ವಿಜಯಪುರದ ಬಸವನಬಾಗೇವಾಡಿಯಲ್ಲಿ ಹನುಮನ ಭಕ್ತನಾಗಿ ದೀಕ್ಷೆ ಪಡೆದ ಜಾಫರ್!
ಅವರು ಹನುಮ ದೀಕ್ಷೆ ಪಡೆದಿರುವರೆಂದು ಮತ್ತು ಪ್ರತಿದಿನ ಹಿಂದೂ ದೇವಾಲಯಗಳಲ್ಲಿ ನಡೆಯುವ ಪೂಜಾವಿಧಿಗಳಲ್ಲಿ ಭಾಗವಹಿಸುತ್ತಿದ್ದಾರೆಂದು ಸ್ಥಳೀಯರು ಹೇಳಿದ್ದಾರೆ.
ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ನರಸಗಿ ಗ್ರಾಮದ ಜಾಫರ್ (Jaffer) ಎನ್ನುವವರು ಹನುಮ ಮಾಲೆಯನ್ನು ಧರಿಸಿ ಭಾವೈಕ್ಯತೆಯನ್ನು ಪ್ರದರ್ಶಿಸಿದ್ದಾರೆ. ಇತರ ಹನುಮ ಭಕ್ತರೊಡನೆ ಜಾಫರ್ ಹನುಮನ (Hanuman) ಜಪದಲ್ಲಿ ತೊಡಗಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅವರು ಹನುಮ ದೀಕ್ಷೆ ಪಡೆದಿರುವರೆಂದು ಮತ್ತು ಪ್ರತಿದಿನ ಹಿಂದೂ ದೇವಾಲಯಗಳಲ್ಲಿ ನಡೆಯುವ ಪೂಜಾವಿಧಿಗಳಲ್ಲಿ ಭಾಗವಹಿಸುತ್ತಿದ್ದಾರೆಂದು ಸ್ಥಳೀಯರು ಹೇಳಿದ್ದಾರೆ. ಇಷ್ಟರಲ್ಲೇ ಜಾಫರ್ ಅಂಜನಾದ್ರಿ ಬೆಟ್ಟಕ್ಕೆ (Anjanadri Hill) ತೆರಳಿ ಹನುಮನಿಗೆ ಪೂಜೆ ಸಲ್ಲಿಸಲಿದ್ದಾರಂತೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ