ಆಗಸದಲ್ಲಿ ಹಾರಾಡಿದ ಪುನೀತ್ ಹುಟ್ಟುಹಬ್ಬದ ಬ್ಯಾನರ್; ವಿಶೇಷ ರೀತಿಯಲ್ಲಿ ಅಪ್ಪುಗೆ ಶುಭಾಶಯ

| Updated By: shivaprasad.hs

Updated on: Mar 17, 2022 | 12:54 PM

Puneeth Rajkumar Birth Anniversary: ಪುನೀತ್ ರಾಜ್​ಕುಮಾರ್ ಜನ್ಮದಿನಕ್ಕೆ ಜಕ್ಕೂರು ಏರೋಡ್ರಮ್ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದೆ. ಬೆಂಗಳೂರಿನಲ್ಲಿ ಹೆಲಿಕಾಪ್ಟರ್​ನಲ್ಲಿ ಅಪ್ಪು ಬ್ಯಾನರ್ ಪ್ರದರ್ಶಿಸುವ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗಿದೆ.

ಪುನೀತ್ ಹುಟ್ಟುಹಬ್ಬಕ್ಕೆ ಜಕ್ಕೂರು ಏರೊಡ್ರೋಮ್​ನಿಂದ ವಿಶೇಷ ಶುಭಾಶಯ ಸಲ್ಲಿಸಲಾಗಿದೆ. ಹ್ಯಾಪಿ ಬರ್ತ್ ಡೆ ಪವರ್ ಸ್ಟಾರ್ ಎಂಬ ಪೋಸ್ಟರ್ ಹೊತ್ತು ಹೆಲಿಕಾಪ್ಟರ್ ಹಾರಾಡಿದೆ. ಇಂದು ಬೆಳಗ್ಗೆ 0930 ರಿಂದ 1130 ರವರೆಗೆ ಹೆಲಿಕಾಪ್ಟರ್ ಹಾರಾಡಿದೆ. ಸಂಜೆ ಕೂಡ 1600 ರಿಂದ 1800 ರವರೆಗೆ ಬ್ಯಾನರ್‌ ಹೊತ್ತು ಹೆಲಿಕಾಪ್ಟರ್ ಹಾರಾಟ ನಡೆಸಲಿದೆ. ವಿಧಾನಸೌಧದ ಸಮೀಪ ಹೆಲಿಕಾಪ್ಟರ್ ಬ್ಯಾನರ್ ಹೊತ್ತು ಹಾರಾಡಿದ ವಿಡಿಯೋ ಇಲ್ಲಿದೆ.

ಹೆಲಿಕಾಪ್ಟರ್ ಸಾಗಿದ ಮಾರ್ಗ ಹೀಗಿದೆ: 1. ಜಕ್ಕೂರಿನಿಂದ ಡಾ. ರಾಜ್‌ಕುಮಾರ್ ಸಮಾದಿ 20 ನಿಮಿಷಗಳು 2. ಓರಿಯನ್, ಸದಾಶಿವನಗರ, ಮಲ್ಲೇಶ್ವರಂ, ರಾಜಾಹಿನಗರ, ಮೆಜೆಸ್ಟಿಕ್ ಮತ್ತು ಗಾಂಧಿನಗರ ಸ್ಥಳದಿಂದ 40 ನಿಮಿಷಗಳು. 3. ಕೆ ಆರ್ ಮಾರುಕಟ್ಟೆ, ವಿ ವಿ ಪುರಂ, ಭಾನಶಂಕರಿ, ಮೈಸೂರು ರಸ್ತೆ ಗೋಪಾಲನ್ ಮಾಲ್, ಜೆಪಿ ನಗರ, ಸಿಲ್ಕ್ ಬೋರ್ಡ್, ಬೆಳ್ಳಂದೂರು, ದೊಮ್ಮಲೂರು, ಕೆ ಆರ್ ಪುರಂ, ಬಾಣಸವಾಡಿ, ಎಚ್‌ಬಿಆರ್ ಲೇಔಟ್, ಮನಾಯತ ಟೆಕ್ ಪಾರ್ಕ್, ಭಾರತೀಯ ಮಾಲ್ ಮತ್ತು ಜಕ್ಕೂರ್ ಏರೋಡ್ರೋಮ್ 60 ನಿಮಿಷಗಳು. ವಿಶೇಷವೆಂದರೆ ಈ ಸ್ಥಳಗಳಲ್ಲಿ ಮುಖ್ಯವಾಗಿ ಎಲ್ಲಾ ಥಿಯೇಟರ್‌ಗಳು ಮತ್ತು ಮಾಲ್‌ಗಳನ್ನು ಒಳಗೊಂಡಿದೆ. ಇದರಿಂದ ಅಭಿಮಾನಿಗಳಿಗೆ ಆಗಸದಲ್ಲಿ ಪುನೀತ್​ರನ್ನು ಕಣ್ತುಂಬಿಕೊಳ್ಳುವ ಅವಕಾಶ ದೊರೆತಿದೆ.

ಇದನ್ನೂ ಓದಿ:

ಶಿರಸಿ ಮಾರಿಕಾಂಬೆ ರಥದ ಬಳಿ ತಲುಪಿತು ಅಪ್ಪು ಫೋಟೋ; ಜಾತ್ರೆಯಲ್ಲಿ ಅಭಿಮಾನ ಮೆರೆದ ಪುನೀತ್​ ಫ್ಯಾನ್ಸ್​

Puneeth Rajkumar: ಪುನೀತ್ ಜತೆಗೆ ಹುಟ್ಟುಹಬ್ಬ ಆಚರಿಸುತ್ತಿದ್ದ ಕ್ಷಣಗಳನ್ನು ನೆನೆದ ಶಿವಣ್ಣ

Published on: Mar 17, 2022 12:49 PM