ಟೀಕೆಗೆ ಕ್ಯಾರೆ ಅನ್ನಲ್ಲ ಅಂತ ಬೊಮ್ಮಾಯಿ ಹೇಳಿದರೆ ಅದು ಭಂಡತನದ ಪ್ರತೀಕ - ಸಿದ್ದರಾಮಯ್ಯ

ಟೀಕೆಗೆ ಕ್ಯಾರೆ ಅನ್ನಲ್ಲ ಅಂತ ಬೊಮ್ಮಾಯಿ ಹೇಳಿದರೆ ಅದು ಭಂಡತನದ ಪ್ರತೀಕ – ಸಿದ್ದರಾಮಯ್ಯ

TV9 Web
| Updated By: Digi Tech Desk

Updated on:Sep 26, 2022 | 2:31 PM

ಮೈಸೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಟೀಕೆಗೆ ನಾನು ಕೇರ್ ಮಾಡೋನಲ್ಲ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರೆ ಅದು ಭಂಡತನವನ್ನು ತೋರುತ್ತದೆ ಎಂದು ಹೇಳಿದರು.

ಮೈಸೂರು:  ರಾಹುಲ್ ಗಾಂಧಿ (Rahul Gandhi) ಕರ್ನಾಟಕಕ್ಕೆ ಬಂದರೆ ಬಿಜೆಪಿ ಅನುಕೂಲವಾಗಲಿದೆ ಅಂತ ಬಿಜೆಪಿ ಹೇಳಿರುವುದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದರು. ರಾಹುಲ್ ಚುನಾವಣಾ ಪ್ರಚಾರ ಮಾಡುತ್ತಿಲ್ಲ. ಅವರು ಹೋದೆಡೆಯೆಲ್ಲ ಕಾಂಗ್ರೆಸ್ ಸೋಲುತ್ತದೆ ಅಂದರೆ ನರೇಂದ್ರ ಮೋದಿ (PM Narendra Modi) ಅವರು ಹೋದೆಡೆಯೆಲ್ಲ ಬಿಜೆಪಿ ಗೆಲ್ಲುತ್ತಾ? ಹಾಗಿದ್ದರೆ, ಪಂಜಾಬ್, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಯಾಕೆ ಗೆಲ್ಲಲಿಲ್ಲ ಅಂತ ಪ್ರಶ್ನಿಸಿದರು. ಮೈಸೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಟೀಕೆಗೆ ನಾನು ಕೇರ್ ಮಾಡೋನಲ್ಲ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರೆ ಅದು ಭಂಡತನವನ್ನು ತೋರುತ್ತದೆ ಎಂದು ಹೇಳಿದರು.

Published on: Sep 26, 2022 02:02 PM