Kaage Motte: ‘ನಮ್ಗೆಲ್ಲಾ ಯಾವ ಲವ್ ಸಿಗ್ತಿಲ್ವಲಾ..’ ಅಂತ ತಲೆ ಕೆಡಿಸ್ಕೊಂಡಿದ್ರಂತೆ ಜಗ್ಗೇಶ್; ಏನಿದು ಸಮಾಚಾರ?
Jaggesh: ತಮ್ಮ ಲವ್ ಲೈಫ್ ಬಗ್ಗೆ, ತಾವು ಶ್ರೀರಾಂಪುರದಲ್ಲಿ ಬೆಳೆಯುವ ಸಂದರ್ಭದ ಬಗ್ಗೆ ಕುತೂಹಲಕರ ಮಾಹಿತಿಗಳನ್ನು ಜಗ್ಗೇಶ್ ಹಂಚಿಕೊಂಡಿದ್ದಾರೆ.
ಚಂದನವನದಲ್ಲಿ ತಮ್ಮದೇ ಮಾದರಿಯ ಚಿತ್ರಗಳಿಂದ ಎಲ್ಲರ ಗಮನ ಸೆಳೆದವರು ಜಗ್ಗೇಶ್. ಇದೀಗ ಅವರ ಪುತ್ರ ಗುರುರಾಜ್ ಅವರ ನೂತನ ಚಿತ್ರ ‘ಕಾಗೆ ಮೊಟ್ಟೆ’ಯ ಕುರಿತು ಅವರು ಮಾತನಾಡುತ್ತಾ, ತಮ್ಮ ಹಳೆಯ ದಿನಗಳ ನೆನಪಿಗೆ ಜಾರಿದ್ದಾರೆ. ಶ್ರೀರಾಂಪುರದಲ್ಲಿ ಬೆಳೆಯುವಾಗ ಅವರಿಗೆ ಸ್ನೇಹಿತರಾಗಿದ್ದವರೆಲ್ಲಾ, ಇಂದು ಕುಖ್ಯಾತ ವ್ಯಕ್ತಿಗಳಾಗಿದ್ದಾರಂತೆ. ಮತ್ತೆ ಹಲವರು ಬೇರೆಯದೇ ಮಾದರಿಯಲ್ಲಿ ಗುರುತಿಸಿಕೊಂಡಿದ್ದಾರಂತೆ. ಆದರೆ ಅವರ ವೈಯಕ್ತಿಕ ಜೀವನದಲ್ಲಿ ಒಂದು ಸುಂದರ ಪ್ರೀತಿ ಇರ್ತಿತ್ತು. ನಾವೆಲ್ಲಾ ಅದನ್ನು ನೋಡಿ ಇವರಿಗೂ ಲವ್ ಎಲ್ಲಾ ಇರತ್ತಾ ಎಂದು ಆಶ್ಚರ್ಯ ಪಡುತ್ತಿದ್ದೆವು. ಜೊತೆಗೆ ನಮ್ಗೆಲ್ಲಾ ಯಾವ ಲವ್ ಸಿಗ್ತಿಲ್ವಲಾ ಎಂದು ತಲೆಕೆಡಿಸಿಕೊಳ್ಳುತ್ತಿದ್ದೆವು ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ. ಅವರ ಸುತ್ತಮುತ್ತ ಎಂಥವರಿದ್ದರು? ಜಗ್ಗೇಶ್ ಬೆಳೆದ ವಾತಾವರಣ ಹೇಗಿತ್ತು? ಈ ಎಲ್ಲವನ್ನೂ ಅವರು ಸಂದರ್ಶನದಲ್ಲಿ ವಿವರಿದ್ದಾರೆ.
‘ಕಾಗೆ ಮೊಟ್ಟೆ’ ಚಿತ್ರದಲ್ಲಿ ಗುರುರಾಜ್ ಜಗ್ಗೇಶ್ ಜೊತೆ ಕೆ. ಮಾದೇಶ್ ಹಾಗೂ ಹೇಮಂತ್ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ತನುಜಾ ಅವರು ಈ ಚಿತ್ರದ ನಾಯಕಿ. ಸಹ ನಿರ್ಮಾಪಕರಾಗಿ ಸುಬ್ಬರಾಯುಡು ಹಾಗೂ ಹೆಚ್.ಎನ್. ಶ್ರೀನಿವಾಸಯ್ಯ ಇವರ ಜೊತೆ ಕೈಜೋಡಿಸಿದ್ದಾರೆ. ಕೊಳ್ಳೇಗಾಲ, ಚಾಮರಾಜನಗರ ಅಲ್ಲದೆ ಬೆಂಗಳೂರಿನ ಹಲವಾರು ಸ್ಲಂಗಳಲ್ಲಿ ಚಿತ್ರದ ಶೂಟಿಂಗ್ ನಡೆಸಲಾಗಿದ್ದು, ಮೂವರು ಹುಡುಗರಿಗೆ ನಗರದಲ್ಲಿ ಬೆನ್ನೆಲುಬಾಗಿ ನಿಲ್ಲುವ ವೇಶ್ಯೆಯ ಪಾತ್ರವನ್ನು ನಟಿ ಸೌಜನ್ಯ ನಿರ್ವಹಿಸಿದ್ದಾರೆ. ಚಿತ್ರದಲ್ಲಿ 2 ಹಾಡುಗಳಿವೆ. ಶ್ರೀವತ್ಸ ಸಂಗೀತ ನಿರ್ದೇಶನ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ಕವಿರಾಜ್ ಸಾಹಿತ್ಯ ರಚಿಸಿದ್ದಾರೆ. ನಟ ಜಗ್ಗೇಶ್ ಒಂದು ಹಾಡು ಬರೆದಿರುವುದು ಮಾತ್ರವಲ್ಲದೆ, ಅದಕ್ಕೆ ತಾವೇ ದನಿಯಾಗಿದ್ದಾರೆ. ಪಿ.ಎಲ್. ರವಿ ಛಾಯಾಗ್ರಹಣ ಮಾಡಿದ್ದಾರೆ.
ಇದನ್ನೂ ಓದಿ:
ನಾಗ ಚೈತನ್ಯ-ಸಾಯಿ ಪಲ್ಲವಿ ಪಾಲಿಗೆ ಇದು ಬಿಗ್ ಡೇ; ಈಗಲಾದರೂ ಬರುತ್ತಾರಾ ಸಮಂತಾ?
(Jaggesh recalls his earlly days in Shivarampura in Kaage Motte press meet)