ಕ್ ತೆಗೆದುಕೊಂಡಿದೆ.

ದೆಹಲಿ: ಸಚಿವನ ಲಾಬಿಗಿರುವಷ್ಟು ಪ್ರಭಾವ ಮತ್ತು ಕಿಮ್ಮತ್ತು ಒಬ್ಬ ಶಾಸಕ ಮಾಡುವ ಲಾಬಿಗಿಲ್ಲ ಅನ್ನೋದು ವೀಣಾ ಕಾಶಪ್ಪನವರ್ (Veena Kashappanavar) ಪ್ರಕರಣ ನೋಡಿದರೆ ಗೊತ್ತಾಗುತ್ತದೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ನಿಸ್ಸಂದೇಹವಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಪತ್ನಿ ವೀಣಾ  ಕಾಂಗ್ರೆಸ್ ಟಿಕೆಟ್ ನ ಪ್ರಬಲ ಆಕಾಂಕ್ಷಿಯಾಗಿದ್ದರು. ಲಭ್ಯವಾಗುತ್ತಿರುವ ಮಾಹಿತಿಯ ಪ್ರಕಾರ ಟಿಕೆಟ್ ಸಚಿವ ಶಿವಾನಂದ ಪಾಟೀಲ್ (Shivanand Patil) ಪುತ್ರಿ ಸಂಯುಕ್ತ ಪಾಟೀಲ್ ಗೆ ಸಿಗಲಿದೆ. ಟಿಕೆಟ್ ತಪ್ಪುವ ಸುಳಿವು ಟಿಕೆಟ್ ಸಿಕ್ಕೊಡನೆ ಪತಿಯೊಂದಿಗೆ ದೆಹಲಿಯಲ್ಲೇ ಇರುವ ವೀಣಾ ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತರು. ಮಾಧ್ಯಮಗಳ ಜೊತೆ ಮಾತಾಡುವುದು ಸಹ ಅವರಿಗೆ ಸಾಧ್ಯವಾಗಲಿಲ್ಲ.

ಕಾಂಗ್ರೆಸ್ ಪಕ್ಷವು ತನ್ನ ನಾಯಕರ ಹೆಂಡತಿಯರಿಗೆ, ಮಕ್ಕಳಿಗೆ ಅವರ ಹತ್ತಿರದ ಬಂಧುಗಳಿಗೆ ಟಿಕೆಟ್ ನೀಡುವ ತನ್ನ ಚಾಳಿಯನ್ನು ಮುಂದುವರಿಸಿದೆ. ವೀಣಾ ಹೇಳುವಂತೆ ಸಂಯುಕ್ತ ಪಾಟೀಲ್ ಯಾರು ಅನ್ನೋದೇ ಬಾಗಲಕೋಟೆ ಜನಕ್ಕೆ ಗೊತ್ತಿಲ್ಲ. ಸಚಿವನ ಮರ್ಜಿಗೆ ಬಿದ್ದು ಕಾಂಗ್ರೆಸ್ ದೊಡ್ಡ ರಿಸ್ಕ್ ತೆಗೆದುಕೊಂಡಿದೆ.

ಅದು ಬಿಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಶಪ್ಪನವರ್ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಮತ್ತು ಇತ್ತೀಚಿಗೆ ಬಾಗಲಕೋಟೆಗೆ ಭೇಟಿ ನೀಡಿದ್ದಾಗ ವೀಣಾಗೆ ಟಿಕೆಟ್ ಕೊಡಿಸುವ ಭರವಸೆನ್ನೂ ನೀಡಿದ್ದರು. ವೀಣಾ ಕ್ಷೇತ್ರದಲ್ಲಿ ಬಹಳ ಜನಪ್ರಿಯ ನಾಯಕಿ ಮಾತ್ರವಲ್ಲ, ಕಳೆದ ಲೋಕ ಸಭಾ ಚುನಾವಣೆಯಲ್ಲಿ ಅಲ್ಪ ಅಂತರದಿಂದ ಸೋತಿದ್ದರು. ಈ ಬಾರಿ ಗೆದ್ದೇ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸ ವೀಣಾಗಿತ್ತು. ಕಾಂಗ್ರೆಸ್ ಪಕ್ಷ ಯಾಕೆ ಅವರಿಗೆ ಟಿಕೆಟ್ ವಂಚಿಸುತ್ತಿದೆಯೋ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವೀಣಾ ಕಾಶಪ್ಪನವರ್‌ಗೆ ಬಾಗಲಕೋಟೆ ಟಿಕೆಟ್‌ ಮಿಸ್? ಕಾಂಗ್ರೆಸ್‌ ವಿರುದ್ಧ ಬೆಂಬಲಿಗರ ಧರಣಿ!

Follow us on