KSRTC: ರವಿವಾರ ಉಚಿತ ಪ್ರಯಾಣದ ಗ್ಯಾರಂಟಿಗೆ ಚಾಲನೆ ನೀಡುವ ಸಿದ್ದರಾಮಯ್ಯ ಕೆಎಸ್ಆರ್ಟಿಸಿ ಸಿಬ್ಬಂದಿಯ ಯೂನಿಫಾರ್ಮ್ ಕಡೆ ಗಮನ ಹರಿಸುವರೇ?
ಸಿದ್ದರಾಮಯ್ಯ ಈ ಕಡೆ ಗಮನ ಹರಿಸಿ ಸಾರ್ವಜನಿಕ ಸೇವೆಗೆ ತಮ್ಮ ಬದುಕನ್ನೇ ಮುಡುಪಾಗಿಡುವ ಕರಾರಸಾಸಂಸ್ಥೆಯ ಸಿಬ್ಬಂದಿಗೆ ಯೂನಿಫಾರ್ಮ್ ಮತ್ತು ಶೂಗಳ ವ್ಯವಸ್ಥೆ ಮಾಡಬೇಕು,
ಬೆಂಗಳೂರು: ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಖಚಿತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ರವಿವಾರ 11 ಗಂಟೆಗೆ ಈ ಯೋಜನೆಗೆ ಹಸಿರು ನಿಶಾನೆ ತೋರಲಿದ್ದಾರೆ. ಅವತ್ತು ಮುಖ್ಯಮಂತ್ರಿ ಮತ್ತೊಂದು ಮುಖ್ಯ ಮಹತ್ವದ ಕೆಲಸ ಮಾಡಬೇಕಿದೆ. ಕೆಎಸ್ ಆರ್ ಟಿಸಿ/ಬಿಎಂಟಿಸಿ ಸಂಸ್ಥೆಯ ಸಿಬ್ಬಂದಿಗೆ (KSRTC Staff) (ಚಾಲಕರು, ನಿರ್ವಹಕರು, ಮೆಕ್ಯಾನಿಕ್ ಗಳು) ಯೂನಿಫಾರ್ಮ್ (uniform) ನೀಡಿ 3 ವರ್ಷ ಕಳೆದಿವೆ ಮತ್ತು ಶೂಗಳನ್ನು ನೀಡಿ 5 ವರ್ಷಗಳಾಗಿವೆ. ಮೊದಲೆಲ್ಲ ಪ್ರತಿ ಏಪ್ರಿಲ್ ನಲ್ಲಿ ಯೂನಿಫಾರ್ಮ್ ಬಟ್ಟೆ, ಹೊಲೆಸಿಕೊಳ್ಳಲು ಹಣ ಮತ್ತು ಶೂಗಳನ್ನು ಸಂಸ್ಥೆ ನೀಡುತಿತ್ತಂತೆ. ಈಗ ಯಾಕೆ ನಿಂತಿದೆಯೋ ಗೊತ್ತಿಲ್ಲ. ಸಿದ್ದರಾಮಯ್ಯ ಈ ಕಡೆ ಗಮನ ಹರಿಸಿ ಸಾರ್ವಜನಿಕ ಸೇವೆಗೆ ತಮ್ಮ ಬದುಕನ್ನೇ ಮುಡುಪಾಗಿಡುವ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಯೂನಿಫಾರ್ಮ್ ಮತ್ತು ಶೂಗಳ ವ್ಯವಸ್ಥೆ ಮಾಡಬೇಕು, ಕೇವಲ ಈ ವರ್ಷ ಮಾತ್ರವಲ್ಲ, ವರ್ಷ-ವರ್ಷ ಪ್ರತಿವರ್ಷ… ಈ ಮಾತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಹೆಚ್ಚು ಅನ್ವಯಿಸುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ