ಧಾರವಾಡದಲ್ಲಿ ಜೈಲರ್ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ವಿರುದ್ಧ ಗಂಭೀರ ಆರೋಪ

Edited By:

Updated on: Jun 12, 2026 | 10:27 PM

ಮೃತ ಸಿದ್ದರಾಮಪ್ಪನ ಪತ್ನಿ ಲಕ್ಷ್ಮೀ, ಅಲೋಕ್ ಕುಮಾರ್ ಅವರೇ ನನ್ನ‌ ಗಂಡನ ಜೀವ ಪಡೆದರು. ಸಸ್ಪೆಂಡ್ ‌ಮಾಡಿದ್ದಾರೆ. ಮುಂದೆ ಜೈಲಿಗೆ ಕಳಿಸುತ್ತಾರೆ ಅಂತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊದಲು ಸಸ್ಪೆಂಡ್ ‌ಮಾಡಿದ್ದು, ಇದೀಗ ಮೈಸೂರಿಗೆ ವರ್ಗಾವಣೆ ‌ಮಾಡಿದ್ದರು. ಮೈಸೂರಿಗೆ ಕರ್ತವ್ಯಕ್ಕೆ ಹಾಜರಾಗಲು ಹೊರಟಿದ್ದರು. ಆದರೆ ತಂದೆ, ತಾಯಿ ಮುಖ ನೋಡಿ ಹೋಗುತ್ತೇನೆ ಅಂದಿದ್ದರು. ಆದರೆ ಇದೀಗ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ‌ ಮೇಲೆ ಕ್ರಮ ಆಗುತ್ತೆ ಏನು ಮಾಡಬೇಕು ಅನ್ನುತ್ತಿದ್ದರು. ಯಾವಾಗಲೂ ನನ್ನ ಅಲೋಕ್ ‌ಕುಮಾರ್ ಜೈಲಿಗೆ ‌ಕಳಿಸುತ್ತಾರೆ ಅನ್ನುತ್ತಿದ್ದರು ಎಂದು ಎಂದು ಆರೋಪಿಸಿದ್ದಾರೆ.

ಧಾರವಾಡ, (ಜೂನ್ 12): ಅಮಾನತುಗೊಂಡು ಬಳಿಕ ಧಾರವಾಡದಿಂದ ಮೈಸೂರಿಗೆ ವರ್ಗಾವಣೆಗೊಂಡಿದ್ದ ಜೈಲರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ಹೊಸ ಬಸ್ ನಿಲ್ದಾಣ ಬಳಿ ಕಾರಾಗೃಹದ ಕ್ವಾರ್ಟರ್ಸ್​ ನಲ್ಲಿ ನಡೆದಿದೆ. ಸಿದ್ದರಾಮಪ್ಪ ವಡ್ಡರ್(37) ಆತ್ಮಹತ್ಯೆ ಮಾಡಿಕೊಂಡ ಜೈಲರ್. ಕರ್ತವ್ಯಲೋಪ ಹಿನ್ನೆಲೆಯಲ್ಲಿ 2 ತಿಂಗಳ ಹಿಂದೆ ಸಿದ್ದರಾಮಪ್ಪನನ್ನು ಅಮಾನತ್ತು ಮಾಡಲಾಗಿತ್​ತು. ಬಳಿಕ ಧಾರವಾಡದಿಂದ ಮೈಸೂರಿಗೆ ವರ್ಗಾವಣೆ ಮಾಡಲಾಗಿತ್ತು. ಆದರೂ ಸಹ ಮೈಸೂರಿನಲ್ಲಿ ವರದಿ ಮಾಡಿಕೊಂಡಿರಲಿಲ್ಲ. ಬದಲಿಗೆ ನೇಣಿಗೆ ಶರಣಾಗಿದ್ದಾನೆ. ಇನ್ನು ಈ ಆತ್ಮಹತ್ಯೆಗೆ ಕಾರಗೃಹ ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಸಿದ್ದರಾಮಪ್ಪನ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರಕ್ರಿಯೆಸಿದ ಮೃತ ಸಿದ್ದರಾಮಪ್ಪನ ಪತ್ನಿ ಲಕ್ಷ್ಮೀ, ಅಲೋಕ್ ಕುಮಾರ್ ಅವರೇ ನನ್ನ‌ ಗಂಡನ ಜೀವ ಪಡೆದರು. ಸಸ್ಪೆಂಡ್ ‌ಮಾಡಿದ್ದಾರೆ. ಮುಂದೆ ಜೈಲಿಗೆ ಕಳಿಸುತ್ತಾರೆ ಅಂತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊದಲು ಸಸ್ಪೆಂಡ್ ‌ಮಾಡಿದ್ದು, ಇದೀಗ ಮೈಸೂರಿಗೆ ವರ್ಗಾವಣೆ ‌ಮಾಡಿದ್ದರು. ಮೈಸೂರಿಗೆ ಕರ್ತವ್ಯಕ್ಕೆ ಹಾಜರಾಗಲು ಹೊರಟಿದ್ದರು. ಆದರೆ ತಂದೆ, ತಾಯಿ ಮುಖ ನೋಡಿ ಹೋಗುತ್ತೇನೆ ಅಂದಿದ್ದರು. ಆದರೆ ಇದೀಗ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ‌ ಮೇಲೆ ಕ್ರಮ ಆಗುತ್ತೆ ಏನು ಮಾಡಬೇಕು ಅನ್ನುತ್ತಿದ್ದರು. ಯಾವಾಗಲೂ ನನ್ನ ಅಲೋಕ್ ‌ಕುಮಾರ್ ಜೈಲಿಗೆ ‌ಕಳಿಸುತ್ತಾರೆ ಅನ್ನುತ್ತಿದ್ದರು ಎಂದು ಎಂದು ಆರೋಪಿಸಿದ್ದಾರೆ.

Published on: Jun 12, 2026 10:27 PM
Loading...
Unable to load recommendations.
Follow Us