Bagalkot: ಪಿಎಸ್ ಐ ವಿರುದ್ಧ ಸಾರ್ವಜನಿಕವಾಗಿ ಕೂಗಾಡಿ ಸೀನ್ ಸೃಷ್ಟಿಸಿದ ಜಮಖಂಡಿ ಕಾಂಗ್ರೆಸ್ ಶಾಸಕ ಅನಂದ ನ್ಯಾಮಗೌಡ

Arun Kumar Belly

|

Updated on: Mar 16, 2023 | 2:34 PM

ಜಮಖಂಡಿಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಸವರಾಜ ಕೊಣ್ಣೂರ್ ಮೇಲೆ ಅದ್ಯಾಕೆ ಶಾಸಕರಿಗೆ ಅಷ್ಟು ಸಿಟ್ಟು ಅಸಮಾಧಾನವಿದೆಯೋ? ಅವರು ಪಿಎಸ್ ಐರನ್ನು ಏಕವಚನದಲ್ಲಿ ತೆಗಳಿ ನಿನ್ನ ನೋಡಿಕೊಳ್ಳುತ್ತೇನೆ ಅನ್ನುತ್ತಾ ಹೆದರಿಸುತ್ತಾರೆ.

ಬಾಗಲಕೋಟೆ: ಇದು ದರ್ಪದ ಪರಮಾವಧಿಯಲ್ಲದೆ ಮತ್ತೇನೂ ಅಲ್ಲ. ಅಧಿಕಾರದ ಮದ ತಲೆಗೇರಿದರೆ ಜನಪ್ರತಿನಿಧಿಗಳೆನಿಸಿಕೊಂಡವರು ಹೀಗೆ ಜಮಖಂಡಿ ಕಾಂಗ್ರೆಸ್ ಶಾಸಕ (Congress MLA) ಆನಂದ ನ್ಯಾಮಗೌಡರ (Anand Nyamagouda) ಹಾಗೆ ಸಾರ್ವಜಿಕವಾಗಿ ಕೂಗಾಡುತ್ತಾರೆ, ಮತ್ತು ಸರ್ಕಾರಿ ನೌಕರರ ಮೇಲೆ ಏರಿ ಹೋಗುತ್ತಾರೆ. ಜಮಖಂಡಿಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಸವರಾಜ ಕೊಣ್ಣೂರ್ (Basavaraj Konnur) ಮೇಲೆ ಅದ್ಯಾಕೆ ಅಷ್ಟು ಸಿಟ್ಟು ಅಸಮಾಧಾನವಿದೆಯೋ? ಶಾಸಕರು ಪಿಎಸ್ ಐರನ್ನು ಏಕವಚನದಲ್ಲಿ ತೆಗಳಿ ನಿನ್ನ ನೋಡಿಕೊಳ್ಳುತ್ತೇನೆ ಅನ್ನುತ್ತಾ ಹೆದರಿಸುತ್ತಾರೆ. ಒಂದು ಪಕ್ಷ ಪಿಎಸ್ ಐ ರಿಂದ ಪ್ರಮಾದವಾಗಿದ್ದರೂ ಹೀಗೆ ಬಹಿರಂಗವಾಗಿ ಕೂಗಾಡುವುದು ಯಾವ ಕನ್ನಡಿಗನಿಗೂ ಇಷ್ಟವಾಗುವುದಿಲ್ಲ ಮಾರಾಯ್ರೇ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada