Totapuri: ಮಂತ್ರಿ ಮಾಲ್ ಜಾಗ ಮೊದಲು ಏನಾಗಿತ್ತು? ಹಿಂದಿನ ಘಟನೆ ಮೆಲುಕು ಹಾಕಿದ ಜಗ್ಗೇಶ್
Jaggesh | Totapuri: ಪ್ರತಿ ಬಾರಿಯೂ ನಟ ಜಗ್ಗೇಶ್ ಅವರು ಅಪರೂಪದ ಸಂಗತಿಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಹಳೇ ಬೆಂಗಳೂರಿನ ಕುರಿತು ಅವರು ಹೇಳಿದ ಈ ಮಾಹಿತಿ ಇಂಟರೆಸ್ಟಿಂಗ್ ಆಗಿದೆ.
ಹಾಡಿನ ಮೂಲಕ ಕೌತುಕ ಮೂಡಿಸಿರುವ ‘ತೋತಾಪುರಿ’ (Totapuri) ಚಿತ್ರದ ಪ್ರೀ-ರಿಲೀಸ್ ಇವೆಂಟ್ ಭಾನುವಾರ (ಸೆ.25) ಅದ್ದೂರಿಯಾಗಿ ನಡೆಯಿತು. ಈ ವೇದಿಕೆಯಲ್ಲಿ ನಟ ಜಗ್ಗೇಶ್ (Jaggesh) ಅವರು ಒಂದಷ್ಟು ಅಪರೂಪದ ಸಂಗತಿಗಳ ಬಗ್ಗೆ ಮಾತನಾಡಿದರು. ಬೆಂಗಳೂರಿನ ಮಲ್ಲೇಶ್ವರದಲ್ಲಿ ಬಾಲ್ಯ ಕಳೆದವರು ಜಗ್ಗೇಶ್. ಹಾಗಾಗಿ ಅವರಿಗೆ ಈ ಪ್ರದೇಶದ ಬಗ್ಗೆ ಚೆನ್ನಾಗಿ ತಿಳಿದಿದೆ. ‘ಈಗ ಮಂತ್ರಿ ಮಾಲ್ (Mantri Mall) ಇರುವ ಸ್ಥಳದಲ್ಲಿ ಮೊದಲು ರಾಜಾ ಮಿಲ್ ಇತ್ತು. ಈ ಜಾಗದ ಊಟವನ್ನೇ ತಿಂದು ನಾನು ಬೆಳೆದಿದ್ದು. ಅದರಲ್ಲಿ ನಮ್ಮ ಅಪ್ಪ ಕೂಲಿ ಕೆಲಸ ಮಾಡುತ್ತಿದ್ದರು. ಅಮ್ಮ ಊಟ ತಗೊಂಡು ಬರುತ್ತಿದ್ದರು. ಆ ಜಾಗದಲ್ಲಿ ನಾನೀಗ ನನ್ನ ಸಿನಿಮಾ ಬಗ್ಗೆ ಮಾತನಾಡುತ್ತಿದ್ದೇನೆ ಎಂದರೆ ತುಂಬ ಪುಣ್ಯ ಮಾಡಿದ್ದೇನೆ. ಇದೇ ನಿಜವಾದ ಬೆಳವಣಿಗೆ’ ಎಂದು ಜಗ್ಗೇಶ್ ಹೇಳಿದ್ದಾರೆ. ‘ತೋತಾಪುರಿ’ ಸಿನಿಮಾ ಸೆ.30ರಂದು ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ವಿಜಯ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ.