ಯಜಮಾನ ಚಿತ್ರದ ಹಾಡಿಗೆ ಡಾನ್ಸ್ ಮಾಡಿದ ಶಾಸಕ ಬಿ.ದೇವೇಂದ್ರಪ್ಪ
ಜಗಳೂರು ತಾಲೂಕಿನ ರಸ್ತೆ ಮಾಚಿಕೆರೆ ಗ್ರಾಮದಲ್ಲಿ ನಡೆದ ಬಸವೇಶ್ವರ ಜಾತ್ರೆಯ ಕಾರ್ಯಕ್ರಮದಲ್ಲಿ, ಯಜಮಾನ ಚಿತ್ರದ "ನಮ್ಮ ಮನೆಯಲ್ಲಿ ದಿನವು ದಿನವೂ ಚೈತ್ರವೇ" ಹಾಡಿಗೆ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಡಾನ್ಸ್ ಮಾಡಿದ್ದಾರೆ.
ದಾವಣಗೆರೆ, ಡಿಸೆಂಬರ್ 29: ಜಗಳೂರು (Jagaluru) ತಾಲೂಕಿನ ರಸ್ತೆ ಮಾಚಿಕೆರೆ ಗ್ರಾಮದಲ್ಲಿ ನಡೆದ ಬಸವೇಶ್ವರ (Basaveshwar) ಜಾತ್ರೆಯ ಕಾರ್ಯಕ್ರಮದಲ್ಲಿ, ಯಜಮಾನ (Yajamana) ಚಿತ್ರದ “ನಮ್ಮ ಮನೆಯಲ್ಲಿ ದಿನವು ದಿನವೂ ಚೈತ್ರವೇ” ಹಾಡಿಗೆ ಜಗಳೂರು ಶಾಸಕ ಬಿ.ದೇವೇಂದ್ರಪ್ಪ (B Devendrappa) ಡಾನ್ಸ್ ಮಾಡಿದ್ದಾರೆ. ಜ್ಯೂನಿಯರ್ ವಿಷ್ಣುವರ್ಧನ ಹಾಗೂ ಕೆಲ ಯುವತಿಯರು ಹಾಡು ಹಾಡಿ ನರ್ತಿಸುವ ವೇಳೆ ಅವರ ಜೊತೆ ಶಾಸಕ ದೇವೇಂದ್ರಪ್ಪ ಹೆಜ್ಜೆ ಹಾಕಿದರು. ಶಾಸಕರ ಜೊತೆಗೆ ಕಾಂಗ್ರೆಸ್ ಮುಖಂಡ ಕೆಪಿ ಪಾಲಯ್ಯ, ಕಲ್ಲೇಶ್ ರಾಜ್ ಪಟೇಲ್ ಹಾಗೂ ಯುವ ಮುಖಂಡ ಬಿಸ್ತುವಳ್ಳಿ ಬಾಬು ಸಹ ಕುಣಿದು ಕುಪ್ಪಳಿಸಿದರು.
Published on: Dec 29, 2023 09:42 AM