3 ದಿನ ಸಾರಿ ಕೇಳಿದ್ರು ಪುನೀತ್; ಅದಕ್ಕೆ ಕಾರಣ ಆಗಿದ್ದ ಆ ಘಟನೆ ಬಗ್ಗೆ ವಿವರಿಸಿದ ‘ಜೇಮ್ಸ್’ ವಿಲನ್
Puneeth Rajkumar: ‘ಜೇಮ್ಸ್’ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ಅಭಿನಯಿಸುವ ಅವಕಾಶ ನಟ ಪ್ರಸನ್ನ ಅವರಿಗೆ ಸಿಕ್ಕಿತು. ಶೂಟಿಂಗ್ ಅನುಭವದ ಬಗ್ಗೆ ಅವರು ಈಗ ಮಾತನಾಡಿದ್ದಾರೆ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಗುಣದ ಬಗ್ಗೆ ಎಲ್ಲರೂ ಕೊಂಡಾಡುತ್ತಾರೆ. ಎಲ್ಲ ಕಲಾವಿದರನ್ನೂ ಸಮಾನಭಾವದಿಂದ ನೋಡುವ ಅವರ ವ್ಯಕ್ತಿತ್ವಕ್ಕೆ ಇಡೀ ಚಿತ್ರರಂಗವೇ ಸಲಾಂ ಎನ್ನುತ್ತದೆ. ಅಪ್ಪು ಹೀರೋ ಆಗಿ ನಟಿಸಿದ ಕೊನೆ ಸಿನಿಮಾ ‘ಜೇಮ್ಸ್’ (James Movie) ಮಾ.17ರಂದು ತೆರೆಕಂಡಿತು. ಅಭಿಮಾನಿಗಳಿಗೆ ಈ ಸಿನಿಮಾ ತುಂಬ ಇಷ್ಟ ಆಗಿದೆ. ಈ ಚಿತ್ರದಲ್ಲಿ ಹಲವಾರು ಕಲಾವಿದರು ನಟಿಸಿದ್ದಾರೆ. ನಟ ಪ್ರಸನ್ನ ಅವರು ಪುನೀತ್ ಜೊತೆ ಕಳೆದ ಕ್ಷಣಗಳನ್ನು ಈಗ ನೆನಪು ಮಾಡಿಕೊಂಡಿದ್ದಾರೆ. ‘ಅವರು ದೊಡ್ಡ ಸ್ಟಾರ್. ಅವರ ಜೊತೆ ಹೇಗೆ ನಟಿಸೋದು ಎಂಬ ಭಯ ನನಗೂ ಇತ್ತು. ಆದರೆ ಮೊದಲ ದಿನವೇ ಅವರ ಮಾತು ಕೇಳಿ ಖುಷಿ ಆಯ್ತು. ಶೂಟಿಂಗ್ ವೇಳೆ ನಡೆದ ಒಂದು ಘಟನೆ ಬಗ್ಗೆ ಹೇಳಬೇಕು. 3ರಿಂದ 4 ದಿನ ಒಂದು ಫೈಟ್ ಸೀನ್ ಶೂಟ್ ಮಾಡಿದ್ವಿ. ಅಪ್ಪು ಸರ್ ವೇಗಕ್ಕೆ ನಾವು ಮ್ಯಾಚ್ ಮಾಡೋಕೆ ಆಗಲ್ಲ. ಆದ್ದರಿಂದ ಆಕಸ್ಮಿಕವಾಗಿ ಅವರಿಂದ ನನಗೆ ಒಂದು ಏಳು ಬಿತ್ತು. ನನಗೆ ನೋವು ಆಗಲಿಲ್ಲ. ಆದರೂ ಅವರು ನೊಂದುಕೊಂಡರು. ನೋವಾಗಿದೆಯಾ ಅಂತ 2ರಿಂದ 3 ದಿನ ಅದನ್ನೇ ಕೇಳಿದರು. ಸಣ್ಣ ಮಗು ಥರ ಮತ್ತೆ ಮತ್ತೆ ಬಂದು ಸಾರಿ ಕೇಳಿದ್ರು. ಅವರ ಮನಸ್ಸು ಎಷ್ಟು ಸೌಮ್ಯವಾಗಿತ್ತು ಎಂಬುದು ಇದರಿಂದ ಗೊತ್ತಾಗುತ್ತದೆ. ಅಂಥವರ ಜೊತೆ ನಟಿಸುವ ಚಾನ್ಸ್ ಸಿಕ್ಕಿದ್ದಕ್ಕೆ ತುಂಬ ಖುಷಿ ಇದೆ’ ಎಂದಿದ್ದಾರೆ ನಟ ಪ್ರಸನ್ನ. ಈ ಚಿತ್ರಕ್ಕೆ ಚೇತನ್ ಕುಮಾರ್ (Director Chethan Kumar) ನಿರ್ದೇಶನ ಮಾಡಿದ್ದು, ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ:
ಈಗ ಜನರು ಯಾರಲ್ಲಿ ಪುನೀತ್ ಅವರನ್ನು ಕಾಣ್ತಾರೆ? ಉತ್ತರ ನೀಡಿದ ಯುವ ರಾಜ್ಕುಮಾರ್
ಪುನೀತ್ ನಾಮಫಲಕ, ಕನ್ನಡ ಭಾವುಟಕ್ಕೆ ಅವಮಾನ; ಕಿಡಿಗೇಡಿಗಳ ಕೃತ್ಯಕ್ಕೆ ಸಿಸಿಟಿವಿ ದೃಶ್ಯವೇ ಸಾಕ್ಷಿ