ರೈತರ ಬಾಕಿ ಹಣ ಒಂದು ವಾರದಲ್ಲಿ ಬಿಡುಗಡೆ ಮಾಡದಿದ್ದರೆ ರಾಜೀನಾಮೆ ಸಲ್ಲಿಸುತ್ತೇನೆಂದ ಜಗಳೂರು ಶಾಸಕ ದೇವೇಂದ್ರಪ್ಪ

|

Updated on: Nov 18, 2023 | 10:45 AM

ಕಾರ್ಯದರ್ಶಿ ನೀಡಿದ ಸಬೂಬುಗಳನ್ನು ಕೇಳದೆ, ತಾನು ಸಚಿವರೊಂದಿಗೂ ಮಾತಾಡುವುದಾಗಿ ಹೇಳಿ ಒಂದು ವಾರದ ಅವಧಿಯಲ್ಲಿ ರೈತರ ಹಣ ಬಿಡುಗಡೆ ಮಾಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಹೇಳುತ್ತಾರೆ. ದೇವೇಂದ್ರಪ್ಪ ತಮ್ಮ ಪರ ಕಾಳಜಿವಹಿಸಿ ಮಾತಾಡಿದ್ದಕ್ಕೆ ರೈತರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸುತ್ತಾರೆ.

ದಾವಣಗೆರೆ: ಜನರು ತಮ್ಮ ಪ್ರತಿನಿಧಿಗಳನ್ನು ಆರಿಸೋದು ಈ ಕಾರಣಕ್ಕೆ. ಜಿಲ್ಲೆಯ ಜಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ ದೇವೇಂದ್ರಪ್ಪ (B Devendrappa) ಪ್ರತಿಭಟನಾನಿರತ ರೈತರ (protesting farmers) ಪರವಾಗಿ ನಿಂತು ಅವರಿಗೆ ಬಾಕಿಯಿರುವ ಹಣವನ್ನು ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರ ಸಮಕ್ಷಮದಲ್ಲೇ ಫೋನ್ ಮಾಡಿ ತಾಕೀತು ಮಾಡಿದ್ದು ಅಭಿನಂದನೀಯ. ವಿಷಯವೇನೆಂದರೆ, ರೈತರಿಂದ ರಾಗಿ (millets) ಖರೀದಿಸಿದ ಸರ್ಕಾರ ಅವರಿಗೆ ಹಣ ಪಾವತಿಸಿಲ್ಲ. ಕಂಗಾಲಾದ ರೈತರು ಜಗಳೂರುನಲ್ಲಿರುವ ಆಹಾರ ಇಲಾಖೆ ಗೋದಾಮಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಧಾವಿಸಿದ ದೇವೇಂದ್ರಪ್ಪ ಆಹಾರ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಫೋನ್ ಮಾಡಿ ವಿವರಣೆ ಕೇಳಿದ್ದಾರೆ. ಕಾರ್ಯದರ್ಶಿ ನೀಡಿದ ಸಬೂಬುಗಳನ್ನು ಕೇಳದೆ, ತಾನು ಸಚಿವರೊಂದಿಗೂ ಮಾತಾಡುವುದಾಗಿ ಹೇಳಿ ಒಂದು ವಾರದ ಅವಧಿಯಲ್ಲಿ ರೈತರ ಹಣ ಬಿಡುಗಡೆ ಮಾಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಹೇಳುತ್ತಾರೆ. ದೇವೇಂದ್ರಪ್ಪ ತಮ್ಮ ಪರ ಕಾಳಜಿವಹಿಸಿ ಮಾತಾಡಿದ್ದಕ್ಕೆ ರೈತರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 18, 2023 10:43 AM