‘ಪಾದರಾಯ’ ಚಿತ್ರದ ಒನ್​ ಲೈನ್​ ಸ್ಟೋರಿ ಬಿಚ್ಚಿಟ್ಟ ಜಾಕ್​ ಮಂಜು  

| Updated By: ಗಂಗಾಧರ​ ಬ. ಸಾಬೋಜಿ

Updated on: Dec 05, 2022 | 10:22 PM

ಸ್ಯಾಂಡಲ್​ವುಡ್​ನ ನಿರ್ಮಾಪಕರಲ್ಲಿ ಒಬ್ಬರಾದ ಜಾಕ್​ ಮಂಜು ಅವರು ಇಂದು (ಡಿ. 5) ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದು, ಅದಕ್ಕೆ 'ಪಾದರಾಯ' ಎಂದು ಹೆಸರಿಡಲಾಗಿದೆ.

ಸ್ಯಾಂಡಲ್​ವುಡ್​ನ ನಿರ್ಮಾಪಕರಲ್ಲಿ ಒಬ್ಬರಾದ ಜಾಕ್​ ಮಂಜು ಅವರು ಇಂದು (ಡಿ. 5) ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದು, ಅದಕ್ಕೆ ‘ಪಾದರಾಯ’ (Paadaraya) ಎಂದು ಹೆಸರಿಡಲಾಗಿದೆ. ಟೈಟಲ್​ ಲಾಂಚ್​ ಮಾಡಿ ಮಾತನಾಡಿದ ಅವರು, ‘ಅಯೋಧ್ಯಯಲ್ಲಿ ನಡೆದ ಆಂಜನೇಯನ ವಿಚಾರವಾಗಿ ಈ ಕಥೆ ಇರಲಿದೆ’ ಎಂದು ‘ಪಾದರಾಯ’ ಚಿತ್ರದ ಒನ್​ ಲೈನ್​ ಸ್ಟೋರಿಯನ್ನು ಬಿಚ್ಚಿಟ್ಟರು. ಮೊದಲು ಕಥೆ ಕೇಳಿದ ಜಾಕ್​ ಮಂಜು ಅವರು ಇದು ಮಾಡಬೇಕಾಗಿರುವ ಚಿತ್ರ ಎಂದು ತಿರ್ಮಾನಿಸಿದರು. ಬಿಗ್​​ ಬಾಸ್​ ಖ್ಯಾತಿಯ ಡಿಜೆ ಚಕ್ರವರ್ತಿ ನಿರ್ದೇಶನ ಮಾಡಲಿದ್ದಾರೆ. ಅಜನೀಶ್​ ಲೋಕನಾಥ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಒಟ್ಟು ಐದು ಭಾಷೆಗಳಲ್ಲಿ ‘ಪಾದರಾಯ’ ಚಿತ್ರ ರೆಡಿಯಾಗುತ್ತಿದ್ದು, ಪ್ಯಾನ್​ ಇಂಡಿಯಾ ಮೂವೀ ಎಂದು ಹೇಳಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.