ನಮ್ಮನ್ನು ಅರ್ಥಮಾಡಿಕೊಂಡು ಸಹಬಾಳ್ವೆ ನಡೆಸುವ ಸಂಗಾತಿ ಸಿಕ್ಕರೆ ಶೇಕಡಾ 70 ರಷ್ಟು ಸಮಸ್ಯೆಗಳು ಇತ್ಯರ್ಥಗೊಂಡಂತೆ: ಡಾ ಸೌಜನ್ಯ ವಶಿಷ್ಠ

| Updated By: shivaprasad.hs

Updated on: Jan 04, 2022 | 8:27 AM

ಜಗಳ, ಮನಸ್ತಾಪಗಳಾದಾಗ ಸೈಲೆಂಟ್ ಟ್ರೀಟ್ಮೆಂಟ್ ಬೇಡ, ಸಮಸ್ಯೆಯನ್ನು ಮುಕ್ತವಾಗಿ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಗಂಡ-ಹೆಂಡಿರು, ಸಂಗಾತಿಗಳ ನಡುವೆ ಎಫೆಕ್ಟಿವ್ ಕಮ್ಯುನಿಕೇಷನ್ ಇರಬೇಕು ಅಂತ ಡಾ ಸೌಜನ್ಯ ಹೇಳುತ್ತಾರೆ.

ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಅವರು ಇವತ್ತಿನ ಸಂಚಿಕೆಯಲ್ಲಿ ಗಂಡು-ಹೆಣ್ಣಿನ ನಡುವೆ ಒಂದು ಸಂತೋಷಕರ, ಸೌಹಾರ್ದಯುತವಾದ ಸಂಬಂಧ ಏರ್ಪಟ್ಟು ಅದನ್ನು ಕೊನೆಯವರೆಗೆ ಉಳಿಸಿಕೊಳ್ಳುವುದು ಹೇಗೆ ಅನ್ನೋದನ್ನು ವಿವರಿಸಿದ್ದಾರೆ. ಬದುಕಿನಲ್ಲಿ ನಮ್ಮನ್ನು ಅರ್ಥ ಮಾಡಿಕೊಂಡು ಸಹಬಾಳ್ವೆ ನಡೆಸುವ ಯೋಗ್ಯ ಸಂಗಾತಿ ಸಿಕ್ಕರೆ ಶೇಕಡಾ 70 ರಷ್ಟು ಸಮಸ್ಯೆಗಳು ನಿವಾವಣೆಯಾದಂತೆಯೇ ಎಂದು ಡಾ ಸೌಜನ್ಯ ಹೇಳುತ್ತಾರೆ. ವಿಪರ್ಯಾಸವೆಂದರೆ ಅನೇಕರಿಗೆ ಅವರು ಅಂದುಕೊಳ್ಳುವಂಥ ಪಾರ್ಟ್ನರ್ ಸಿಗುವುದಿಲ್ಲ. ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಅನ್ನೋದು ಗಾದೆ ಮಾತು ಮಾತ್ರ. ಯಾಕೆಂದರೆ ಜಗಳಗಳು ಮಲಗುವ ಸಮಯದಲ್ಲೇ ಶುರುವಾಗಲಾರಂಭಿಸಿವೆ.

ಸಂಗಾತಿ ಬಗ್ಗೆ ಅನ್ ರಿಯಲಿಸ್ಟಿಕ್ ನಿರೀಕ್ಷೆಗಳನ್ನು ಇಟ್ಟುಕೊಂಡು ಅಂಥದ್ದೇ ಸಂಗಾತಿ ಸಿಗೋದು ಗ್ಯಾರಂಟಿ ಎಂಬ ಭ್ರಮೆ ಇಟ್ಟುಕೊಂಡರೆ ನಿರಾಶರಾಗಬೇಕಾಗುತ್ತದೆ. ಫ್ಯಾಂಟಸಿ ಕೇವಲ ಸಿನಿಮಾಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಡಾ ಸೌಜನ್ಯ ಹೇಳುತ್ತಾರೆ. ಬಾಲ್ಯದಲ್ಲಿ ಪ್ರಾಯಶಃ ನಮಗೆ ಸಿಗದ ಪ್ರೀತಿಯನ್ನು ಸಂಗಾತಿಯಲ್ಲಿ ಕಂಡುಕೊಳ್ಳಲು ಪ್ರಯತ್ನಿಸುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಮೊದಲು ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದು ಬಹಳ ಮುಖ್ಯ ಎಂದು ಹೇಳುವ ಅವರು you are complete as a whole person ಎನ್ನುತ್ತಾರೆ. ನಮಗೆ ಸಂತೋಷವಾಗಿರುವುದು ಗೊತ್ತಿದ್ದರೆ ಮಾತ್ರ ಸಂಗಾತಿಯನ್ನು ಸಂತೋಷವಾಗಿಡಬಲ್ಲೆವು.

ಹೆಣ್ಣುಮಕ್ಕಳು ಕರುಣಾಮಯಿ ಮತ್ತು ತ್ಯಾಗ ಜೀವಿಗಳು ಅಂತ ಡಾ ಸೌಜನ್ಯ ಹೇಳುತ್ತಾರೆ. ಅವರು ಸದಾ ಗಂಡ ಮತ್ತು ಮಕ್ಕಳ ಬಗ್ಗೆ ಯೋಚಿಸುತ್ತಾರೆ. ಎಲ್ಲರಿಗೂ ಊಟ ಮಾಡಿಸಿದ ಬಳಿಕ ಕೊನೆಯಲ್ಲಿ ಊಟ ಮಾಡುವ ಮಹಿಳೆಯರು ಸಾಕಷ್ಟಿದ್ದಾರೆ. ಅವರು ನೀಡುವ ಪ್ರೀತಿಗೆ, ಮನೆಯನ್ನು ನಡೆಸಿಕೊಂಡು ಹೋಗುವ ರೀತಿಗೆ ಗಂಡಸರು ಕೃತಜ್ಞತೆ ಉಳ್ಳವರಾಗಿರಬೇಕು, ಸ್ವಾದಿಷ್ಟವಾಗಿ ಅಡುಗೆ ಮಾಡಿದ್ದಕ್ಕೆ ಕಾಂಪ್ಲಿಮೆಂಟ್ ನೀಡಬೇಕು, ಅವರು ಕೆಲಸ ಮಾಡುವಾಗ ಮೆತ್ತಗೆ ಹೋಗಿ ಕಿವಿಯಲ್ಲಿ ಲವ್ ಯೂ ಅಂತ ಪಿಸುಗುಟ್ಟಿದರೆ ಅದು ಅವರಿಗೆ ನೀಡುವ ಥ್ರಿಲ್ ಬಣ್ಣಿಸಲಾಗುದು ಎಂದು ಡಾ ಸೌಜನ್ಯ ಹೇಳುತ್ತಾರೆ.

ಜಗಳ, ಮನಸ್ತಾಪಗಳಾದಾಗ ಸೈಲೆಂಟ್ ಟ್ರೀಟ್ಮೆಂಟ್ ಬೇಡ, ಸಮಸ್ಯೆಯನ್ನು ಮುಕ್ತವಾಗಿ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಗಂಡ-ಹೆಂಡಿರು, ಸಂಗಾತಿಗಳ ನಡುವೆ ಎಫೆಕ್ಟಿವ್ ಕಮ್ಯುನಿಕೇಷನ್ ಇರಬೇಕು ಅಂತ ಡಾ ಸೌಜನ್ಯ ಹೇಳುತ್ತಾರೆ.

ತಪ್ಪು ಮಾಡಿದಾಗ ಸಾರಿ ಅಂದರೆ, ಅದು ಸೃಷ್ಟಿಸುವ ಸಂಹವನವೇ ಬೇರೆ. ಕೆಲಸಕ್ಕೆ ಬಾರದ ಇಗೋಗಳಿಂದ ಏನೂ ಸಾಧಿಸಲಾಗದು ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:   ಹೊಸ ವರ್ಷದಂದು ನಾಡದೇವತೆ ಚಾಮುಂಡೇಶ್ವರಿಯ ಸನ್ನಿಧಾನಕ್ಕೆ ಅಭಿಮಾನಿಗಳೊಂದಿಗೆ ಆಗಮಿಸಿದ ಅಪ್ಪು; ವಿಡಿಯೋ ಇಲ್ಲಿದೆ

Follow us on