ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಈಗ ಮಮ್ಮಿಯಾಗುತ್ತಿದ್ದಾರೆ. ಗರ್ಭಿಣಿಯಾಗಿರುವ ಗಾಯಕಿ ಶ್ರೇಯಾ ಘೋಷಾಲ್ ಕೊರೊನಾ ಹಿನ್ನೆಲೆಯಲ್ಲಿ ಸ್ನೇಹಿತರು, ಸಂಬಂಧಿಕರ ನಡುವೆ ಬೇಬಿ ಶವರ್ ಆಚರಿಸಲಾಗಲಿಲ್ಲ. ಆದ್ರೆ ಆನ್‌ಲೈನ್ ಮೂಲಕ ಬೇಬಿ ಶವರ್ ಆಚರಣೆ ಎಂಜಾಯ್ ಮಾಡಿದ್ದಾರೆ. ಅವರ ಸ್ನೇಹಿತರು ಆಯೋಜಿಸಿದ್ದ ಬೇಬಿ ಶವರ್ ಆಚರಣೆಯ ಫೋಟೋವೊಂದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.