‘ಪಾದರಾಯ’ ಚಿತ್ರದ ಒನ್ ಲೈನ್ ಸ್ಟೋರಿ ಬಿಚ್ಚಿಟ್ಟ ಜಾಕ್ ಮಂಜು
ಸ್ಯಾಂಡಲ್ವುಡ್ನ ನಿರ್ಮಾಪಕರಲ್ಲಿ ಒಬ್ಬರಾದ ಜಾಕ್ ಮಂಜು ಅವರು ಇಂದು (ಡಿ. 5) ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದು, ಅದಕ್ಕೆ 'ಪಾದರಾಯ' ಎಂದು ಹೆಸರಿಡಲಾಗಿದೆ.
ಸ್ಯಾಂಡಲ್ವುಡ್ನ ನಿರ್ಮಾಪಕರಲ್ಲಿ ಒಬ್ಬರಾದ ಜಾಕ್ ಮಂಜು ಅವರು ಇಂದು (ಡಿ. 5) ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದು, ಅದಕ್ಕೆ ‘ಪಾದರಾಯ’ (Paadaraya) ಎಂದು ಹೆಸರಿಡಲಾಗಿದೆ. ಟೈಟಲ್ ಲಾಂಚ್ ಮಾಡಿ ಮಾತನಾಡಿದ ಅವರು, ‘ಅಯೋಧ್ಯಯಲ್ಲಿ ನಡೆದ ಆಂಜನೇಯನ ವಿಚಾರವಾಗಿ ಈ ಕಥೆ ಇರಲಿದೆ’ ಎಂದು ‘ಪಾದರಾಯ’ ಚಿತ್ರದ ಒನ್ ಲೈನ್ ಸ್ಟೋರಿಯನ್ನು ಬಿಚ್ಚಿಟ್ಟರು. ಮೊದಲು ಕಥೆ ಕೇಳಿದ ಜಾಕ್ ಮಂಜು ಅವರು ಇದು ಮಾಡಬೇಕಾಗಿರುವ ಚಿತ್ರ ಎಂದು ತಿರ್ಮಾನಿಸಿದರು. ಬಿಗ್ ಬಾಸ್ ಖ್ಯಾತಿಯ ಡಿಜೆ ಚಕ್ರವರ್ತಿ ನಿರ್ದೇಶನ ಮಾಡಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಒಟ್ಟು ಐದು ಭಾಷೆಗಳಲ್ಲಿ ‘ಪಾದರಾಯ’ ಚಿತ್ರ ರೆಡಿಯಾಗುತ್ತಿದ್ದು, ಪ್ಯಾನ್ ಇಂಡಿಯಾ ಮೂವೀ ಎಂದು ಹೇಳಲಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos