ಉತ್ತರ ಕನ್ನಡ: ಅಂಕೋಲದ ನಾಲ್ಕೈದು ಕುಡಿಯುವ ನೀರಿನ ಬಾವಿಗಳಲ್ಲಿ ಡೀಸೆಲ್ ಯುಕ್ತ ನೀರು, ಜನರ ಪರದಾಟ
ಅವರು ಸಮಸ್ಯೆಯನ್ನು ಪುರಸಭೆಯ ಅಧಿಕಾರಿಗಳಲ್ಲಿ ಹೇಳಿಕೊಂಡ ನಂತರ ಅವರು ಬಂದು ಪರಿಶೀಲನೆ ನಡೆಸಿದ್ದಾರೆ.
ಕಾರವಾರ: ಕುಡಿಯುವ ನೀರಿನ ಬಾವಿಯಲ್ಲಿ ಡೀಸೆಲ್ ಯುಕ್ತ (diesel-laced) ಅಥವಾ ಡೀಸೆಲ್ ವಾಸನೆಯುಳ್ಳ ನೀರನ್ನು ಯಾವತ್ತಾದರೂ ಕಂಡಿದ್ದೀರಾ? ಉತ್ತರ ಕನ್ನಡ ಜಿಲ್ಲೆಯ ಅಂಕೋಲದ (Ankola) ಮಠಾಕೇರಿ ಕ್ರಾಸ್ ಪ್ರದೇಶದ ನಾಲ್ಕೈದು ಬಾವಿಗಳಲ್ಲಿ ಡೀಸೆಲ್ ಯುಕ್ತ ನೀರು ಕಾಣಿಸಿದ್ದು ಸುತ್ತಮುತ್ತಲಿನ ನಿವಾಸಿಗಳು (residents) ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅವರು ಸಮಸ್ಯೆಯನ್ನು ಪುರಸಭೆಯ ಅಧಿಕಾರಿಗಳಲ್ಲಿ ಹೇಳಿಕೊಂಡ ನಂತರ ಅವರು ಬಂದು ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕಂತೂ ನೀರಲ್ಲಿ ಡೀಸೆಲ್ ಅಂಶ ಯಾಕೆ ಮತ್ತು ಹೇಗೆ ಕಾಣುತ್ತಿದೆ ಅನ್ನೋದು ನಿಗೂಢವಾಗೇ ಉಳಿದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos